ರಾಯಚೂರು: ಮೊಬೈಲ್ ಟವರ್‌ಗಳ ಬ್ಯಾಟರಿ ಕಳ್ಳತನ ಮಾಡುವ ಆರೋಪಿಗಳನ್ನು ಬಂಧಿಸುವಲ್ಲಿ ಸಿಂಧನೂರು ಗ್ರಾಮೀಣ ಪೊಲೀಸರು ಯಶ್ವಸಿಯಾಗಿದ್ದಾರೆ.
ಸಿಂಧನೂರು ಗ್ರಾಮೀಣ ಠಾಣೆ ಮತ್ತು ಬಳಗಾನೂರು ಠಾಣೆ ವ್ಯಾಪ್ತಿಯಲ್ಲಿ ಬ್ಯಾಟರಿ ಕಳ್ಳತನ ಕುರಿತು 10 ಪ್ರಕರಣಗಳು ದಾಖಲಾಗಿದ್ದವು. ಕಳ್ಳರ ಬಂಧಿಸಲು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹರಿಬಾಬು ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಧನೂರಿನ ಜನತಾ ಕಾಲೋನಿ ನಿವಾಸಿಗಳಾದ ರಾಘವೇಂದ್ರ, ಸಿಕಂದರ್, ಅಕ್ಬರ್, ಅತಾವುಲ್ಲಾ, ಜಮೀರ್ ಪಾಷಾ ಎಂಬುವರನ್ನು ಬಂಧಿಸಿ, ಆರೋಪಿಗಳಿಂದ 38 ಬ್ಯಾಟರಿಗಳು, 57 ಸಾವಿರ ರೂಪಾಯಿ ನಗದು ಹಾಗೂ ಟಾಟಾ ಏಸ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ.ವೇದಮೂರ್ತಿ ತನಿಖಾ ತಂಡದ ಸದಸ್ಯರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.