ರಾಯಚೂರು: ನಗರದಲ್ಲಿ ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ 9 ಜನರನ್ನ ಬಂಧಿಸಿದ್ದಾರೆ.
ನಗರದ ಕೆ.ಇ.ಬಿ ಕಾಲೋನಿ ಬಳಿ ಜೂಜಾಟ ಆಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ 9 ಜನರನ್ನ ಬಂಧಿಸಿ, 9,160 ನಗದನ್ನು ಜಪ್ತಿ ಮಾಡಲಾಗಿದೆ.
ಈ ಆಟದಲ್ಲಿ ರಾಯಚೂರಿನ ಜೆಸ್ಕಾಂನಲ್ಲಿ ಕಾರ್ಯ ನಿರ್ವಹಿಸುವ ಜೆಇ, ಲೈನ್ ಮ್ಯಾನ್ ಗಳು, ಮೀಟರ್ ರೀಡರ್, ಪರಿಚಾರಕ ಕೂಡ ಭಾಗಿಯಾಗಿದ್ದರು ಎನ್ನಲಾಗ್ತಿದೆ. ಈ ಕುರಿತು ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.