ETV Bharat / state

ಪೆಟ್ರೋಲ್ ಬಾಂಬ್ ಹಾಕುವುದಾಗಿ ಬೆದರಿಕೆ ಹಾಕಿದ್ದ ಯುವಕನ ಬಂಧನ

ವ್ಯಾಪಾರಿಯೊಬ್ಬನಿಗೆ ಪೆಟ್ರೋಲ್ ಬಾಂಬ್ ಹಾಕುವುದಾಗಿ ಬೆದರಿಸಿ 10 ಲಕ್ಷ ಹಣದ ಬೇಡಿಕೆ ಇಟ್ಟಿದ್ದ ಯುವಕನನ್ನು ಸಿರವಾರ ಪೊಲೀಸರು ಬಂಧಿಸಿದ್ದಾರೆ.

young man arrest
ಯುವಕನ ಬಂಧನ
author img

By

Published : Mar 1, 2021, 1:26 PM IST

ರಾಯಚೂರು: ಪೆಟ್ರೋಲ್ ಬಾಂಬ್ ಹಾಕುವುದಾಗಿ ಬೆದರಿಸಿ ಹಣದ ಬೇಡಿಕೆ ಇಟ್ಟಿದ್ದ ಯುವಕನನ್ನು ಸಿರವಾರ ಪೊಲೀಸರು ಬಂಧಿಸಿದ್ದಾರೆ.

ಯುವಕ ಜಿಲ್ಲೆಯ ಸಿರವಾರ ಪಟ್ಟಣದ ವ್ಯಾಪಾರಿ ಅಚ್ಚಾ ಅಮರೇಶಪ್ಪ ಎನ್ನುವವರಿಗೆ ಸುಮಾರು 10 ಲಕ್ಷ ನೀಡಬೇಕು. ಇಲ್ಲದಿದ್ದರೆ ಪೆಟ್ರೋಲ್ ಬಾಂಬ್ ಹಾಕುವುದಾಗಿ ಬೆದರಿಕೆ ಸಂದೇಶ ಕಳುಹಿಸಿದ್ದಾನೆ. ಅಲ್ಲದೇ ಅವರ ಮನೆ ಮುಂದೆ ಪಟಾಕಿ ಸಿಡಿಸಲಾಗಿತ್ತು. ಇದರಿಂದ ಮನೆಯವರು ಗಾಬರಿಗೊಂಡು, ಸ್ಥಳೀಯ ಠಾಣೆಗೆ ದೂರು ನೀಡಿದ್ದರು.

ಯುವಕನಿಗೆ ಥಳಿತ

ದೂರಿನನ್ವಯ ತನಿಖೆ ನಡೆಸಿದ ಪೊಲೀಸರು ಕಳೆದ ಎರಡು ದಿನಗಳಲ್ಲಿ ದೇವದುರ್ಗ ತಾಲೂಕಿನ ನಾಗಡದಿನ್ನಿ ಗ್ರಾಮದ ಆರೋಪಿ ಯುವಕ ರಾಜಶೇಖರ ಸಿದ್ದನಗೌಡನನ್ನು ಬಂಧಿಸಿದ್ದಾರೆ.

ಆರೋಪಿ ಜಾಗಟಗಲ್ ಗ್ರಾಮದ ಹೊರವಲಯದಲ್ಲಿ ಸಿಕ್ಕಿ ಬಿದ್ದಿದ್ದಾನೆ ಈ ವೇಳೆ, ಕುಟುಂಬಸ್ಥರಿಗೆ ಸಿಕ್ಕ ಯುವಕನಿಗೆ ಥಳಿಸಲಾಗಿದೆ. ಇನ್ನು ಬಂಧಿತ ಆರೋಪಿ ಅಚ್ಚಾ ಅಮರೇಶಪ್ಪ ಎನ್ನುವವರಲ್ಲಿ ವ್ಯಾಪಾರ ವ್ಯವಹಾರ ನಡೆಸುತ್ತಿದ್ದ, ಆದ್ರೆ ತನಗೆ ಮೋಸ ಮಾಡಿದ್ದಾರೆ ಎಂದು ಸೇಡಿಗೆ ಮೊಬೈಲ್​ನಲ್ಲಿ ಆ್ಯಪ್ ವೊಂದನ್ನ ಬಳಿಸಿ ಧ್ವನಿ ಬದಲಾಯಿಸಿ ಮಾತನಾಡಿ ಜೀವ ಬೆದರಿಕೆ ಹಾಕುವ ಮೂಲಕ ಹಣದ ಬೇಡಿಕೆಯಿಟ್ಟಿದ್ದಾನೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಸದ್ಯ ಸಿರವಾರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.