ರಾಯಚೂರು: ಜಿಲ್ಲೆ ವಿದ್ಯುತ್ ಉತ್ಪಾದಿಸುವ ಪ್ರಮುಖ ಶಕ್ತಿ ಕೇಂದ್ರವಾಗಿದೆ. ಇಲ್ಲಿನ ಕಲ್ಲಿದ್ದಲು ಆಧಾರಿತ ಬೃಹತ್ ಕೇಂದ್ರದಿಂದ ವಿದ್ಯುತ್ ಉತ್ಪಾದನೆಗೆ ಎಷ್ಟು ಪ್ರಾಮುಖ್ಯತೆ ನೀಡಲಾಗುತ್ತೋ ಅಷ್ಟೇ ಪ್ರಾಮುಖ್ಯತೆಯನ್ನ ಪರಿಸರ ಸಂರಕ್ಷಣೆಗೆ ಒದಗಿಸಬೇಕು. ಈ ನಿಟ್ಟಿನಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಪರಿಸರ ರಕ್ಷಣೆ ಮಾಡುವಂತೆ ಎಫ್ಜಿಡಿ ವ್ಯವಸ್ಥೆಯನ್ನ ಅಳವಡಿಸಬೇಕಾದ ಅನಿವಾರ್ಯತೆ ಬಂದಿದೆ.
ಬಿಸಿಲೂರು ರಾಯಚೂರು ಜಿಲ್ಲೆಯ ಶಕ್ತಿನಗರದ ರಾಯಚೂರು ಬೃಹತ್ ಶಾಖೋತ್ಪನ್ನ ಕೇಂದ್ರ (ಆರ್ಟಿಪಿಎಸ್) 1720 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 210 ಮೆಗಾವ್ಯಾಟ್ ಉತ್ಪಾದಿಸುವ 7 ಘಟಕಗಳು ಮತ್ತು 250 ಮೆಗಾವ್ಯಾಟ್ ಉತ್ಪಾದಿಸುವ ಒಂದು ಘಟಕ ಹೊಂದಿದ್ದು, ಕಲ್ಲಿದ್ದಲು ಆಧಾರಿತ ಕೇಂದ್ರವಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸುವ ಹೆಗ್ಗಳಿಕೆ ಇದೆ. ಅದೇ ರೀತಿ ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ತಡೆಗಟ್ಟುವಲ್ಲಿ ಲೋಪವಿದೆ ಎನ್ನುವ ಆರೋಪ ಸಹಯಿದೆ. ಈ ನಿಟ್ಟಿನಲ್ಲಿ ಪರಿಸರ ಮತ್ತು ಅರಣ್ಯ ಸಚಿವಾಲಯ ರೂಪಿಸಿದ ನಿಯಮಾನುಸರ ಆರ್ಟಿಪಿಎಸ್ ಕೇಂದ್ರಕ್ಕೆ ಫ್ಯೂಲ್ ಗ್ಯಾಸ್ ಡಿಸ್ ಸಾಲ್ವೇಂಷನ್ ವ್ಯವಸ್ಥೆಯನ್ನು ಅಳವಡಿಸಲು ಮುಂದಾಗಿದೆ.
ಇನ್ನೂ 2015 ರಲ್ಲಿ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಪರಿಸರ ರಕ್ಷಣಾ ಕಾಯ್ದೆ ತಿದ್ದುಪಡಿ ನಿಯಮಗಳ ಕಾಯಿದೆ ಅನ್ವಯ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ಕೇಂದ್ರಗಳ ಚಿಮಣಿಯಿಂದ ಹೊರ ಬರುವ ಸಲ್ಫರ್ ಡೈ ಆಕ್ಸೈಡ್, ಮೋನೋ ಡೈ ಆಕ್ಸೈಡ್ ಸೇರಿದಂತೆ ವಾತಾವರಣದ ಮೇಲೆ ದುಷ್ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಎಫ್ಜಿಡಿ ವ್ಯವಸ್ಥೆಯನ್ನು ಕಡ್ಡಾಯವಾಗಿ ಅನುಸರಿಸಬೇಕಾಗಿದೆ. ಹೀಗಾಗಿ ಆರ್ಟಿಪಿಎಸ್ಗೆ ತಾಂತ್ರಿಕ ತಜ್ಞರ ತಂಡ ಭೇಟಿ ನೀಡಿ ಘಟಕದಲ್ಲಿರುವ ಚಿಮಣಿಗಳ ಎತ್ತರ ಅಳತೆ ಮತ್ತು ಪರಿಸರ ಇಲಾಖೆ ನಿಯಮಾವಳಿಗಳಂತೆ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತಂತೆ ಕಾರ್ಯಪಾಲಕ ಅಭಿಯಂತರ ಶ್ರೀನಿವಾಸ ನೇತೃತ್ವದಲ್ಲಿ ಐದು ಜನ ತಜ್ಞರ ತಂಡ ಮಾಹಿತಿಯನ್ನ ಕಲೆ ಹಾಕಲಾಗಿದೆ.
ಆರ್ಟಿಪಿಎಸ್ ಘಟಕ ಒಂದಕ್ಕೆ ಎಫ್ಜಿಡಿ ಅಳವಡಿಸಲು ಸುಮಾರು 800 ಕೋಟಿ ರೂ. ವೆಚ್ವವಾಗಲಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿ ಹಂತದಲ್ಲಿದೆ. ಆರಂಭದಲ್ಲಿ ಗುಣಮಟ್ಟ ಖಾತ್ರಿ ಯೋಜನೆಯನ್ನು ರೂಪಿಸಿ ಮೊದಲ ಹಂತದಲ್ಲಿ 210 ಮೆ.ವ್ಯಾ ವಿದ್ಯುತ್ ಉತ್ಪಾದಿಸುವ ಒಂದು ಮತ್ತು ಎರಡನೇ ಘಟಕದಲ್ಲಿ ನೂತನ ವ್ಯವಸ್ಥೆ ಅಳವಡಿಸಲು ಉದ್ದೇಶಿಸಲಾಗಿದೆ ಎನ್ನಲಾಗುತ್ತಿದೆ.
ಇನ್ನು ಕೇಂದ್ರ ಪರಿಸರ ಸಚಿವಾಲಯ ನಿಯಮಗಳಂತೆ 2017ರ ವೇಳೆಗೆ ದೇಶದ ಎಲ್ಲಾ ಕಲ್ಲಿದ್ದಲು ಆಧಾರಿತ ಘಟಕಗಳು ಎಫ್ಜಿಡಿ ಅಳವಡಿಕೆ ಮಾಡಿಕೊಳ್ಳಬೇಕಿತ್ತು. ಆದರೆ ರಾಜ್ಯದಲ್ಲಿ ಮೊದಲ ಬಾರಿಗೆ ಕೋಟ್ಯಾಂತರ ರೂ. ವ್ಯಯ ಮಾಡಿ ಪರಿಸರ ರಕ್ಷಣೆಗೆ ಕರ್ನಾಟಕ ವಿದ್ಯುತ್ ನಿಗಮ ಮುಂದಾಗಿದೆ.
ಒಟ್ಟಿನಲ್ಲಿ ಹೊಸ ವ್ಯವಸ್ಥೆಯ ಅಳವಡಿಕೆಯಿಂದ ಲವಣಾಂಶಗಳ ಕುರಿತು ಖಚಿತ ಮಾಹಿತಿ ದೊರೆಯಲಿದೆ. ಪರಿಸರದ ಮೇಲೆ ಬೀರುತ್ತಿರುವ ದುಷ್ಪಾರಿಣಾಮಗಳನ್ನ ಆನ್ಲೈನ್ ಸಹಾಯದಿಂದ ಪ್ರತಿ ನಿತ್ಯ ಸಂಗ್ರಹಿಸುವ ವ್ಯವಸ್ಥೆ ಚಾಲ್ತಿಯಲ್ಲಿದೆ. ಗಾಳಿ, ಹಾರೂ ಬೂದಿಯಿಂದ ವಾಯು ಮಾಲಿನ್ಯದ ಮೇಲಾಗುವ ದುಷ್ಪರಿಣಾಮಗಳ ನಿಯಂತ್ರಣ ಸಾಧ್ಯವಾಗಲಿದ್ದು, ಮುಂಬರುವ 25 ವರ್ಷಗಳವರೆಗೆ ಎದುರಾಗುವ ಮಾಲಿನ್ಯ ನಿಯಂತ್ರಣಕ್ಕೂ ಪೂರಕ ಅಂಶಗಳ ಮಾಹಿತಿಯನ್ನು ಪಡೆಯುವುದಕ್ಕೆ ನೆರವಾಗಲಿದೆ. ಅಲ್ಲದೇ ಪರಿಸರ ಸಚಿವಾಲಯ ಕಲ್ಲಿದ್ದಲು ಆಧಾರಿತ ಘಟಕಗಳಿಗೆ ಅಳವಡಿಸಲಾಗಿರುವ ಚಿಮಣಿ ಎತ್ತರ, ಬಾಯ್ಲರ್, ನೀರು ಸೇರಿದಂತೆ ಪ್ರತಿ ಹಂತದಲ್ಲಿಯೂ ಮಾಹಿತಿಯನ್ನು ಸಂಗ್ರಹಿಸಿವುದರಿಂದ ಮಾಲಿನ್ಯ ತಡೆಗಟ್ಟಲು ಪರಿಣಾಮಕಾರಿ ವ್ಯವಸ್ಥೆ ಜಾರಿಯಾಗುವ ಸಾಧ್ಯತೆಯಿದೆ.