ETV Bharat / state

ರೈತರ ಸಮಸ್ಯೆ ಬಗೆಹರಿಸುವಂತೆ ಮುಖ್ಯಮಂತ್ರಿಗೆ ಮನವಿ - ರಾಜಶೇಖರ ಡಂಬಳ

ರಾಯಚೂರಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ನೇತೃತ್ವದಲ್ಲಿ ಶುಕ್ರವಾರ ಸಹಾಯಕ ಆಯುಕ್ತ ರಾಜಶೇಖರ್​ ಡಂಬಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

Appeal to CM to solve farmers' problem
ರೈತರ ಸಮಸ್ಯೆ ಬಗೆಹರಿಸುವಂತೆ ಮುಖ್ಯಮಂತ್ರಿಗೆ ಮನವಿ
author img

By

Published : Jun 12, 2020, 8:56 PM IST

ರಾಯಚೂರು : ಜಿಲ್ಲೆಯ ಲಿಂಗಸುಗೂರು ಸೇರಿದಂತೆ ಇತರೆ ತಾಲ್ಲೂಕುಗಳ ರೈತರಿಗೆ ಸರ್ಕಾರಿ ಸೌಲಭ್ಯ ಕಲ್ಪಿಸಿ, ಬೆಂಬಲ ಬೆಲೆ, ಬೆಳೆ ಖರೀದಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರು ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ನೇತೃತ್ವದಲ್ಲಿ ಶುಕ್ರವಾರ ಸಹಾಯಕ ಆಯುಕ್ತ ರಾಜಶೇಖರ್​​ ಡಂಬಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಪ್ರಧಾನಿ ಪ್ಯಾಕೇಜ್​​ನಲ್ಲಿ ಪ್ರತಿ ರೈತರಿಗೆ ರೂ. 25ಸಾವಿರ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ಹಾನಿ ಸಂಬಂಧಿಸಿದಂತೆ ಸ್ಥಳ ಸಮೀಕ್ಷೆ ನಿಖರವಾಗಿ ಮಾಡಿಲ್ಲ. ರೈತ ನಾಟಿ ಮಾಡಿದ ಬೆಳೆಗಳ ಕುರಿತು ಪಹಣಿಯಲ್ಲಿ ನಮೂದಿಸಿಲ್ಲ. ಇಂತಹ ಲೋಪದೋಷ ಸರಿಪಡಿಸಿ ದರ ಸಿಗದಿ, ನಷ್ಟಕ್ಕೆ ಒಳಗಾದ ಎಲ್ಲರಿಗೂ ಪರಿಹಾರ ನೀಡಲು ಆಗ್ರಹಿಸಿದರು.

ಪ್ರವಾಹ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ ನಡುಗಡ್ಡೆ ಸಂತ್ರಸ್ತರಿಗೆ ಇಂದಿಗೂ ಪರಿಹಾರ ನೀಡಿಲ್ಲ ಹಾಗೂ ಅಗತ್ಯ ಸೌಲಭ್ಯ ಕಲ್ಪಿಸಿಲ್ಲ. ಎನ್​​ಆರ್​ಬಿಸಿ ರಾಂಪೂರ್​ ಏತ ನೀರಾವರಿ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಭೂ ಪರಿಹಾರ ನೀಡುವುದು ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.