ETV Bharat / state

ರಾಯಚೂರು: ಶುಲ್ಕ ಹೆಚ್ಚಳ ಖಂಡಿಸಿ ಎಪಿಎಂಸಿ ವರ್ತಕರಿಂದ ಪ್ರತಿಭಟನೆ

author img

By

Published : Dec 21, 2020, 1:52 PM IST

ಎಪಿಎಂಸಿಯಲ್ಲಿ ಈ ಮೊದಲು 25 ಪೈಸೆ ಶುಲ್ಕ ವಿಧಿಸಲಾಗುತ್ತಿತ್ತು. ಆದ್ರೆ ರಾಜ್ಯ ಸರ್ಕಾರ ಶುಲ್ಕವನ್ನ 1 ರೂಪಾಯಿಗೆ ಹೆಚ್ಚಿಸಿದೆ. ಇದನ್ನು ಖಂಡಿಸಿ ವರ್ತಕರು ಮಾರುಕಟ್ಟೆ ಬಂದ್​ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ.

APMC merchants Protest  in Raichur
ಶುಲ್ಕ ಹೆಚ್ಚಳ ಖಂಡಿಸಿ ಎಪಿಎಂಸಿ ಮಾರುಕಟ್ಟೆ ಬಂದ್​

ರಾಯಚೂರು: ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಡೆಯುವ ವ್ಯಾಪಾರ ವಹಿವಾಟಿನ ಶುಲ್ಕು ಹೆಚ್ಚಳ ಮಾಡಿರುವ ಸರ್ಕಾರದ ಕ್ರಮ ಖಂಡಿಸಿ ರಾಯಚೂರು ಎಪಿಎಂಸಿ ವರ್ತಕರು ಮಾರುಕಟ್ಟೆ ಬಂದ್​ ಮಾಡಿದ್ದಾರೆ.

ಶುಲ್ಕ ಹೆಚ್ಚಳ ಖಂಡಿಸಿ ಎಪಿಎಂಸಿ ವರ್ತಕರಿಂದ ಪ್ರತಿಭಟನೆ..

ನಗರದ ಹತ್ತಿ ಮಾರುಕಟ್ಟೆಯ ವ್ಯಾಪಾರ-ವಹಿವಾಟು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಎಪಿಎಂಸಿಯಲ್ಲಿ ಈ ಮೊದಲು 25 ಪೈಸೆ ಶುಲ್ಕ ವಿಧಿಸಲಾಗುತ್ತಿತ್ತು. ಆದ್ರೆ ರಾಜ್ಯ ಸರ್ಕಾರ ಶುಲ್ಕವನ್ನ 1 ರೂಪಾಯಿಗೆ ಹೆಚ್ಚಿಸಿದೆ. ಇದರಿಂದ ವರ್ತಕರಿಗೆ ತೊಂದರೆಯಾಗಲಿದೆ. ಸರ್ಕಾರ ವಿಧಿಸಿರುವ 1 ರೂ. ಶುಲ್ಕವನ್ನ ಹಿಂಪಡೆಯಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ವರ್ತಕರ ಈ ಹೋರಾಟದಿಂದ ಎಪಿಎಂಸಿ ವ್ಯಾಪಾರ ವಹಿವಾಟು ಇಲ್ಲದೆ ಬಣ ಬಣ ಎನ್ನುತ್ತಿದೆ. ಜತೆಗೆ ರೈತರು ದೂರದ ಊರುಗಳಿಂದ ಬೆಳೆಯನ್ನ ಮಾರಾಟ ಮಾಡಲು ಸಾಧ್ಯವಾಗದೆ ತೊಂದರೆ ಅನುಭವಿಸುವಂತಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.