ETV Bharat / opinion

ಭಾರತದ ನೆರವು ಪಡೆದು, ದೇಶಕ್ಕೆ ಸಮಸ್ಯೆಯಾಗಿರುವ ನೆರೆಹೊರೆಯ ರಾಷ್ಟ್ರಗಳು: ಇಲ್ಲಿವೆ ಕಾರಣಗಳು - Indias troubled neighborhood - INDIAS TROUBLED NEIGHBORHOOD

ಭಾರತದ ನೆರೆಯ ರಾಷ್ಟ್ರಗಳು ಆರ್ಥಿಕ, ರಾಜಕೀಯ, ಭೌಗೋಳಿಕ ಸಮಸ್ಯೆಗಳಿಗೆ ಸಿಲುಕಿವೆ. ಭಾರತದಿಂದ ನೆರವು ಪಡೆದಾಗ್ಯೂ ಆ ರಾಷ್ಟ್ರಗಳ ಹೊಸ ನಾಯಕರು ಅಷ್ಟಾಗಿ ಉತ್ತಮ ಸಂಬಂಧ ಉಳಿಸಿಕೊಂಡಿಲ್ಲ. ಇದರಿಂದ ಭಾರತ ದಕ್ಷಿಣ ಏಷ್ಯಾ ವಲಯದಲ್ಲಿ ಹೆಚ್ಚಿನ ಪ್ರಾಬಲ್ಯ ಸಾಧಿಸಬೇಕಿದೆ.

ಭಾರತದ ನೆರೆಹೊರೆಯ ರಾಷ್ಟ್ರಗಳು
ಭಾರತದ ನೆರೆಹೊರೆಯ ರಾಷ್ಟ್ರಗಳು (ETV Bharat)
author img

By ETV Bharat Karnataka Team

Published : Sep 25, 2024, 9:31 PM IST

ಬಾಂಗ್ಲಾದೇಶದಲ್ಲಿ ಶೇಕ್​ ಹಸೀನಾ ಅವರ ಸರ್ಕಾರ ಪತನವಾದ ಬಳಿಕ, ಮೊಹಮದ್​ ಯೂನುಸ್​ ಅವರ ನೇತೃತ್ವದಲ್ಲಿ ರಚಿತವಾಗಿ ಮಧ್ಯಂತರ ಸರ್ಕಾರ ಭಾರತದ ಜೊತೆಗೆ ಅಷ್ಟಕ್ಕಷ್ಟೆ ಸಂಬಂಧವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಆದರೆ, ನೆರೆಯ ರಾಷ್ಟ್ರವು ಭಾರತದೊಂದಿಗಿನ ವ್ಯವಹಾರಿಕ ಸಂಬಂಧಗಳಿಂದ ದೂರವಾಗಲು ಸಾಧ್ಯವಿಲ್ಲ ಎಂಬುದು ಸರ್ವವಿಧಿತ.

ಬಾಂಗ್ಲಾದೇಶ ಮಾತ್ರವಲ್ಲದೇ, ಹೊಸದಾಗಿ ಸರ್ಕಾರ ರಚನೆ ಮಾಡಿಕೊಂಡಿರುವ ನೇಪಾಳ ಮತ್ತು ಶ್ರೀಲಂಕಾ ಕೂಡ ಇದೇ ಹಾದಿಯಲ್ಲಿವೆ. ಆ ದೇಶಗಳಿಗೆ ಹೊಸ ನಾಯಕತ್ವ ಸಿಕ್ಕಿದೆ. ಆದರೆ, ಭಾರತವನ್ನು ಕಡೆಗಣಿಸಿ ದೇಶಗಳು ಸಾಗಲಿವೆ ಎಂಬುದು ಮಾತ್ರ ಅಸಾಧ್ಯದ ಮಾತು. ಬಾಂಗ್ಲಾದೇಶದಲ್ಲಿ ಆರ್ಥಿಕ ಮುಗ್ಗಟ್ಟು, ಜಿಡಿಪಿ ಕುಸಿತವು ತೀವ್ರ ಸಂಕಷ್ಟಗಳನ್ನು ತರಲಿದೆ. ನೇಪಾಳ ಮತ್ತು ದ್ವೀಪರಾಷ್ಟ್ರ ಲಂಕಾದ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.

ಬಾಂಗ್ಲಾದೇಶದಲ್ಲಿ ಹಸೀನಾ ಸರ್ಕಾರ ಪತನವಾಗಲಿದೆ ಎಂಬುದು ಭಾರತದ ಊಹೆಗೆ ನಿಲುಕದ್ದೇನಲ್ಲ. ಢಾಕಾದಲ್ಲಿ ಆಗುತ್ತಿದ್ದ ಬದಲಾವಣೆಗಳನ್ನು ದೆಹಲಿ ಸರ್ಕಾರ ಗಮನಿಸಿತ್ತು. ಆದರೆ, ಅಲ್ಲಿನ ಹೋರಾಟವನ್ನು ತಡೆಯಲು ಸಾಧ್ಯವಿರಲಿಲ್ಲ. ಹೀಗಾಗಿ, ಶೇಕ್​ ಹಸೀನಾ ಅವರು ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿದ್ದರೂ, ಸರ್ಕಾರ ಪತನವಾಗುವುದನ್ನು ತಡೆಯಲು ಮುಂದಾಗಲಿಲ್ಲ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮಿತ್ರರಾಷ್ಟ್ರವಾಗಿರುವ ಬಾಂಗ್ಲಾ, ಭಾರತದಿಂದ ದೂರ ಸರಿಯಲು ಸಾಧ್ಯವಿಲ್ಲ. ಹಲವು ಕಾರಣಗಳಿಂದ ಅಲ್ಲಿನ ಈಗಿನ ಸರ್ಕಾರ ಆಕ್ರಮಣಶೀಲತೆ ಪ್ರದರ್ಶಿಸಬಹುದು. ಆದರೆ, ವಾಸ್ತವ ಸಂಗತಿಯೆಂದರೆ, ಭಾರತವಿಲ್ಲದೇ ಬಾಂಗ್ಲಾದೇಶ ನಿಜವಾಗಿಯೂ ಮುಂದುವರಿಯಲು ಸಾಧ್ಯವಿಲ್ಲ. ಹಸೀನಾ ಸರ್ಕಾರ ಪತನದಿಂದ ದಕ್ಷಿಣ ಏಷ್ಯಾ ವಲಯದಲ್ಲಿ ಭಾರತದ ಪ್ರಭಾವಕ್ಕೆ ಹಿನ್ನಡೆಯಾಗಿದೆ ಎಂದು ಹೇಳಲಾಗಿದೆ. ಇದಕ್ಕೂ ಮೊದಲು ಇನ್ನೊಂದು ನೆರೆರಾಷ್ಟ್ರ ನೇಪಾಳದಲ್ಲಿ ಸರ್ಕಾರ ಪತನವಾಗಿತ್ತು. ಇದು ಕೂಡ ಭಾರತದ ಪ್ರಭಾವಕ್ಕೆ ಧಕ್ಕೆ ಎಂದು ಹೇಳಲಾಗಿತ್ತು.

ಚೀನಾದತ್ತ ನೇಪಾಳ ಚಿತ್ತ: 2015 ರಲ್ಲಿ ಭಾರತವು ನೇಪಾಳದ ಮೇಲೆ ದಿಗ್ಬಂಧನ ವಿಧಿಸಿತ್ತು. ಆದರೆ, ನೇಪಾಳಿಗರು ಇದನ್ನು ಮೆಟ್ಟಿನಿಂತರು. ಚೀನಾ ಮತ್ತು ಅಮೆರಿಕದಂತೆ ದೃಢ ನಿರ್ಧಾರ ಕೈಗೊಳ್ಳುವಲ್ಲಿ ಭಾರತ ತುಸು ಹಿಂದಿದೆ ಎಂಬುದನ್ನು ರಾಜಕೀಯ ಜ್ಞಾನ ಅರಿತ ನೇಪಾಳಿಯ ಮಾತಾಗಿದೆ. ಹೀಗಾಗಿ ಚೀನಾದಂತೆ ಕುತಂತ್ರ ಬುದ್ಧಿ ಮತ್ತು ಅಮೆರಿಕದಂತೆ ದಾಳಿ ಮಾಡುವ ರಾಜತಾಂತ್ರಿಕತೆ ಭಾರತ ಪ್ರದರ್ಶಿಸಲ್ಲ. ಆದಾಗ್ಯೂ ನೇಪಾಳವು ಬೀಜಿಂಗ್‌ನತ್ತ ಅನೇಕ ವಿಷಯಗಳಿಗಾಗಿ ಕಾದು ಕುಳಿತಿದೆ. ನೇಪಾಳಕ್ಕೆ ಭಾರತ ನೆರವು ನೀಡಿದಾಗ್ಯೂ ಮಾವೋವಾದಿಗಳತ್ತ ದೇಶ ಚಿತ್ತ ಹರಿಸಿದೆ.

ಹೀಗಾಗಿಯೇ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಇಲ್ಲಿ ಬಹಳ ಸಕ್ರಿಯವಾಗಿದೆ. ನೇಪಾಳಕ್ಕೆ ಹಣಕಾಸಿನವ ನೆರವು ಹೋಗಬೇಕಾದಲ್ಲಿ ಆರ್​​ಎಸ್​ಎಸ್​​ ಅಪ್ಪಣೆ ಬೇಕು ಎಂಬುದು ಮೂಲಗಳ ಮಾಹಿತಿ. ಚೀನಾವನ್ನು ಹಿಮ್ಮೆಟ್ಟಿಸುವ ಸಲುವಾಗಿ ಅಮೆರಿಕ ಆರ್​​ಎಸ್​ಎಸ್​​ಗೆ ಸಹಾಯ ಮಾಡುತ್ತದೆ ಎಂದು ಹಲವರು ನಂಬುತ್ತಾರೆ. ಕಠ್ಮಂಡುವಿನಲ್ಲಿ ಚೀನಾ ನೆರವಿನಿಂದ ನಿರ್ಮಿಸಲಾಗಿರುವ ಲುಂಬಿನಿ ಮತ್ತು ಪೋಖರಾ ವಿಮಾನ ನಿಲ್ದಾಣಗಳನ್ನು ಅದಾನಿ ಸಂಸ್ಥೆಯು ಸ್ವಾಧೀನಪಡಿಸಿಕೊಳ್ಳಲು ಭಾರತ ಸರ್ಕಾರ ಪ್ರೋತ್ಸಾಹಿಸುತ್ತಿದೆ. ಕಾರಣ, ಇಲ್ಲಿಂದ ವಿಮಾನಯಾನಕ್ಕೆ ಸರ್ಕಾರ ಅನುಮತಿ ನೀಡಿಲ್ಲ. ಇದು ಅದಾನಿ ವಶವಾದಲ್ಲಿ ಯಾತ್ರಾರ್ಥಿಗಳ ಪ್ರಯಾಣಕ್ಕೆ ಸಲೀಸಲಾಗಲಿದೆ ಎಂಬುದು ಭಾರತ ಸರ್ಕಾರದ ದೂರಾಲೋಚನೆ.

ಲಂಕಾದಲ್ಲಿ ಅದಾನಿ ವಿರೋಧಿ ಸರ್ಕಾರ: ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಕಮ್ಯುನಿಸ್ಟ್​ ಸರ್ಕಾರ ಅಧಿಕಾರಕ್ಕೆ ಬಂದ ಶ್ರೀಲಂಕಾದಲ್ಲೂ ಪರಿಸ್ಥಿತಿ ಬೇರೆ ಇಲ್ಲ. ಶ್ರೀಲಂಕಾದ ಹೊಸ ಅಧ್ಯಕ್ಷ ಎ.ಕೆ. ದಿಸ್ಸಾನಾಯಕೆ ಅವರು ಅದಾನಿಯವರ ಪವನ ಶಕ್ತಿ ಯೋಜನೆಯನ್ನು ದೇಶದಿಂದ ಹೊರಹಾಕುವುದಾಗಿ ಹೇಳಿದ್ದರು. ಭಾರತ ವಿರೋಧಿ ಪಕ್ಷವಾದ ಜನತಾ ವಿಮುಕ್ತಿ ಪೆರುಮೆನಾ (ಜೆವಿಪಿ)ದ ನಾಯಕರಾಗಿರುವ ದಿಸ್ಸಾನಾಯಕೆ, ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸಿದ್ದಾರೆ ಎಂಬ ಆರೋಪವಿದೆ.

ಬಾಂಗ್ಲಾದೇಶದಂತೆಯೇ, ಶ್ರೀಲಂಕಾ ಕೂಡ ಭಾರತದ ಬೆಂಬಲವಿಲ್ಲದೆ ತನ್ನ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಿಲ್ಲ. ಎರಡು ವರ್ಷಗಳ ಹಿಂದೆ ಭೀಕರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದ ದ್ವೀಪ ರಾಷ್ಟ್ರದ ರಕ್ಷಣೆಗೆ ಭಾರತ ಬಂದಿತ್ತು. ಭಾರತದ ಸಹಾಯವನ್ನು ದೇಶ ಮರೆಯದೇ ಇರಬಹುದು. ಆದರೆ, ಆರ್ಥಿಕ ಸಂಕಷ್ಟಕ್ಕಾಗಿ ತಮ್ಮ ಸಾರ್ವಭೌಮತ್ವವನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಬಿಕ್ಕಟ್ಟಿನಲ್ಲಿರುವ ದೇಶಕ್ಕೆ ಸಹಾಯ ಮಾಡಲು ಭಾರತವನ್ನು ಹೊಸ ಅಧ್ಯಕ್ಷ ದಿಸ್ಸಾನಾಯಕೆ ಕೋರಬಹುದು. ಆದರೆ, ಸರ್ಕಾರದ ಮೇಲೆ ನಿಯಂತ್ರಣ ಸಾಧಿಸಲು ಬಿಡುವುದಿಲ್ಲ.

ಸಂಕಷ್ಟದಲ್ಲಿರುವ ನೆರೆಹೊರೆಯ ರಾಷ್ಟ್ರಗಳಿಗೆ ಭಾರತ ನೆರವು ನೀಡುವ ಮೂಲಕ, ಶತ್ರುರಾಷ್ಟ್ರ ಪಾಕಿಸ್ತಾನವನ್ನೂ ನಿಭಾಯಿಸಬೇಕಿದೆ. ಅಕ್ಟೋಬರ್ 15-16 ರಂದು ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಶೃಂಗಸಭೆಯಲ್ಲಿ ಪಾಲ್ಗೊಳ್ಳಬೇಕೆ ಎಂದು ಭಾರತ ನಿರ್ಧರಿಸಬೇಕಿದೆ.

ಇದನ್ನೂ ಓದಿ: ಏನಿದು ಸಿಂಧು ಜಲ ಒಪ್ಪಂದ: ಭಾರತದ ಅಂತಿಮ ಎಚ್ಚರಿಕೆಗೆ ಮಣಿದ ಪಾಕಿಸ್ತಾನ ಮಾತುಕತೆಗೆ ಸಜ್ಜು? - Indus Waters Treaty

ETV Bharat Logo

Copyright © 2025 Ushodaya Enterprises Pvt. Ltd., All Rights Reserved.