ETV Bharat / state

ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಗಮನ ಸೆಳೆಯುತ್ತಿರುವ ವಿಚಾರಣಾ ಶೆಡ್

ಬಂದೋಬಸ್ತ್ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಜಿಲ್ಲೆಯ ಕೆಲವೆಡೆ ಕೊರೊನಾ ಪಾಸಿಟಿವ್ ಬಂದಿದೆ. ದೇವದುರ್ಗ, ರಾಯಚೂರು ಠಾಣೆಗಳ ಸೀಲ್ ಡೌನ್ ನಂತರದಲ್ಲಿ ಠಾಣೆಗೆ ಬರುವ ಸಾಮಾನ್ಯ ಜನರ ಹಾಗೂ ಪೊಲೀಸ್ ಸಿಬ್ಬಂದಿಗೆ ವೈರಸ್ ಹರಡದಿರಲಿ ಎಂದು ಶೆಡ್ ಹಾಕಲಾಗಿದೆ.

author img

By

Published : Jun 5, 2020, 11:43 PM IST

An inquiry shed at the Lingasaguru police station
ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಗಮನ ಸೆಳೆಯುತ್ತಿರುವ ವಿಚಾರಣಾ ಶೆಡ್

ರಾಯಚೂರು: ಜಿಲ್ಲೆಯಲ್ಲಿ ಒಂದು ವಾರದಿಂದ ಉಲ್ಬಣಗೊಳ್ಳುತ್ತಿರುವ ಕೋವಿಡ್-19 ಪ್ರಕರಣಗಳಿಂದ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ನಿರ್ಮಾಣಗೊಂಡ ತಾತ್ಕಾಲಿಕ ವಿಚಾರಣಾ ಶೆಡ್ ಅಚ್ಚರಿ ಮೂಡಿಸಿದೆ.

ಲಿಂಗಸುಗೂರು ಪಟ್ಟಣದ ಕೇರಳ ಮೂಲದ ವ್ಯಾಪಾರಿ ಹಾಗೂ ಸರ್ಜಾಪುರದ ಯುವಕನ ಕೋವಿಡ್-19 ಪ್ರಕರಣ ಬೆಚ್ಚಿ ಬೀಳುವಂತೆ ಮಾಡಿತ್ತು. ಇದರೆ ಬೆನ್ನಲ್ಲೇ ಬ್ಯಾಂಕ್ ನೌಕರರು, ಕ್ವಾರಂಟೈನ್ ಕೇಂದ್ರದಲ್ಲಿದ್ದ ಕೂಲಿ ಕಾರ್ಮಿಕರಲ್ಲಿ ಕೋವಿಡ್-19 ಸೋಂಕು ಪತ್ತೆ ಆಗಿದ್ದರಿಂದ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ ಎಂದು ಹೇಳಲಾಗುತ್ತಿದೆ.
ಬಂದೋಬಸ್ತ್ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಜಿಲ್ಲೆಯ ಕೆಲವೆಡೆ ಕೊರೊನಾ ಪಾಸಿಟಿವ್ ಬಂದಿದೆ. ದೇವದುರ್ಗ, ರಾಯಚೂರು ಠಾಣೆಗಳ ಸೀಲ್ ಡೌನ್ ನಂತರದಲ್ಲಿ ಠಾಣೆಗೆ ಬರುವ ಸಾಮಾನ್ಯಜನರ ಹಾಗೂ ಪೊಲೀಸ್ ಸಿಬ್ಬಂದಿಗೆವೈರಸ್ ಹರಡದಿರಲಿ ಎಂದು ಶೆಡ್ ಹಾಕಲಾಗಿದೆ.

ಈ ಕುರಿತು ಪಿಎಸ್ಐ ಪ್ರಕಾಶ ರೆಡ್ಡಿ ಡಂಬಳ ಅವರನ್ನು ಸಂಪರ್ಕಿಸಿದಾಗ, ಠಾಣೆಗೆ ಬರುವ ಜನಸಾಮಾನ್ಯರು ಮತ್ತು ಸಿಬ್ಬಂದಿ ಆರೋಗ್ಯ ರಕ್ಷಣೆಗೆ ಶೆಡ್ ವ್ಯವಸ್ಥೆ ಮಾಡಲಾಗಿದೆ. ಸಣ್ಣಪುಟ್ಟ ನ್ಯಾಯ, ವಿಚಾರಣೆ ಹೊರಗಡೆ ಮಾಡಲಾಗುತ್ತೆ. ಅನಿವಾರ್ಯ ಪ್ರಕರಣ ದಾಖಲೆ ಮಾಡುವಾಗ ಓರ್ವ ವ್ಯಕ್ತಿ ಮಾತ್ರ ರೈಟರ್ ಕೊಠಡಿಗೆ ಕಳುಹಿಸಲಾಗುವುದು ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.