ರಾಯಚೂರು: ಬೀದಿ ನಾಯಿಗಳ ಹಾವಳಿ ಹೆಚ್ಚಾದಾಗ ಅವುಗಳ ನಿಯಂತ್ರಣಕ್ಕೆ ನಗರ ಪ್ರದೇಶದ ನಗರಸಭೆಯಿಂದ ಅಗತ್ಯ ಕ್ರಮವನ್ನ ಕೈಗೊಳ್ಳಬೇಕು. ಆದರೆ ರಾಯಚೂರು ನಗರಸಭೆಯಲ್ಲಿ ನಾಯಿಗಳನ್ನ ಸೆರೆ ಹಿಡಿಯುವುದಕ್ಕೆ ಮತ್ತು ಅವುಗಳನ್ನು ನಿಯಂತ್ರಿಸಲು ವ್ಯವಸ್ಥೆಯಿಲ್ಲ. ಹೀಗಾಗಿ ನಗರದ ಎಲ್ಲೆಂದರಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ನಗರಸಭೆಯ ಕಚೇರಿ ಆವರಣ, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಿಂಡು, ಹಿಂಡು ನಾಯಿಗಳು ಕಂಡು ಬರುತ್ತವೆ ಅಂದ್ಮೇಲೆ ನಗರದಲ್ಲಿನ 35 ವಾರ್ಡ್‌ಗಳಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿವೆ.
ಬೀದಿ ನಾಯಿಗಳ ನಿಯಂತ್ರಣಕ್ಕೆ ಸಾರ್ವಜನಿಕರಿಂದ ನಗರಸಭೆಗೆ ದೂರುಗಳು ಬರುತ್ತವೆ. ಆದ್ರೆ ಅವುಗಳ ನಿಯಂತ್ರಿಸಲು ಯಾವುದೇ ಸಿಬ್ಬಂದಿ, ಅವಶ್ಯಕವಾದ ಸಲಕರಣೆಗಳು ನಗರಸಭೆಯಲ್ಲಿಲ್ಲ. ಹೀಗಾಗಿ ಕೆಲ ವರ್ಷಗಳ ಹಿಂದೆ ತಮಿಳುನಾಡಿನ ತಂಡವನ್ನು ನಾಯಿಗಳನ್ನ ಸೆರೆ ಹಿಡಿಯಲು ಕರೆಸಲಾಗಿತ್ತು. ಆಗ ಸ್ವಲ್ಪ ಮಟ್ಟಿನ ನಾಯಿ ಹಾವಳಿ ತಪ್ಪಿತ್ತು. ಆದ್ರೆ ಬೀದಿ ನಾಯಿಗಳನ್ನ ಹಿಡಿದು ಒಂದು ಕೂಡಿ ಹಾಕಿರುವುದು, ಪ್ರಾಣಿಗಳ ಮೇಲೆ ಶೋಷಣೆಯಾಗುತ್ತದೆ ಎಂದು ಸೆರೆ ಹಿಡಿಯುವುದು ಕೂಡ ಸವಾಲಾಗಿದೆ.
ನಗರಸಭೆ ಮೂಲಗಳ ಪ್ರಕಾರ ನಾಲ್ಕೈದು ಸಾವಿರ ಬೀದಿ ನಾಯಿಗಳಿವೆ. ಇವುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ಇದರ ನಿಯಂತ್ರಣಕ್ಕಾಗಿ ಈ ಹಿಂದಿನ ಪ್ರಭಾರಿ ಪೌರಾಯುಕ್ತ ಗೋಪಿಶೆಟ್ಟಿ ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಸುಮಾರು 95 ಲಕ್ಷ ರೂಪಾಯಿ ಹಣ ವ್ಯಯಿಸುವುದಕ್ಕೆ ನಿರ್ಧರಿಸಲಾಗಿತ್ತು. ಆದ್ರೆ ಅಂದು ಜಿಲ್ಲಾಧಿಕಾರಿಯಾಗಿದ್ದ ಶರತ್ ಬಿ. ಇದನ್ನ ಮರುಪರಿಶೀಲಿಸಿ ಯೋಜನೆ ರೂಪಿಸುವಂತೆ ಸೂಚಿಸಿದ್ರು. ಯಾಕೆಂದರೆ ಬೀದಿಗಳ ನಿಯಂತ್ರಣ ಸುಮಾರು 95 ಲಕ್ಷ ರೂಪಾಯಿ ವ್ಯಯ ಮಾಡುವುದು ಪರ್ಯಾಯ ವ್ಯವಸ್ಥೆ ಕೊಂಡುಕೊಳ್ಳುವಂತೆ ಸೂಚಿಸಿದ್ರು. ಆದ್ರೆ ಅದಾದ ಬಳಿಕ ಇಲ್ಲಿಯವರೆಗೆ ಯಾವುದೇ ವ್ಯವಸ್ಥೆ ಕೈಗೊಂಡಿಲ್ಲ ಎಂಬ ಆರೋಪಗಳಿವೆ.