ರಾಯಚೂರು: ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಜನಿಸಿದ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲು ಆ್ಯಂಬ್ಯುಲೆನ್ಸ್ ಸಿಗದೇ ಪರದಾಡಿದ ಘಟನೆ ನಡೆದಿದೆ.
ಲಿಂಗಸುಗೂರಿನ ರೋಡಲಬಂಡ (ತವಗ) ಗ್ರಾಮದ ಶಿವಮ್ಮ ಎಂಬುವವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿಗೆ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಖಾಸಗಿ ಆಸ್ಪತ್ರೆ ವೈದ್ಯರು ಸ್ಥಳೀಯವಾಗಿ ಚಿಕಿತ್ಸೆ ಅಸಾಧ್ಯ, ರಾಯಚೂರಿಗೆ ಹೋಗುವಂತೆ ಸೂಚಿಸಿದ್ದರು. ಪಾಲಕರು ಆಟೋದಲ್ಲಿ ಆಕ್ಸಿಜನ್ ಇಟ್ಟುಕೊಂಡೇ ಆಸ್ಪತ್ರೆಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.