ರಾಯಚೂರು : ಕೊರೊನಾ ಮೂರನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಸಿಂಧನೂರು ತಾಲೂಕಿನ ಪ್ರಸಿದ್ಧ ಅಂಬಾಮಠದ ಅಂಬಾದೇವಿಯ ಜಾತ್ರಾ ಮಹೋತ್ಸವವನ್ನು ರದ್ದುಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ದೇವಾಲಯ ಸಮಿತಿ ಸದಸ್ಯರು, ಸ್ಥಳೀಯ ಶಾಸಕರು, ತಾಲೂಕು ಆಡಳಿತ ಸಭೆ ನಡೆಸಿ ಜಾತ್ರೆ ರದ್ದಿಗೆ ತೀರ್ಮಾನಿಸಲಾಗಿದೆ. ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡುವುದು, ಸೋಂಕು ಹರಡದಂತೆ ತಡೆಯಲು ಅಂಬಾದೇವಿ ಜಾತ್ರೆಯನ್ನು ಈ ವರ್ಷ ನಡೆಸದಿರಲು ನಿರ್ಧರಿಸಲಾಗಿದೆ.
ಜಾತ್ರೆ ರದ್ದಾದ ಕಾರಣ ಭಕ್ತರು ದೇವಾಲಯಕ್ಕೆ ಬರದಂತೆ ಸ್ಥಳೀಯ ಆಡಳಿತ ಮನವಿ ಮಾಡಿದೆ.
ಇದನ್ನೂ ಓದಿ: ಮತ್ತೆ ಹೆಣ್ಣು ಹುಟ್ಟುವ ಭಯದಲ್ಲಿ ಹೆರಿಗೆ ಹಿಂದಿನ ದಿನವೇ ಗರ್ಭಿಣಿ ಆತ್ಮಹತ್ಯೆ: ಹೊಟ್ಟೆಯಲ್ಲಿದ್ದದ್ದು ಗಂಡು ಮಗು