ETV Bharat / state

ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ: ಕೊಳಚೆ ನೀರಲ್ಲಿ ಕುಡಿವ ನೀರಿನ ಪೈಪ್​ಲೈನ್

ಕೊಳಚೆ ನೀರಲ್ಲಿ ಕುಡಿವ ನೀರಿನ ಪೈಪ್​ಲೈನ್​ಗಳಿದ್ದು, ಜನರಿಗೆ ಕಲುಷಿತ ನೀರು ಪೂರೈಕೆ ಆಗುತ್ತಿರುವ ಬಗ್ಗೆ ಲಿಂಗಸುಗೂರು ಪುರಸಭೆ ವ್ಯಾಪ್ತಿಯ ಗೌಳಿಪುರ ನಾಗರಿಕರು ಆರೋಪಿಸಿದ್ದಾರೆ.

Allegations of negligence of Lingsugur municipal authorities
ಕೊಳಚೆ ನೀರಲ್ಲಿ ಕುಡಿವ ನೀರಿನ ಪೈಪ್​ಲೈನ್
author img

By

Published : Jun 2, 2020, 12:25 PM IST

ರಾಯಚೂರು: ಜಿಲ್ಲೆಯ ಲಿಂಗಸುಗೂರು ಪುರಸಭೆ ವ್ಯಾಪ್ತಿಯ ಗೌಳಿಪುರದಲ್ಲಿ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೊಳಚೆ ನೀರಲ್ಲಿ ಕುಡಿವ ನೀರಿನ ಪೈಪ್​ಲೈನ್​ಗಳಿದ್ದು, ಕಲುಷಿತ ನೀರು ಪೂರೈಕೆ ಆಗುತ್ತಿರುವ ಬಗ್ಗೆ ನಾಗರಿಕರು ಆರೋಪಿಸಿದ್ದಾರೆ.

ಗೌಳಿಪುರದ ರಾಜಕಾಲುವೆ ಗೋಡೆಗಳ ದುರಸ್ತಿ ಮತ್ತು ಜನರು ತಿರುಗಾಡಲು ಸ್ಲ್ಯಾಬ್ ಹಾಕುವ ಕಾರ್ಯ ನಡೆದಿದೆ. ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು, ಕುಡಿಯುವ ನೀರಿನ ಪೈಪ್​ಲೈನ್ ಸ್ಥಳಾಂತರ ಮಾಡದೇ ಕಾಮಗಾರಿ ಮಾಡುತ್ತಿರುವ ಬಗ್ಗೆ ಜನತೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಗೌಳಿಪುರದ ವಾರ್ಡ್​ ಪ್ರದೇಶದಲ್ಲಿ ಬಹುತೇಕ ಕಡೆಗಳಲ್ಲಿ ಚರಂಡಿಗಳ ಮಧ್ಯೆಯೇ ಪೈಪ್​ಲೈನ್ ಹಾಕಿದ್ದು, ಅದನ್ನು ಸ್ಥಳಾಂತರಿಸಿ ಶುದ್ಧ ಕುಡಿವ ನೀರು ಪೂರೈಸಲು ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಅಲ್ಲದೆ ಈ ಕಾಮಗಾರಿಯನ್ನು ಯಾವ ಯೋಜನೆಯಡಿ ಮಾಡಲಾಗುತ್ತಿದೆ ಎಂಬುದನ್ನೂ ಸ್ಪಷ್ಟಪಡಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಕೊಳಚೆ ನೀರಲ್ಲಿ ಕುಡಿವ ನೀರಿನ ಪೈಪ್​ಲೈನ್

ರಾಜಕಾಲುವೆಗೆ ಹೊಂದಿ‌ಕೊಂಡೇ ಚರಂಡಿ ನಿರ್ಮಾಣ ಮತ್ತು ಸ್ಲ್ಯಾಬ್ ಹಾಕಲು 2.50 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ. ಅವೈಜ್ಞಾನಿಕ ಕಾಮಗಾರಿಯಿಂದ ಕುಡಿಯುವ ನೀರಿನ ಪೈಪ್​ಲೈನ್ ಮೇಲೆಯೇ ಕೆಲಸ ಮಾಡುತ್ತಿದ್ದಾರೆ. ಈ ಕುರಿತು ಪುರಸಭೆ ಅಧಿಕಾರಿಗಳನ್ನು ಸಂಪರ್ಕಿಸಿದರೂ ಸಮರ್ಪಕ ಉತ್ತರ ಸಿಗುತ್ತಿಲ್ಲ ಎಂದು ಸಮಾಜ ಸೇವಕ ಅಕ್ರಂ ಪಾಷ ಆರೋಪಿಸಿದ್ದಾರೆ.

ಪುರಸಭೆ ಮುಖ್ಯಾಧಿಕಾರಿ ಕೆ.ಕೆ ಮುತ್ತಪ್ಪ ಅವರನ್ನು ಈ ಕುರಿತು ಗಮನ ಸೆಳೆದಾಗ, ಗೌಳಿಪುರದಲ್ಲಿ ಚರಂಡಿ ನಿರ್ಮಾಣದಂತಹ ಯಾವ ಕಾಮಗಾರಿಗಳು ನಡೆದಿಲ್ಲ. ಕೂಡಲೆ ಎಂಜಿನಿಯರ್ ಕಳುಹಿಸಿ ಮಾಹಿತಿ ಸಂಗ್ರಹಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.