ETV Bharat / state

ಮಂತ್ರಾಲಯಕ್ಕೆ ನಟ ಶಿವರಾಜ್ ಕುಮಾರ್ ದಂಪತಿ ಭೇಟಿ - ವೇದ ಚಿತ್ರ

ರಾಯಚೂರಿನಲ್ಲಿ ವೇದ ಚಿತ್ರದ ಟೀಸರ್​ ಬಿಡುಗಡೆ ಕಾರ್ಯಕ್ರಮ. ಮಂತ್ರಾಲಯಕ್ಕೆ ನಟ ಶಿವರಾಜ್ ಕುಮಾರ್ ದಂಪತಿ ಭೇಟಿ. ಬೃಂದಾವನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಕೆ

Actor Shivarajkumar visits Mantralaya
ಮಂತ್ರಾಲಯದಲ್ಲಿ ಶಿವರಾಜ್‌ಕುಮಾರ್‌ ದಂಪತಿ
author img

By

Published : Dec 3, 2022, 12:45 PM IST

ರಾಯಚೂರು: ನಟ ಶಿವರಾಜ್ ಕುಮಾರ್ ದಂಪತಿ ಇಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿದರು. ನಗರದಲ್ಲಿ ವೇದ ಚಿತ್ರದ ಟೀಸರ್​ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಶಿವರಾಜ್ ಕುಮಾರ್ ದಂಪತಿ ಹಾಗೂ ಸಿನಿಮಾದ ತಂಡದವರು ಆಗಮಿಸುತ್ತಿದ್ದಾರೆ.

ಕಾರ್ಯಕ್ರಮಕ್ಕೂ ಮುನ್ನ ಪತ್ನಿ ಗೀತಾ ಅವರೊಂದಿಗೆ ಗ್ರಾಮ ದೇವತೆ ಶ್ರೀಮಂಚಾಲಮ್ಮ ದೇವಿಯ ದರ್ಶನ ಪಡೆದರು. ನಂತರ ಶ್ರೀರಾಘವೇಂದ್ರ ಸ್ವಾಮಿಗಳ ಮೂಲ ಬೃಂದವನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಮಂತ್ರಾಲಯದಲ್ಲಿ ಶಿವರಾಜ್‌ಕುಮಾರ್‌ ದಂಪತಿ..

ಬಳಿಕ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಶ್ರೀಗಳು ದಂಪತಿಗೆ ಸನ್ಮಾನಿಸಿ, ಆರ್ಶೀವದಿಸಿದರು.

ಇದನ್ನೂ ಓದಿ: ಪಾಂಡವಪುರದಲ್ಲಿ ವೇದ ಚಿತ್ರದ ಆಡಿಯೋ ಬಿಡುಗಡೆ: ಭರ್ಜರಿ ಸ್ಟೆಪ್ ಹಾಕಿದ ಹ್ಯಾಟ್ರಿಕ್ ಹೀರೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.