ರಾಯಚೂರು : ಮಟ್ಕಾ ದಂಧೆ, ಸಿ ಹೆಚ್ ಪೌಡರ್ ಮಾರಾಟ ಮಾಡುವ ಕಿಂಗ್ ಪಿನ್ ಮೇಲೆ ಕಠಿಣ ಶಿಕ್ಷೆ ಗುರಿಪಡಿಸಲು ಕಾನೂನಾತ್ಮಕ ಬದಲಾವಣೆ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಗಡಿಭಾಗವಾಗಿರುವ ಜಿಲ್ಲೆಯಲ್ಲಿ ಹೆಚ್ಚಿನ ರೀತಿಯ ಸಿಹೆಚ್ ಪೌಡರ್ ಮಾರಾಟ, ಮಟ್ಕಾ ದಂಧೆ ನಡೆಸಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹಾಗಾಗಿ ಇದನ್ನ ನಿಯಂತ್ರಿಸುವ ನಿಟ್ಟಿನಲ್ಲಿ ಕಾನೂನಾತ್ಮಕ ಬದಲಾವಣೆ ತರಲಾಗುವುದು ಎಂದಿದ್ದಾರೆ.
ಇದನ್ನೂ ಓದಿ: ಶೀರ್ಘದಲ್ಲೇ ಸಂಪತ್ ರಾಜ್ ಬಂಧನ: ಗೃಹ ಸಚಿವ ಬೊಮ್ಮಾಯಿ
ಕಾನೂನಿನ ಬಂಧನದ ಬಳಿಕ ಹೊರಗಡೆ ಬರುವ ಅವಕಾಶವಿರುವುದರಿಂದ ಇಂತಹ ದಂಧೆ ಮಾಡುವವರನ್ನು ಕಠಿಣ ಶಿಕ್ಷೆ ಒಳಪಡಿಸಲು ಕಾನೂನಾತ್ಮಕ ಬದಲಾವಣೆ ಮಾಡಬೇಕಾಗಿದೆ. ಅ ನಿಟ್ಟಿನಲ್ಲಿ ಕಾನೂನು ತಜ್ಞರ ಅಭಿಪ್ರಾಯದ ಮೇಲೆ ಕಾನೂನಾತ್ಮಕ ಬದಲಾವಣೆ ತರುವ ಮೂಲಕ ಬುಕ್ಕಿಗಳು, ಸಿಹೆಚ್ ಪೌಂಡರ್ ಮಾರಾಟ ಮಾಡುವವರು ಹಾಗೂ ಕಿಂಗ್ ಪಿನ್ ಮೇಲೆ ಗೂಂಡಾ ಕಾಯಿದೆ ಹೇರಲು ಕ್ರಮ ಜರುಗಿಸಲಾವುದು ಎಂದರು.
ಇನ್ನು ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಜಿಲ್ಲೆಯ ಅಪರಾಧ ವಿಷಯಗಳನ್ನ ನಿಯಂತ್ರಿಸುವಂತೆ ಸೂಚನೆ ನೀಡಲಾಗಿದೆ. ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳು ಹೊಂದಿಕೊಂಡಿರುವುದರಿಂದ ಗಡಿ ಭಾಗದಲ್ಲಿ ಅಪರಾಧ ತಡೆ ಸೇರಿದಂತೆ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಹ ಸೂಚಿಸಲಾಗಿದೆ ಎಂದರು.
ವಿಧಿ-ವಿಧಾನ ಕೇಂದ್ರವನ್ನ ಸ್ಥಾಪಿಸಬೇಕೆನ್ನುವ ಬೇಡಿಕೆಯಿದ್ದು ಈ ಬಗ್ಗೆ ಚಿಂತಿಸಲಾಗುವುದು. ಕಲ್ಯಾಣ ಕರ್ನಾಟಕದ ಭಾಗದಲ್ಲಿ ಪೊಲೀಸ್ ಠಾಣೆಗಳಿಗೆ ಹಾಗೂ ಪೊಲೀಸ್ ವಸತಿ ಗೃಹಗಳಿಗೆ ಮೂಲಸೌಕರ್ಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.
371 ಜೆ ಪ್ರಮಾಣ ಪತ್ರ ಪಡೆದುಕೊಂಡು ಸರ್ಕಾರಿ ನೌಕರಿ ಬಡ್ತಿ ಪಡೆದಿರುವ ಪ್ರಕರಣಗಳಿವೆ. ಇದರ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದರು. ಶಾಸಕರಾದ ಡಾ.ಶಿವರಾಜ್ ಪಾಟೀಲ್, ಕೆ.ಶಿವನಗೌಡ ನಾಯಕ, ಜಿಲ್ಲಾಧ್ಯಕ್ಷ ರಮಾನಂದ್ ಯಾದವ್ ಸೇರಿದಂತೆ ಇತರರು ಜತೆಗಿದ್ದರು.