ರಾಯಚೂರು: ನಗರದ ವಿವಿಧ ರೈಸ್ ಮಿಲ್‌ಗಳ ಮೇಲೆ ಎಸಿ ಅಧಿಕಾರಿಗಳು ದಾಳಿ ನಡೆಸಿ ಲಕ್ಷಾಂತರ ರೂ.ಮೌಲ್ಯದ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.
ಪಡಿತರ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಸಹಾಯಕ ಆಯುಕ್ತ ಸಂತೋಷ್ ಕಾಮಗೌಡ ನೇತೃತ್ವದಲ್ಲಿ ನಗರದ ವಿವಿಧ ರೈಸ್ ಮಿಲ್ಗಳು ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ, ನಾಲ್ಕು ರೈಸ್ ಮಿಲ್ಗಳಿಂದ ಬರೋಬ್ಬರಿ 6 ಲಕ್ಷಕ್ಕೂ ಅಧಿಕ ಮೌಲ್ಯದ ಸುಮಾರು 884 ಅಕ್ಕಿ ಚೀಲಗಳನ್ನು ವಶಕ್ಕೆ ಪಡೆದಿದ್ದಾರೆ.
ಬಡವರಿಗೆ ಹಂಚಿಕೆ ಮಾಡಬೇಕಾದ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ರೈಸ್ ಮಿಲ್ ಮಾಲೀಕರನ್ನು ವಶಕ್ಕೆ ಪಡೆಯಲಾಗಿದ್ದು, ಅವರ ಮೇಲೆ ಆಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಳಿನಡೆಸಿದ ರೈಸ್ ಮಿಲ್‌ಗಳ ಮಾಹಿತಿ:
- ಮಂಚಾಲಪುರ ರಸ್ತೆಯಲ್ಲಿರುವ ಕೃಷ್ಣಸ್ವಾಮಿ ರೈಸ್ ಮಿಲ್ - 2 ಲಕ್ಷಕ್ಕೂ ಅಧಿಕ ಮೌಲ್ಯದ 337 ಅಕ್ಕಿ ಚೀಲಗಳು ವಶ
- ಜಿ.ಶಂಕರ್ ಇಂಡಸ್ಟ್ರೀಸ್- 2 ಲಕ್ಷದ 74 ಸಾವಿರಕ್ಕೂ ಅಧಿಕ ಮೌಲ್ಯದ ಸುಮಾರು 378 ಅಕ್ಕಿ ಚೀಲಗಳು ವಶ
- ಗದ್ವಾಲ್ ರಸ್ತೆಯಲ್ಲಿ ಬರುವ ನರಸಿಂಹ ರೈಸ್ ಮಿಲ್ - 67 ಸಾವಿರಕ್ಕೂ ಅಧಿಕ ಮೌಲ್ಯದ 109 ಅಕ್ಕಿ ಚೀಲಗಳು ವಶ
- ಚಂದ್ರಿಕಾ ರೈಲ್ ಮಿಲ್‌ನಲ್ಲಿ 46 ಸಾವಿರಕ್ಕೂ ಅಧಿಕ ಮೌಲ್ಯದ 60 ಚೀಲಗಳು ವಶಕ್ಕೆ