ರಾಯಚೂರು: ತನ್ನ ಭಾವನೆಗಳಿಗೆ ಪತಿ ಬೆಲೆ ಕೊಡುತ್ತಿಲ್ಲವೆಂದು ಆರೋಪಿಸಿ ಮಹಿಳೆಯವೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಸಿಂಧನೂರು ಪಟ್ಟಣದ ಶರಣಬಸವೇಶ್ವರ ಕಾಲೋನಿಯಲ್ಲಿ ನಡೆದಿದೆ.
![ಡೆತ್ ನೋಟ್](https://etvbharatimages.akamaized.net/etvbharat/prod-images/kn-rcr-01-woman-suicide-photo-ka10035_18022021075945_1802f_1613615385_1009.jpg)
ವೀಣಾ ಶರಣಬಸವ(35) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಗೃಹಿಣಿ. ನನ್ನ ಪತಿ ಶರಣಬಸವ ನನ್ನ ಭಾವನೆಗಳಿಗೆ ಬೆಲೆ ನೀಡುತ್ತಿಲ್ಲ, ನನ್ನನ್ನು ಸಂತೋಷದಿಂದ ನೋಡಿಕೊಂಡಿಲ್ಲ. ನಮ್ಮ ಮಗುವನ್ನು ಸರಿಯಾಗಿ ನೋಡಿಕೊಳ್ಳಿ. ನನ್ನ ಸಾವಿಗೆ ನಾನೇ ಕಾರಣ, ಪೊಲೀಸರಿಗೆ ದೂರು ಸಹ ನೀಡಬೇಡಿ ಎಂದು ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾಳೆ.
ಸಿಂಧನೂರು ನಗರ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.