ರಾಯಚೂರು: ವೈಟಿಪಿಎಸ್ ಗುತ್ತಿಗೆದಾರನಿಗೆ ಮಾರಾಕಾಸ್ತ್ರಗಳಿಂದ ಬೆದರಿಸಿ ಹಣ ವಸೂಲಿ ಮಾಡಿದ್ದ ಡಕಾಯಿತ ತಂಡದೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಓರ್ವ ಪೊಲೀಸ್ ಕಾನ್ಸ್ಟೇಬಲ್ನನ್ನು ಬಂಧಿಸಲಾಗಿದೆ ಎಂದು ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.
ಶಕ್ತಿನಗರ ಠಾಣೆ ಪೇದೆ ಬಸವರಾಜ ಬಂಧಿತ ಆರೋಪಿ. ಕೇರಳ ಮೂಲದ ವೈಟಿಪಿಎಸ್ ಗುತ್ತಿಗೆದಾರ ಹರ್ಷನ್ಗೆ ಡಕಾಯಿತ ತಂಡ ಬೆದರಿಸಿ,30 ಲಕ್ಷಕ್ಕೆ ಬೇಡಿಕೆಯಿಟ್ಟಿದ್ರು. ಈ ಸಂಬಂಧ ಶಕ್ತಿನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣವನ್ನ ಭೇದಿಸಿದ ಪೊಲೀಸರು, ಈಗಾಗಲೇ 15 ಜನರನ್ನು ಬಂಧಿಸಿ ತನಿಖೆಯನ್ನ ಮುಂದುವರೆಸಿದ್ದರು.
ತನಿಖೆ ವೇಳೆ ಬಂಧಿತ ಆರೋಪಿಗಳೊಂದಿಗೆ ಪೊಲೀಸ್ ಪೇದೆ ಬಸವರಾಜ ಸಂಪರ್ಕ ಹೊಂದಿರುವುದು ಬೆಳಕಿಗೆ ಬಂದಿದ್ದು, ಪೇದೆಯನ್ನ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದರು.