ರಾಯಚೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಿಂದ ಶೂ ಹಾಕಿಸಿಕೊಂಡ ಪ್ರಸಂಗ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಗಬ್ಬೂರಿನ ಶ್ರೀ ಬೂದಿಬಸವೇಶ್ವರ ಮಠಕ್ಕೆ ಭೇಟಿ ನೀಡಿ ವಾಪಸ್ ಬರುವಾಗ ಕಾರ್ಯಕರ್ತ ಶೂ ಹಾಕಿರುವ ದೃಶ್ಯ ಕಂಡು ಬಂದಿದೆ.
ಸಿದ್ದರಾಮಯ್ಯ ಬೇಡ ಅಂದ್ರೂ ಕೂಡ, ಆ ಕಾರ್ಯಕರ್ತ ಶೂ ಹಾಕಿದ್ದಾನೆ. ಗ್ರಾಮದಲ್ಲಿ ಆಯೋಜಿಸಿದ್ದ 75 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಅವರು ಆಗಮಿಸಿದ್ದರು.
ಇದನ್ನೂ ಓದಿ: ಪಠ್ಯ-ಪುಸ್ತಕದಲ್ಲಿ ನಾರಾಯಣಗುರು ವಿಷಯ ಕೈಬಿಟ್ಟಿಲ್ಲ: ಕೋಟ ಶ್ರೀನಿವಾಸ ಪೂಜಾರಿ