ರಾಯಚೂರು: ಅಡ್ಡ ಬಂದ ನಾಯಿ ಉಳಿಸಲು ಹೋಗಿ ನಿಯಂತ್ರಣ ಕಳೆದುಕೊಂಡಿದ್ದರಿಂದ ಕಾರು ಪಲ್ಟಿಯಾಗಿ ವ್ಯಕ್ತಿಯೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ರಾಯಚೂರು ತಾಲೂಕಿನ ಕೆರೆಬೂದೂರು ಗ್ರಾಮದಲ್ಲಿ ಸಂಭವಿಸಿದೆ.
ರಾಯಚೂರಿನ ಏಗನೂರು ಟೆಂಪಲ್ ಹತ್ತಿರದ ಲಕ್ಷ್ಮೀಪುರಂ ಲೇಔಟ್ ನಿವಾಸಿ ಸುಧೀಂದ್ರ(44) ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ. ತುಂಗಭದ್ರಾ ಗ್ರಾಮದಲ್ಲಿ ತಮ್ಮ ಕೆಲಸ ಮುಗಿಸಿ ವಾಪಸ್ ಬರುವಾಗ ಅಪಘಾತ ಸಂಭವಿಸಿದೆ.
![ರಾಯಚೂರಲ್ಲಿ ಅಪಘಾತ](https://etvbharatimages.akamaized.net/etvbharat/prod-images/kn-rcr-01-accident-death-ka10035_09102022204555_0910f_1665328555_579.jpg)
ಕಾರಲ್ಲಿ ಸುಧೀಂದ್ರ ವಾಪಸ್ ಬರುವಾಗ ಕಾರಿಗೆ ಏಕಾಏಕಿ ನಾಯಿ ಅಡ್ಡ ಬಂದಿದೆ. ಆಗ ಅದರ ಜೀವವನ್ನು ಉಳಿಸಲು ಕಾರು ಪಕ್ಕಕ್ಕೆ ತಿರುಗಿಸಿದ್ದಾರೆ. ಆಗ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ. ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಓದಿ: ಹುಕ್ಕೇರಿಯಲ್ಲಿ ಭೀಕರ ಸರಣಿ ಅಪಘಾತ: ತಾಯಿ ಮತ್ತು ಆರು ಮರ್ಷದ ಮಗ ಸ್ಥಳದಲ್ಲೇ ಸಾವು)