ETV Bharat / state

ಎರಡು ರೈಲುಗಳಲ್ಲಿ ರಾಯಚೂರಿಗೆ 70 ಜನರ ಆಗಮನ... ಸ್ಟೇಷನ್​ನಲ್ಲೇ ಆರೋಗ್ಯ ತಪಾಸಣೆ - ರಾಯಚೂರಿಗೆ ರೈಲು ಮೂಲಕ ವಲಸಿಗರು ಆಗಮನ

ರೈಲು ಸಂಚಾರ ಆರಂಭವಾದ ಹಿನ್ನೆಲೆ ರಾಯಚೂರು ಜಿಲ್ಲೆಗೆ 2 ರೈಲು​ಗಳಲ್ಲಿ ಸುಮಾರು 70 ಜನರು ಆಗಮಿಸಿದ್ದಾರೆ. ಅವರಿಗೆ ಆರೋಗ್ಯ ತಪಾಸಣೆ ಮಾಡಲಾಗಿದೆ.

70 migrant people came by train to raichur
ರಾಯಚೂರಿಗೆ 70 ಜನ ಆಗಮನ
author img

By

Published : Jun 2, 2020, 11:54 AM IST

ರಾಯಚೂರು: ದೇಶದಲ್ಲಿ ರೈಲು ಸಂಚಾರ ಆರಂಭವಾದ ಹಿನ್ನೆಲೆ ರಾಯಚೂರು ಜಿಲ್ಲೆಗೆ ಉದ್ಯಾನ್ ಎಕ್ಸ್​​ಪ್ರೆಸ್ ಹಾಗೂ ತಿರುಪತಿ-ನಿಜಾಮುದ್ದೀನ್ ರೈಲುಗಳು ಆಗಮಿಸಿವೆ.

ರಾಯಚೂರಿಗೆ 70 ಜನರ ಆಗಮನ

ಎರಡು ರೈಲುಗಳಲ್ಲಿ ಮುಂಬೈನಿಂದ 24 ಜನ, ಆಂಧ್ರ ಪ್ರದೇಶದಿಂದ 46 ಜನ ಆಗಮಿಸಿದ್ದಾರೆ. ರೈಲಿನಿಂದ ಆಗಮಿಸಿದವರ ಆರೋಗ್ಯ ತಪಾಸಣೆ ಮಾಡಲಾಯಿತು. ಮುಂಬೈನಿಂದ ಆಗಮಿಸಿದವರನ್ನ ಸಾಂಸ್ಥಿಕ ಕ್ವಾರಂಟೈನ್​​ಗೆ ರವಾನಿಸಲಾಯಿತು. ಆಂಧ್ರ ಪ್ರದೇಶದಿಂದ ಆಗಮಿಸಿದವರಿಗೆ 14 ದಿನಗಳ ಕಾಲ ಹೋಮ್ ಕ್ವಾರಂಟೈನ್ ಮಾಡಲಾಯಿತು.

ರೈಲ್ವೆ ಸಂಚಾರ ಆರಂಭಕ್ಕೂ ಮುನ್ನ ಜಿಲ್ಲಾಡಳಿತ ಸಭೆ ನಡೆಸುವ ಮೂಲಕ ಅಗತ್ಯ ಸಿದ್ಧತೆ ಮಾಡಿಕೊಂಡಿತ್ತು. ರೈಲುಗಳಲ್ಲಿ ಆಗಮಿಸಿದ ಜನರನ್ನ ಬರಮಾಡಿಕೊಳ್ಳಲಾಯಿತು. ಈ ವೇಳೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ, ಪೊಲೀಸ್ ಇಲಾಖೆಯ ಅಧಿಕಾರಿಗಳು, ರೈಲ್ವೆ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರರು ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.