ETV Bharat / state

ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳು ಸಿರಿಧಾನ್ಯಕ್ಕೆ ಹೆಸರಾಗಬೇಕು: ನಿರ್ಮಲಾ ಸೀತಾರಾಮನ್

ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳು ಸಿರಿಧಾನ್ಯಕ್ಕೆ ಹೆಸರಾಗಬೇಕೆಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕರೆ ನೀಡಿದರು.

minister Nirmala Sitharaman
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
author img

By

Published : Aug 27, 2022, 8:16 PM IST

ರಾಯಚೂರು: ಕರ್ನಾಟಕದ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳು ಕಾಫಿಗೆ ಫೇಮಸ್ ಆದಂತೆ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳು ಸಿರಿಧಾನ್ಯಕ್ಕೆ ಹೆಸರಾಗಬೇಕೆಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕರೆ ನೀಡಿದರು. ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ಸಿರಿಧಾನ್ಯ ಮೇಳೆ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

ಸಿರಿಧಾನ್ಯಗಳು ಬೆಳೆಯುವ ಪ್ರದೇಶ ಕಡಿಮೆಯಾಗುತ್ತಿದೆ. ಸಿರಿಧಾನ್ಯ ಬೆಳೆಯಲು ಉತ್ತೇಜನ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ 2023ನೇ ವರ್ಷವನ್ನು ಸಿರಿಧಾನ್ಯ ವರ್ಷ ಎಂದು ಘೋಷಣೆ ಮಾಡಲಾಗಿದೆ. ಸಿರಿಧಾನ್ಯಗಳ ಮೇಳಗಳು, ಸಮಾವೇಶಗಳನ್ನು ಆಯೋಜಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಸಿರಿಧಾನ್ಯ ಸಮಾವೇಶದಲ್ಲಿ ಕೈಗೊಳ್ಳುವಂತಹ ತಿರ್ಮಾನಗಳನ್ನು ಅನುಷ್ಟಾನಗೊಳಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ ಎಂದರು.

ದೇಶದ ಅನೇಕ ರಾಜ್ಯಗಳಲ್ಲಿ ಸಿರಿಧಾನ್ಯ ಬೆಳೆಯಲಾಗುತ್ತಿದೆ. ಸ್ಟಾರ್ಟ ಅಪ್​ಗಳು ಎಫ್​ಪಿಒಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ. ಶೇ.60ರಷ್ಟು ಸಿರಿಧಾನ್ಯ ಬೆಳೆಯುವ ಪ್ರದೇಶ ತಗ್ಗಿರುವುದು ಆತಂಕಕಾರಿ ವಿಷಯ. ಇದನ್ನು ಪುನಃ ಪ್ರೋತ್ಸಾಹಿಸಲು ಸಾವಿರಾರು ಕೋಟಿ ರೂಪಾಯಿಯನ್ನು ವಿನಿಯೋಗಿಸುವ ಮೂಲಕ ಮತ್ತೆ ಸಿರಿಧಾನ್ಯ ಬೆಳೆಯಲು ಪ್ರೋತ್ಸಾಹಿಸಲಾಗಿದ್ದು, ಇದು ಸವಾಲಾಗಿದೆ ಎಂದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

2018ರಲ್ಲೇ ದೇಶದಲ್ಲಿ ಸಿರಿಧಾನ್ಯ ಕಾರ್ಯಕ್ರಮ ಆಚರಿಸಲಾಗಿತ್ತು. ನಂತರ ವಿಶ್ವಮಟ್ಟದಲ್ಲಿ ಅದನ್ನು ಕೊಂಡೊಯ್ಯುವ ಕಾರ್ಯಕ್ಕೆ ಕೇಂದ್ರ ಮುಂದಾಯಿತು. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನದಿಂದ ಇಂದು ವಿಶ್ವಮಟ್ಟದಲ್ಲಿ ಸಿರಿಧಾನ್ಯಗಳ ಬಗ್ಗೆ ಚರ್ಚೆ ಆರಂಭವಾಗಿದೆ. ಕರ್ನಾಟಕ ಸಿರಿಧಾನ್ಯ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಅತಿ ಹೆಚ್ಚು ಸಿರಿಧಾನ್ಯ ರಫ್ತು ಮಾಡುವಲ್ಲಿ ದೇಶ ಐದನೇ ಸ್ಥಾನದಲ್ಲಿದೆ ಎಂದರು.

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಪರಿಣಾಮದಿಂದಾಗಿ ಜಾಗಕತಿಕ ಮಟ್ಟದಲ್ಲಿ ಆಹಾರದ ಮೇಲೆ ಗಂಭೀರ ಪರಿಣಾಮ ಬೀರಿದೆ. ಕೇವಲ ಆಹಾರೋತ್ಪಾದನೆಯಿಂದ ಉಪಯೋಗವಿಲ್ಲ. ಪೌಷ್ಟಿಕಾಹಾರ ಉತ್ಪಾದನೆ ಈಗಿನ ಗುರಿಯಾಗಿದೆ. ಸಿರಿಧಾನ್ಯದಿಂದ ಮಾತ್ರ ಪೌಷ್ಟಿಕಾಂಶ ಬೆಳೆ ಬೆಳೆಯಲು ಸಾಧ್ಯ ಎಂದರು.

ಇದನ್ನೂ ಓದಿ: ಮಹಾರಾಜ ಟ್ರೋಫಿ ಫೈನಲ್‌.. ಚಾಂಪಿಯನ್‌ ಪಟ್ಟ ಮುಡಿಗೇರಿಸಿ ಕೊಂಡ ಗುಲ್ಬರ್ಗ ಮಿಸ್ಟಿಕ್ಸ್‌

ನಾವು ಅತ್ಮನಿರ್ಭರತೆಯನ್ನು ಸಿರಿಧಾನ್ಯ ಬೆಳೆಯುವಲ್ಲಿಯೂ ಸಾಧಿಸಬೇಕಿದೆ.‌ ಮಹಿಳೆಯರ ಪಾಲ್ಗೊಳ್ಳುವಿಕೆ ಅವಶ್ಯಕವಾಗಿದೆ. ಮೌಲ್ಯವರ್ಧನೆ ಕೂಡಾ ಪ್ರಮುಖ ಪಾತ್ರವಹಿಸಲಿದೆ. ಕಲ್ಯಾಣ ಕರ್ನಾಟಕದಲ್ಲಿ ಸ್ಥಾಪಿಸುವ ಆಹಾರ ಸಂಸ್ಕರಣ ಘಟಕಗಳು ಅನೇಕ ‌ಮಹಿಳೆಯರಿಗೆ ಉದ್ಯೋಗ ಕೊಡಲಿದೆ ಎಂದರು. ಸಿರಿಧಾನ್ಯ ಪ್ರೊಸೆಸ್​ ಯೂನಿಟ್​ಗಳಿಗೆ ಐದು ವರ್ಷಗಳ ಕಾಲ ಆದಾಯ ತೆರಿಗೆಯಿಂದ ಮುಕ್ತಿ ನೀಡಲಾಗುವುದು ಎಂದು ಇದೇ ವೇಳೆ ಘೋಷಣೆ ಮಾಡಿದರು. ಬರುವ ಜಿ-20 ಶೃಂಗ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಸಿರಿಧಾನ್ಯದಲ್ಲಿ ಮಾಡಿದ ಸಾಧನೆ ಗಮನ ಸೆಳೆಯಬೇಕು ಎನ್ನುವುದು ಕೇಂದ್ರದ ಆಶಯವಾಗಿದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.