ರಾಯಚೂರು: ಕೊರೊನಾ ವೈರಸ್ ಪ್ರೇರಿತ ಲಾಕ್ಡೌನ್ನಿಂದ ತತ್ತರಿಸಿದ್ದ ರಾಯಚೂರಿನ ಜನತೆಗೆ ಈಗ ರಣ ಬಿಸಿಲಿನ ಕಾಟ ಶುರುವಾಗಿದೆ. ಜಿಲ್ಲೆಯಲ್ಲಿ ನಾಲ್ಕೈದು ದಿನಗಳಿಂದ 40 - 43 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪಮಾನ ದಾಖಲಾಗಿದೆ.
ಕೊರೊನಾ ಸೋಂಕಿನ ಭೀತಿ ನಡುವೆ ಬಿಸಿಲೂರು ಜನತೆ ಬಿಸಿಲಿನ ತಾಪಮಾನದ ಏರಿಕೆ ತತ್ತರಿಸುವಂತೆ ಮಾಡಿದೆ. ಸಾಮಾನ್ಯವಾಗಿ ಮಾರ್ಚ್ನಿಂದ ಆರಂಭವಾಗುವ ಬೇಸಿಗೆ ಸಮಯದಲ್ಲಿ 40 ಡಿಗ್ರಿ ಸೆಲ್ಸಿಯಸ್ವರೆಗೂ ಉಷ್ಣಾಂಶ ಕಂಡು ಬರುತ್ತದೆ. ಆದರೆ ಈ ಬಾರಿ ಅದು 43 ಡಿಗ್ರಿ (ಮೇ 23, 24 ರಂದು) ತಾಪಮಾನಕ್ಕೆ ತಲುಪಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಉಷ್ಣಾಂಶ ಈ ಬಾರಿ 1 ರಿಂದ 1.5 ಡಿಗ್ರಿ ಏರಿಕೆ ಕಂಡಿದೆ. ಇದರಿಂದ ಜಿಲ್ಲೆಯ ಜನತೆ ಮನೆ ಬಿಟ್ಟು ಹೊರಗಡೆ ಬಾರದಂತಾಗಿದೆ. ಜನರು ಛತ್ರಿ, ಟವಲ್, ಪಟಗ, ಟೋಪಿಗಳ ಮೊರೆ ಹೋಗಿದ್ದಾರೆ. ವಾಹನ ಸಂಚಾರವೂ ವಿರಳವಾಗಿದೆ.
ಬಿಸಿಲಿನ ತಾಪಮಾನ ಇನ್ನೂ ಕೆಲ ದಿನಗಳ ಕಾಲ ಮುಂದರೆಯುವ ಸಾಧ್ಯತೆ ಇದೆ. ಜನರು ಎಚ್ಚರವಹಿಸಬೇಕು ಎನ್ನುತ್ತಾರೆ ರಾಯಚೂರು ಕೃಷಿ ವಿವಿಯ ಹವಾಮಾನ ವಿಭಾಗದ ತಾಂತ್ರಿಕ ಅಧಿಕಾರಿ ಡಾ.ಶಾಂತಪ್ಪ.