ETV Bharat / state

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ 3.76 ಕೋಟಿ ದಾಖಲೆಯ ಹಣ ಸಂಗ್ರಹ - ಶ್ರೀಮಠದ ವ್ಯವಸ್ಥಾಪಕ ‌ಎಸ್ ಕೆ ಶ್ರೀನಿವಾಸರಾವ್

ಶ್ರೀರಾಘವೇಂದ್ರ ಸ್ವಾಮಿ ಮಠದ ಕಾಣಿಕೆ ಹುಂಡಿಯಲ್ಲಿ ದಾಖಲೆಯ 3.76 ಕೋಟಿ ಹಣ ಸಂಗ್ರಹವಾಗಿದೆ.

ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ 3.76 ಕೋಟಿ ಹಣ ಸಂಗ್ರಹ

author img

By

Published : Jul 31, 2023, 9:37 PM IST

ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ 3.76 ಕೋಟಿ ಹಣ ಸಂಗ್ರಹ

ರಾಯಚೂರು: ಕಲಿಯುಗದ ಕಾಮಧೇನು, ಭಕ್ತರ ಕಲ್ಪವೃಕ್ಷ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದ ಕಾಣಿಕೆ ಹುಂಡಿಯಲ್ಲಿ ದಾಖಲೆ ಹಣ ಸಂಗ್ರಹವಾಗಿದೆ. ರಾಯಚೂರಿಗೆ ಸಮೀಪಿಸಿರುವ ಮಂತ್ರಾಲಯದ ಶ್ರೀರಾಯರ ಮಠದಲ್ಲಿನ ಹುಂಡಿಗಳನ್ನು ತೆಗೆದು ಸೋಮವಾರ ಸಂಗ್ರಹವಾಗಿರುವ ಕಾಣಿಕೆಯ ಏಣಿಕೆ ನಡೆಸಲಾಯಿತು. ಬೆಳಗ್ಗೆಯಿಂದ ಸಂಜೆಯವರೆಗೂ ಎಣಿಕೆ ಕಾರ್ಯ ನಡೆದಿದ್ದು, ಇದುವರೆಗೆ ಸಂಗ್ರಹವಾಗಿದ್ದ ಮೊತ್ತಕ್ಕಿಂತಲೂ ದಾಖಲೆಯ ಪ್ರಮಾಣದಲ್ಲಿ ಹಣ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.

3.69 ಕೋಟಿ ರೂ. ವಿವಿಧ ಮೌಲ್ಯದ ಮುಖಬೆಲೆಯ ನೋಟುಗಳು, 7.05 ಲಕ್ಷ ರೂ. ಮೌಲ್ಯದ ನಾಣ್ಯಗಳು ಸೇರಿದಂತೆ ಒಟ್ಟು 3.76 ಕೋಟಿ ರೂ.ಗಳು ಕಾಣಿಕೆಯಾಗಿ ಬಂದಿದೆ. ಇದರ ಜೊತೆಯಲ್ಲಿ 99 ಗ್ರಾಂ ಚಿನ್ನ ಹಾಗೂ 940 ಗ್ರಾಂ ಬೆಳ್ಳಿಯನ್ನು ಭಕ್ತರು ಶ್ರೀರಾಘವೇಂದ್ರ ಸ್ವಾಮಿಗೆ ಕಾಣಿಕೆಯಾಗಿ ಸಮರ್ಪಿಸಿದ್ದಾರೆ.

ಇದುವರೆಗೆ ಭಾರಿ ಪ್ರಮಾಣದ ಹಣ ಕಾಣಿಕೆ ರೂಪದಲ್ಲಿ ಬರುತ್ತಿತ್ತು. ಆದರೆ ರಾಯರ ಆರಾಧನಾ ಮಹೋತ್ಸವ ಹಾಗೂ ವಿಶೇಷ ಕಾರ್ಯಕ್ರಮದ ಸಂದರ್ಭಗಳಲ್ಲಿ 3.30 ಕೋಟಿ‌ ರೂಪಾಯಿವರೆಗೂ ಕಾಣಿಕೆ ಬಂದಿತ್ತು. ಕಳೆದ 34 ದಿನಗಳಿಂದ 3.76 ಕೋಟಿ ರೂಪಾಯಿವರೆಗೂ ಅತ್ಯಧಿಕ ಕಾಣಿಕೆಯನ್ನು ಭಕ್ತರು ಅರ್ಪಿಸಿದ್ದಾರೆ.

ಇಷ್ಟಾರ್ಥ ಈಡೇರಿಸುವಂತೆ ರಾಯರನ್ನ ಪ್ರಾರ್ಥಿಸಿದ ಭಕ್ತರು: ರಾಯರ ಮೂಲ ಬೃಂದಾವನದ ದರ್ಶನಕ್ಕಾಗಿ ದೇಶದ ಹಾಗೂ ರಾಜ್ಯದ ನಾನಾ ಮೂಲೆಗಳಿಂದ ಭಕ್ತರು ಆಗಮಿಸುತ್ತಾರೆ. ಈಗಿನ ಪೀಠಾಧಿಪತಿ ಶ್ರೀಸುಭುದೇಂಧ್ರ ತೀರ್ಥರು ಪೀಠಾರೋಹಣದ ನಂತರ ದಿನದಿಂದ ದಿನಕ್ಕೆ ಭಕ್ತರು ಬರುವ ಸಂಖ್ಯೆ ಅಧಿಕವಾಗುತ್ತಿದ್ದು, ದರ್ಶನಕ್ಕೆ ಬರುವ ಭಕ್ತರು ತಮ್ಮ ಇಷ್ಟಾರ್ಥ ಈಡೇರಿಸಲು ರಾಯರು ಬೇಡಿಕೊಳ್ಳುತ್ತಿದ್ದಾರೆ. ಜೊತೆಗೆ ಕಾಣಿಕೆಯನ್ನು ಸಮರ್ಪಿಸುತ್ತಿದ್ದಾರೆ.

ದಾಖಲೆಯ ಕಾಣಿಕೆ ಸಂಗ್ರಹವಾಗಿದೆ: ಈ ಬಗ್ಗೆ ಶ್ರೀಮಠದ ವ್ಯವಸ್ಥಾಪಕ ‌ಎಸ್ ಕೆ ಶ್ರೀನಿವಾಸರಾವ್ ದೂರವಾಣಿ ಮೂಲಕ ಸಮರ್ಪಿಸಿದಾಗ, ಶ್ರೀಮಠ ಹುಂಡಿಗಳಿಗೆ ಈ ತಿಂಗಳಲ್ಲಿ ಬಂದ ಕಾಣಿಕೆ ಇದುವರೆಗಿನ ತಿಂಗಳುಗಳ ಕಾಣಿಕೆಗೆ ಹೋಲಿಸಿದಲ್ಲಿ ಹೆಚ್ಚಿನ ಮೊತ್ತವಾಗಿದೆ. ಈ ಹಿಂದೆ 3.30 ಕೋಟಿ ರೂ. ವರೆಗೆ ಕಾಣಿಕೆಯಾಗಿ ಬಂದಿತ್ತು. ಈ ತಿಂಗಳು ಇದುವರೆಗೆ ಸಂಗ್ರಹವಾಗಿರುವುದಕ್ಕಿಂತಲೂ ದಾಖಲೆಯ ಕಾಣಿಕೆ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

2.72 ಕೋಟಿ ರೂಪಾಯಿ ಸಂಗ್ರಹ: ಇನ್ನೊಂದೆಡೆ ಮಂತ್ರಾಲಯದ ಶ್ರೀರಾಘವೇಂದ್ರ ‌ಸ್ವಾಮಿ ಮಠದ ಹುಂಡಿಯಲ್ಲಿ‌ (ಆಗಸ್ಟ್​ 30-2022) ಕೋಟ್ಯಂತರ ರೂಪಾಯಿ ಕಾಣಿಕೆ ಸಲ್ಲಿಸಿದ್ದರು. ಆಗಸ್ಟ್ ತಿಂಗಳಲ್ಲಿ ಹುಂಡಿಯಲ್ಲಿ ಬರೋಬ್ಬರಿ 2.78 ಕೋಟಿ ರೂಪಾಯಿ ಹಣ ಸಂಗ್ರಹವಾಗಿತ್ತು. ಇದರಲ್ಲಿ 2.72 ಕೋಟಿ ರೂಪಾಯಿ ವಿವಿಧ ಮುಖಬೆಲೆಯ ನೋಟುಗಳು ಹಾಗೂ 5.89 ಲಕ್ಷ ರೂಪಾಯಿ ಮೌಲ್ಯದ ನಾಣ್ಯಗಳು ಹುಂಡಿಯಲ್ಲಿ ಸಂಗ್ರಹವಾಗಿದ್ದವು.

ಆಗಸ್ಟ್ ತಿಂಗಳಲ್ಲಿ‌ ರಾಯರ 351ನೇ ಆರಾಧನಾ‌ ಮಹೋತ್ಸವ ಅದ್ದೂರಿಯಾಗಿ ನಡೆದಿದ್ದು, ಅಪಾರ ಸಂಖ್ಯೆಯಲ್ಲಿ ಭಕ್ತರು ಶ್ರೀಮಠಕ್ಕೆ ಆಗಮಿಸಿದ್ದರು. ಅಲ್ಲದೇ ಕಾಣಿಕೆ ಎಣಿಕೆ ಸಮಯದಲ್ಲಿ ಭಕ್ತರು ಒಬ್ಬರು ₹10 ರೂಪಾಯಿ ಮೌಲ್ಯದ ನೋಟಿನ ಹಾರ ವಿಶೇಷವಾಗಿ ಗಮನ ಸೆಳೆದಿತ್ತು. ಕಾಣಿಕೆ ಜತೆಯಲ್ಲಿ ಬಂಗಾರ ಹಾಗೂ ಬೆಳ್ಳಿಯನ್ನು ಕಾಣಿಕೆಯಾಗಿ ಸಲ್ಲಿಸಿದ್ದರು. 65 ಗ್ರಾಂ ಬಂಗಾರ ಹಾಗೂ 1150 ಗ್ರಾಂ ಬೆಳ್ಳಿಯ ಆಭರಣಗಳು ಭಕ್ತರು ರಾಯರಿಗೆ ಕಾಣಿಕೆ ರೂಪದಲ್ಲಿ ಸಲ್ಲಿಸಿದ್ದರು. ಈ ವೇಳೆ ಶ್ರೀಮಠದ ವ್ಯವಸ್ಥಾಪಕ ಎಸ್. ಕೆ ಶ್ರೀನಿವಾಸ ರಾವ್ ಇದ್ದರು.

ಇದನ್ನೂ ಓದಿ: ಮಂತ್ರಾಲಯ ಮಠ ಕಾಣಿಕೆ ಹುಂಡಿ ಎಣಿಕೆ.. 2.78 ಕೋಟಿ ರೂ. ಹಣ ಸಂಗ್ರಹ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.