ರಾಯಚೂರು: ಶಾಲೆಗೆ ತೆರಳಲು ಇಷ್ಟವಿಲ್ಲದ ವಿದ್ಯಾರ್ಥಿಯೋರ್ವ ಶಾಲಾ ಆವರಣದಲ್ಲಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜಿಲ್ಲೆಯ ಮಸ್ಕಿಯ ತಾಲೂಕಿನ ಡೋಣಮರಡಿ ಶಾಲಾ ಆವರಣದಲ್ಲಿ 8ನೇ ತರಗತಿ ಬಾಲಕ ನೇಣು ಹಾಕಿಕೊಂಡಿದ್ದಾನೆ.
ಲಿಂಗಸೂಗೂರು ತಾಲೂಕಿನ ಅನ್ವರಿ ಗ್ರಾಮದ 14 ವರ್ಷದ ಬಾಲಕ ಮಾನವಿಯ ಖಾಸಗಿ ಶಾಲೆಯ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಶಾಲೆಗೆ ತೆರಳಲು ಅನುಕೂಲವಾಗಲಿ ಎಂದು ಮಲ್ಲದಗುಡ್ಡ ಗ್ರಾಮದಲ್ಲಿನ ಸಂಬಂಧಿಕರ ಮನೆಯಲ್ಲಿ ಬಾಲಕನನ್ನು ಪೋಷಕರು ಬಿಟ್ಟಿದ್ದರು. ಬಾಲಕನಿಗೆ ಶಾಲೆಗೆ ಹೋಗಲು ಇಷ್ಟ ಇರಲಿಲ್ಲವಂತೆ. ಇಂದು ಶಾಲೆಗೆ ಹೋಗುವುದಾಗಿ ಹೇಳಿ ಹೋದ ಬಾಲಕ ಡೋಣಮರಡಿಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಕವಿತಾಳ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಬಾಲಕನ ಮೃತ ದೇಹವನ್ನು ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ. ಕವಿತಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಇದನ್ನೂ ಓದಿ: ಅವಂತಿಪೋರಾ ಎನ್‌ಕೌಂಟರ್: ಮತ್ತೊಬ್ಬ ಉಗ್ರನ ಹತ್ಯೆಗೈದ ಸೇನೆ)