ETV Bharat / state

Mysore accident: ಭೀಕರ ರಸ್ತೆ ಅಪಘಾತ.. ಮೀಸಲು ಪಡೆಯ ಇಬ್ಬರು ಕಾನ್ಸ್​ಟೇಬಲ್​ ಸಾವು - ಈಟಿವಿ ಭಾರತ್​ ಕರ್ನಾಟಕ

ಮೈಸೂರಿನ ರಾಜ್ಯ ಮೀಸಲು ಪೊಲೀಸ್ ಪಡೆಯ 5ನೇ ಬೆಟಾಲಿಯನ್​ನ ಇಬ್ಬರು ಕಾನ್ಸ್​ಟೇಬಲ್​ಗಳು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಮೈಸೂರು ಅಪಘಾತ
ಮೈಸೂರು ಅಪಘಾತ
author img

By

Published : Aug 14, 2023, 5:51 PM IST

Updated : Aug 14, 2023, 6:03 PM IST

ಮೈಸೂರು : ಭಾನುವಾರ ರಾತ್ರಿ ನಗರದ ಲಲಿತಮಹಲ್ ಹೋಟೆಲ್ ಸಮೀಪದ ರಸ್ತೆಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ರಾಜ್ಯ ಮೀಸಲು ಪೊಲೀಸ್ ಪಡೆಯ 5ನೇ ಬೆಟಾಲಿಯನ್​ನ ಇಬ್ಬರು ಕಾನ್ಸ್​ಟೇಬಲ್​ಗಳು ಸಾವಿಗೀಡಾಗಿದ್ದಾರೆ. ಮೈಸೂರಿನ ಕುಂಬಾರಕೊಪ್ಪಲು ಬಡಾವಣೆ ನಿವಾಸಿ ಪಿ.ಮಹೇಶ್ (23) ಹಾಗೂ ವಿಜಯಪುರ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಅಮರನಾಥ ತಾಳಿಕೋಟೆ (24) ಮೃತಪಟ್ಟವರು.

ನಗರದ ಸಿದ್ದಾರ್ಥ ಬಡಾವಣೆ ಸಮೀಪದ ಫುಡ್ ಸ್ಟ್ರೀಟ್ ನಲ್ಲಿ ಊಟ ಸೇವಿಸಿದ ಬಳಿಕ ತಮ್ಮ ಪಲ್ಸರ್ ಬೈಕಿನಲ್ಲಿ ಕೆಎಸ್​ಆರ್​ಪಿ ಬೆಟಾಲಿಯನ್ ಕೇಂದ್ರದತ್ತ ಇವರು ತೆರಳುತ್ತಿದ್ದರು. ಈ ವೇಳೆ ಎದುರುಗಡೆಯಿಂದ ವೇಗವಾಗಿ ಬಂದ ವಾಹನವೊಂದು ಇವರ ಬೈಕ್​ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸುಮಾರು 10 ಮೀಟರ್ ದೂರ ಹೋಗಿ ಬಿದ್ದಿದ್ದರೆ, ಇಬ್ಬರೂ ಕಾನ್ಸ್​ಟೇಬಲ್​ಗಳು ಮೇಲೆಕ್ಕೆ ತೂರಿ ನೆಲಕ್ಕೆ ಅಪ್ಪಳಿಸಿದ್ದಾರೆ. ಇದರಿಂದಾಗಿ ಇಬ್ಬರ ತಲೆಗೆ ತೀವ್ರ ಸ್ವರೂಪದ ಪೆಟ್ಟಾಗಿ ರಕ್ತಸ್ರಾವವಾಗಿ ಸ್ಥಳದಲ್ಲೇ ಅಸುನೀಗಿದ್ದಾರೆ.

ಮತ್ತೊಂದೆಡೆ ಘಟನೆ ಬಳಿಕ ಅಪಘಾತ ಎಸಗಿದ ವಾಹನ ಸವಾರ ತನ್ನ ವಾಹನದೊಂದಿಗೆ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ, ಅಷ್ಟರಲ್ಲಿ ಎಚ್ಚೆತ್ತುಕೊಂಡ ಸಾರ್ವಜನಿಕರು ಆತನ‌ ವಾಹನ ಬೆಂಬತ್ತಿ ಆಲನಹಳ್ಳಿ ಸಮೀಪದ ರಿಂಗ್ ರಸ್ತೆ ಬಳಿ ವಾಹನಕ್ಕೆ ಅಡ್ಡಲಾಗಿ ನಿಂತು ಆರೋಪಿಯನ್ನು ಹಿಡಿದಿದ್ದಾರೆ. ಬಳಿಕ ವಿಚಾರ ತಿಳಿದ ತಕ್ಷಣವೇ ಸಿದ್ದಾರ್ಥನಗರ ಸಂಚಾರಿ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ : ಧಾರವಾಡ: ಹೆದ್ದಾರಿ ಡಿವೈಡರ್​ಗೆ ಕಾರು ಡಿಕ್ಕಿ.. ಇಬ್ಬರು ಸಾವು

ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆ ಸೋಮವಾರ ಬೆಳಗ್ಗೆ ಕೆ ಆರ್ ಆಸ್ಪತ್ರೆಯ ಶವಾಗಾರದಲ್ಲಿ ನಡೆದ ಬಳಿಕ ಸರ್ಕಾರಿ ಗೌರವ ಸಲ್ಲಿಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು. ಅಮರನಾಥ ಅವರ ಮೃತದೇಹವನ್ನು ಆಂಬ್ಯುಲೆನ್ಸ್ ಮೂಲಕ ಜಮಖಂಡಿಗೆ ಕಳುಹಿಸಲಾಗಿದ್ದು, ಇದಕ್ಕಾಗಿ ಓರ್ವ ಇನ್ಸ್‌ಪೆಕ್ಟರ್ ಹಾಗೂ ಇಬ್ಬರು ಸಿಬ್ಬಂದಿಯನ್ನು ಕಳುಹಿಸಿಕೊಡಲಾಗಿದೆ. ಮಹೇಶ್ ಅವರ ಅಂತ್ಯಕ್ರಿಯೆ ಸೋಮವಾರ ಸಂಜೆ ನಡೆಯಿತು. ಅಮರನಾಥ್ ತಾಳೀಕೋಟೆ ಅವರ ಅಂತ್ಯಕ್ರಿಯೆ ಮಂಗಳವಾರ ನಡೆಯಲಿದೆ.

ಮಹೇಶ್ ಹಾಗೂ ಅಮರನಾಥ ತಾಳಿಕೋಟೆ ಅವರು 2017ನೇ ಬ್ಯಾಚ್​ನವರಾಗಿದ್ದಾರೆ. ಅವರಿಗೆ ಸರ್ಕಾರದಿಂದ ಸಲ್ಲಬೇಕಾದ ಎಲ್ಲಾ ಸವಲತ್ತುಗಳು ತಲುಪಲಿವೆ.‌ ಕುಟುಂಬದ ಒಬ್ಬರಿಗೆ ಉದ್ಯೋಗ, ಕರ್ತವ್ಯ ನಿರತರಾಗಿದ್ದ ವೇಳೆ ಸಂಭವಿಸುವ ಅಪಘಾತದಲ್ಲಿ ಮೃತರಾದರೆ ನೀಡುವ 20 ಲಕ್ಷ ರೂಪಾಯಿ ವಿಮೆ ಹಣ, ಸರ್ಕಾರದಿಂದ 25 ರಿಂದ 30 ಲಕ್ಷ ರೂ, ರಜೆ ಪರಿಹಾರ, ಕೆಜೆಐಡಿ ಹಣ ಅವರ ಪಾಲಿಗೆ ಸಿಗಲಿದೆ‌‌ ಎಂದು ಮೈಸೂರಿನ ರಾಜ್ಯ ಮೀಸಲು ಪೊಲೀಸ್ ಪಡೆಯ 5ನೇ ಬೆಟಾಲಿಯನ್ ಕಮಾಂಡೆಂಟ್ ಜನಾರ್ಧನ್ ತಿಳಿಸಿದರು.

ಇದನ್ನೂ ಓದಿ : Bengaluru accident: ನಿದ್ದೆ ಮಂಪರಿನಲ್ಲಿ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ; ಬೆಂಗಳೂರಿನಲ್ಲಿ ಇಬ್ಬರು ವಿದ್ಯಾರ್ಥಿಗಳು ಸಾವು

Last Updated : Aug 14, 2023, 6:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.