ETV Bharat / state

ಅಕ್ಕನ ಮದುವೆ ದಿನವೇ ತಮ್ಮ ರಸ್ತೆ ಅಪಘಾತದಲ್ಲಿ ದುರ್ಮರಣ

ಬನ್ನೂರು ಬಳಿಯ ಹೆದ್ದಾರಿಯಲ್ಲಿ ಬೈಕ್​ ಮತ್ತು ಟ್ರ್ಯಾಕ್ಟರ್​ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ರಸ್ತೆ ಅಪಘಾತ
ರಸ್ತೆ ಅಪಘಾತ
author img

By

Published : May 25, 2023, 7:02 PM IST

Updated : May 25, 2023, 7:11 PM IST

ಮೈಸೂರು: ಅಕ್ಕನ ಮದುವೆಗೆಂದು ಕಲ್ಯಾನ ಮಂಟಪಕ್ಕೆ ಬೈಕಿನಲ್ಲಿ ಹೋಗುತ್ತಿದ್ದ ತಮ್ಮನಿಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಟಿ.ನರಸೀಪುರ ತಾಲೂಕಿನ ಬನ್ನೂರು ಬಳಿ ನಡೆದಿದೆ. ಮೃತನನ್ನು ಬನ್ನೂರು ಸಮೀಪದ ಮಲಿಯೂರು ಗ್ರಾಮದ ಶಿವು (24) ಎಂದು ಗುರುತಿಸಲಾಗಿದೆ. ಬನ್ನೂರು ಬಳಿಯ ಹೆದ್ದಾರಿಯಲ್ಲಿ ಮೃತ ಶಿವು ಬೈಕ್​ನಲ್ಲಿ ತೆರಳುವಾಗ ಎದುರುಗಡೆ ಬಂದ ಟ್ರ್ಯಾಕ್ಟರ್ ನಡುವೆ ಮುಖಾಮುಖಿಯಾಗಿ ಅಪಘಾತ ಸಂಭವಿಸಿದೆ.

ಇದನ್ನೂ ಓದಿ : ಅನೈತಿಕ ಸಂಬಂಧದ ವಿಚಾರಕ್ಕೆ ಯುವಕನ ಬರ್ಬರ ಕೊಲೆ.. ಮನೆಗೆ ಆಧಾರವಾಗಿದ್ದ ವ್ಯಕ್ತಿ ನಡುಬೀದಿಯಲ್ಲಿ ಹೆಣವಾದ

ಇನ್ನು ಮಾಹಿತಿ ತಿಳಿದು ತಕ್ಷಣವೇ ಸ್ಥಳಕ್ಕೆ ಬನ್ನೂರು ಠಾಣಾ ಪೋಲಿಸರು ಆಗಮಿಸಿದ್ದಾರೆ. ಸ್ಥಳದಲ್ಲಿ ಪರಿಶೀಲನೆ ನಡೆಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದು, ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ. ಈ ಸಂಬಂಧ ಟ್ರ್ಯಾಕ್ಟರ್​ನ ಚಾಲಕ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದು, ಟ್ರ್ಯಾಕ್ಟರ್​ ಅನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆಯಿಂದಾಗಿ ಮದುವೆ ಸಡಗರ ಸಂಭ್ರಮ ತುಂಬಿದ ಮನೆಯಲ್ಲಿ ದುಃಖ ಮಡುಗಟ್ಟಿದ್ದು, ಮದುವೆಯನ್ನು ಸರಳವಾಗಿ ಬೇಗ ಮುಗಿಸಿ ತಮ್ಮನ ಅಂತ್ಯಕ್ರಿಯೆಗೆ ಕುಟುಂಬಸ್ಥರು ಮದುವೆ ಕಲ್ಯಾಣ ಮಂಟಪದಿಂದಲೇ ಬಂದಿದ್ದಾರೆ.

ಟ್ರ್ಯಾಕ್ಟರ್​ ಬೈಕ್​ ಮುಖಾಮುಖಿ - ಪಿಡಿಒ ಸಾವು: ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಮುಖಾಮುಖಿಯಾಗಿ ಭೀಕರವಾಗಿ ನಡೆದ ರಸ್ತೆ ಅಪಘಾತದಲ್ಲಿ ಪಿಡಿಓ ಮೃತಪಟ್ಟ ಘಟನೆ ನಿನ್ನೆ ತಡರಾತ್ರಿ ನಡೆದಿತ್ತು. ‌ಹಾವೇರಿ ಜಿಲ್ಲೆಯ ಸವಣೂರಿನ ಶಿರಬಡಗಿ ಗ್ರಾಮ ಪಂಚಾಯಿತಿ ಪಿಡಿಒ ಸಾವನ್ನಪ್ಪಿದ್ದಾರೆ. ಮೂಲತಃ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕಣ್ಣೂರಿನವರಾದ ಶಿವಾನಂದ ಬಸಪ್ಪ ಹಡಪದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಧಾರವಾಡ ಗ್ರಾಮೀಣ ಠಾಣೆ ವ್ಯಾಪ್ತಿಯ ಯರಿಕೊಪ್ಪ ಕ್ರಾಸ ಬಳಿ ತಡರಾತ್ರಿ ಅಪಘಾತ ಸಂಭವಿಸಿದ್ದು, ಈ ಕುರಿತು ಪ್ರಕರಣ ಕೂಡ ದಾಖಲಾಗಿದೆ.

ಇದನ್ನೂ ಓದಿ : ಮೈಸೂರು: ₹30 ಲಕ್ಷ ಮೌಲ್ಯದ 100 ಮೊಬೈಲ್ ಪತ್ತೆ, ವಾರಸುದಾರರಿಗೆ ಹಸ್ತಾಂತರ

ಮೈಸೂರು ಪ್ರವಾಸಕ್ಕೆಂದು ತೆರಳಿದವರ ಟಿಟಿ ವಾಹನ ಅಪಘಾತ : ಬೇಸಿಗೆ ರಜೆ ಇರುವ ಹಿನ್ನೆಲೆ ರಾಯಚೂರು ಜಿಲ್ಲೆಯಿಂದ ಮೈಸೂರು ಜಿಲ್ಲೆಯ ಪ್ರವಾಸ ತೆರಳಿದ್ದ ಟಿಟಿ ವಾಹನಯೊಂದು ರಸ್ತೆಯಲ್ಲಿ ನಿಂತಿದ್ದ ಬಸ್​ಗೆ ಡಿಕ್ಕಿ ಹೊಡೆದಿದೆ. ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗದ ಡಿ. ಹೊಸಹಳ್ಳಿ ಬಳಿ ನಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರಿಗೆ ಗಂಭೀರ ಗಾಯಗಳಾಗಿವೆ.

ಮೃತರನ್ನು ರಾಯಚೂರು ಜಿಲ್ಲೆಯ ಸಿಂಧನೂರಿನ ವೀರೇಶ್ (30) ಶಶಿಕಲಾ (79) ಎಂದು ಗುರುತಿಸಲಾಗಿದೆ. ಗಾಯಾಳುಗಳಿಗೆ ಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು ಟಿಟಿ ವಾಹನದಲ್ಲಿ 11 ಮಂದಿ ಪ್ರಯಾಣಿಸುತ್ತಿದ್ದರು. ಈ ಸಂಬಂಧ ಹುಲಿಯೂರು ದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : 15 ದಿನದ ಹಿಂದಷ್ಟೇ ಆರಂಭವಾಗಿದ್ದ ಸ್ಪಾದಲ್ಲಿ ವೇಶ್ಯಾವಾಟಿಕೆ ದಂಧೆ: ಶಿವಮೊಗ್ಗದಲ್ಲಿ 6 ಯುವತಿಯರ ರಕ್ಷಣೆ, ದಂಪತಿ ಬಂಧನ

Last Updated : May 25, 2023, 7:11 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.