ಮೈಸೂರು: ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು ಆಕೆಯ ಪೋಷಕರು ಮನೆಗೆ ಕರೆದೊಯ್ದಾಗ ದುರಂತವೊಂದು ಸಂಭವಿಸಿದೆ. ಪತ್ನಿಯನ್ನು ಕರೆದೊಯ್ದಿದ್ದಕ್ಕೆ ಬೇಸರಗೊಂಡ ಪ್ರಿಯತಮ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.
ದೇವನೂರು ಗ್ರಾಮದ ವಿಜ್ಞೇಶ್ (22) ಆತ್ಮಹತ್ಯೆ ಮಾಡಿಕೊಂಡಿರುವ ನವ ವಿವಾಹಿತ. ತಿಂಗಳ ಹಿಂದೆ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಇದರಿಂದ ಆಗಾಗ ಯುವತಿ ಹಾಗೂ ಯುವಕನ ಮನೆಯವರಿಗೆ ಗಲಾಟೆ ನಡೆದಿತ್ತು ಎನ್ನಲಾಗ್ತಿದೆ.
ನಿನ್ನೆ ಯುವತಿಯನ್ನು ಆಕೆಯ ಪೋಷಕರು ಮನೆಗೆ ಕರೆದುಕೊಂಡು ಹೋಗಿದ್ದರು. ಇದರಿಂದ ಮಾನಸಿಕವಾಗಿ ತುಂಬ ನೊಂದಿದ್ದ ವಿಜ್ಞೇಶ್ ಇಂದು ಜಮೀನಿನ ಹೊರವಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.