ETV Bharat / state

ತಾಯಿಯ ತಾಳಿ ಕಿತ್ತಿದ ಯುವಕರು: ಸೆಲ್ಫಿ ವಿಡಿಯೋ ಮಾಡಿ ನೇಣಿಗೆ ಶರಣಾದ ಮಗ..! - young man committed suicide by making a selfie video

ಕ್ಷುಲ್ಲಕ ಕಾರಣಕ್ಕಾಗಿ ನಾಲ್ವರು ಮನೆಗೆ ನುಗ್ಗಿ ಬಾಲ್​ರಾಜ್​​ ಹಾಗೂ ತಾಯಿಯ ಮೇಲೆ ಹಲ್ಲೆ ಮಾಡಿ ತಾಯಿಯ ತಾಳಿಯನ್ನು ಸಹ ಕಿತ್ತು ಹಾಕಿದ್ದರು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿಲಾಗಿತ್ತು.

young man committed suicide by making a selfie video
ಸೆಲ್ಫಿ ವಿಡಿಯೋ ಮಾಡಿ ನೇಣಿಗೆ ಶರಣಾದ ಯುವಕ
author img

By

Published : Jun 29, 2020, 5:23 PM IST

ಮೈಸೂರು: ನ್ಯಾಯ ಸಿಗಲಿಲ್ಲ ಎಂದು ಮನನೊಂದ ಯುವಕನೊಬ್ಬ ಸೆಲ್ಫಿ ವಿಡಿಯೋ ಮಾಡಿ, ದೇವಸ್ಥಾನದ ಬಳಿಯೇ ನೇಣಿಗೆ ಶರಣಾಗಿರುವ ಘಟನೆ ಕೆ.ಆರ್ ನಗರ ತಾಲೂಕಿನ ಮೂಲೆಪೆಟ್ಟು ಗ್ರಾಮದಲ್ಲಿ ನಡೆದಿದೆ.

ಬಾಲ್​​ರಾಜ್ (23) ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದು, ಮೂಲೆಪೆಟ್ಟು ಗ್ರಾಮದಲ್ಲಿ ತನ್ನ ತಾಯಿಯೊಂದಿಗೆ ವಾಸವಾಗಿದ್ದ. ಅದೇ ಗ್ರಾಮದ 4 ಜನ ಯುವಕರು ಕ್ಷುಲ್ಲಕ ಕಾರಣಕ್ಕಾಗಿ ಮನೆಗೆ ನುಗ್ಗಿ ಬಾಲ್​ರಾಜ್​​ ಹಾಗೂ ಆತನ ತಾಯಿಯ ಮೇಲೆ ಹಲ್ಲೆ ಮಾಡಿ, ತಾಯಿಯ ತಾಳಿಯನ್ನು ಸಹ ಕಿತ್ತು ಹಾಕಿದ್ದರು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಬಾಲ್​ರಾಜ್​​ ದೂರು ನೀಡಿದ್ದ.

ಸೆಲ್ಫಿ ವಿಡಿಯೋ ಮಾಡಿ ನೇಣಿಗೆ ಶರಣಾದ ಯುವಕ

ಪೊಲೀಸರು ಹಲ್ಲೆ ಮಾಡಿದ ಯುವಕರ ಜೊತೆ ರಾಜಿ ಮಾಡಿ ಕಳುಹಿಸಿದರು ಎನ್ನಲಾಗಿದ್ದು, ಬಳಿಕ ಹಲ್ಲೆ ಮಾಡಿದ ಯುವಕರು ಗ್ರಾಮಕ್ಕೆ ಬಂದು ನಮ್ಮನ್ನು ಏನು ಮಾಡಲು ಆಗಲಿಲ್ಲ ಎಂದು ರೇಗಿಸಿದ್ದಾರೆ.

ಇದರಿಂದ ಮನನೊಂದ ನ್ಯಾಯ ಸಿಗಲಿಲ್ಲ ಎಂದು ಗ್ರಾಮದ ದಂಡಮ್ಮ ದೇವಸ್ಥಾನದ ಬಳಿ ಬಂದು ಮರಕ್ಕೆ ನೇಣು ಹಾಕಿಕೊಂಡಿದ್ದು , ಇದಕ್ಕು ಮುನ್ನ ತನಗಾದ ಅನ್ಯಾಯವನ್ನು ಸೆಲ್ಫಿ ವಿಡಿಯೋ ಮಾಡಿ ನೇಣಿಗೆ ಶರಣಾಗಿದ್ದಾನೆ. ಆದರೆ ಸೆಲ್ಫಿ ವಿಡಿಯೋ ಸರಿಯಾಗಿ ಚಿತ್ರಿಕರಿಸದೆ ಧ್ವನಿ ರೆಕಾರ್ಡ್ ಮಾತ್ರ ಚಿತ್ರಿಕರಣಗೊಂಡಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.