ETV Bharat / state

ಇಂಜಿನಿಯರ್ ಯುವಕನ ಕೈ ಹಿಡಿದ ಭೂ ತಾಯಿ... ಯುವಕರಿಗೆ ಮಾದರಿಯಾದ ಸಾವಯವ ಕೃಷಿಕ... - Organic farming of an engineering young man in Mysore

ಬಾಲ್ಯದಿಂದಲೇ ಕೃಷಿಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಮಹೇಶ್, ಇಂಜಿನಿಯರ್ ಆಗಿ ಸಾಧನೆ ಮಾಡಬೇಕೆಂದು ವಿದ್ಯಾಭ್ಯಾಸ ಮಾಡಿದ್ದರು. ಆದರೆ, ಇಂಜಿನಿಯರ್ ಆಗಬೇಕೆಂಬ ಆಸೆಗಿಂತ, ಕೃಷಿಯೇ ಮೇಲು ಎಂದು ಸಾವಯವ ಕೃಷಿಗೆ ಆಕರ್ಷಿತರಾಗಿ ಸಾಧಿಸಿದ ಇವರನ್ನು ಹಲವಾರು ಪ್ರಶಸ್ತಿಗಳು ಹುಡುಕಿ ಬಂದಿವೆ.

mahesh
ಮಹೇಶ್
author img

By

Published : Nov 8, 2020, 6:36 PM IST

Updated : Nov 8, 2020, 7:32 PM IST

ಮೈಸೂರು: ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ರಾಮೇನಹಳ್ಳಿ ಗ್ರಾಮದ ಮಹೇಶ್ ತನ್ನ ಇಂಜಿನಿಯರ್​​ ಹುದ್ದೆಯ ಆಸೆಯನ್ನು ಕೈಬಿಟ್ಟು ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮೂಲಕ ಯುವಕರಿಗೆ ಮಾದರಿಯಾಗಿದ್ದಾರೆ.

35 ವರ್ಷದ ಮಹೇಶ್ ಕಳೆದ 15 ವರ್ಷಗಳಿಂದ ಕೃಷಿಗಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ತಮಗಿರುವ 20 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಮೂಲಕ ಯಶಸ್ವಿಯಾಗಿರುವ ಮಹೇಶ್, ವಾರ್ಷಿಕವಾಗಿ ಅಂದಾಜು 2 ಲಕ್ಷ ರೂ. ಲಾಭಗಳಿಸುತ್ತಾರೆ. ಜೊತೆಗೆ ಹೈನುಗಾರಿಕೆ, ಮೀನುಗಾರಿಕೆ ಮತ್ತು ಜೇನು ಸಾಕಾಣಿಕೆ ಅವರ ಕೈ ಹಿಡಿದಿದೆ.

Mysore
ನೀರಿನ ತೊಟ್ಟಿ

ಬಾಲ್ಯದಿಂದಲೇ ಕೃಷಿಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಮಹೇಶ್, ಇಂಜಿನಿಯರ್ ಆಗಿ ಸಾಧನೆ ಮಾಡಬೇಕೆಂದು ವಿದ್ಯಾಭ್ಯಾಸ ಮಾಡಿದರು. ಆದರೆ, ಇಂಜಿನಿಯರ್ ಆಗಬೇಕೆಂಬ ಆಸೆಗಿಂತ, ಕೃಷಿಯೇ ಮೇಲು ಎಂದು ಸಾವಯವ ಕೃಷಿಗೆ ಆಕರ್ಷಿತರಾದರು. ಆರಂಭದ ದಿನಗಳಲ್ಲಿ ನಿರೀಕ್ಷಿಸಿದ ಆದಾಯ ಗಳಿಸಲು ಸಾಧ್ಯವಾಗದಿದ್ದಾಗ, ಕೃಷಿ ಇಲಾಖೆ ಅಧಿಕಾರಿಗಳ ಸಲಹೆ ಮೂಲಕ ಸಮಗ್ರ ಮತ್ತು ಸಾವಯವ ಕೃಷಿ ಕಡೆ ಗಮನ ಹರಿಸಿದರು.

ಜಮೀನಿನಲ್ಲಿ 4 ಎಕರೆಯಲ್ಲಿ ರೇಷ್ಮೆ, 4 ಎಕರೆಯಲ್ಲಿ 208 ತೆಂಗಿನ ಮರಗಳು, 2 ಎಕರೆಯಲ್ಲಿ ನೆಂದ್ರೆಬಾಳೆ ಹಣ್ಣು, ಏಲಕ್ಕಿ, ಪಚ್ಚಬಾಳೆ, 1 ಎಕರೆಯಲ್ಲಿ ವೀಳ್ಯದೆಲೆ, 50 ಸಪೋಟ ಮರ, 50 ಕ್ಕಿಂತ ಹೆಚ್ಚಿನ ಹಲಸು, ಬೀಟೆಹುಣ್ಣೆ, ಹೆಬ್ಬೆವು ಮತ್ತು ಕಹಿಬೇವು ಮರಗಳು, ರಾಗಿ, ಜೋಳ, ಭತ್ತ, ಶುಂಠಿ, ತರಕಾರಿ, ಹೂ ಸೇರಿದಂತೆ ಮುಂತಾದ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ.

ಮೀನು ಸಾಕಾಣೆಯಿಂದ ಲಾಭ: 20 ಜೇನು ಸಾಕಾಣಿಕೆ, 12 ಹಸು ಸಾಕಾಣಿಕೆ ಹಾಗೂ 4 ಎಕರೆಯಲ್ಲಿ ಮೀನು ಸಾಕಣಿಕೆ ಮಾಡುತ್ತಿದ್ದಾರೆ. ಇಷ್ಟಕ್ಕೇ ಸೀಮಿತವಾಗದ ಮಹೇಶ್ ‘ಹೊನ್ನೇರು ಮೀನುಮರಿ ಪಾಲನಾ ಕೇಂದ್ರ’ ವನ್ನು ಸ್ಥಾಪಿಸಿ ಎಂಟು ವರ್ಷಗಳಿಂದ ನಡೆಸುತ್ತಿದ್ದಾರೆ. ಮೀನುಗಾರಿಕೆ ಇಲಾಖೆ ವತಿಯಿಂದ ಕಬಿನಿಯಲ್ಲಿ ಮೀನುಮರಿಗಳನ್ನು ಖರೀದಿಸಿ ಅವುಗಳನ್ನು ತಮ್ಮ ಮೀನಿನ ತೊಟ್ಟಿಯಲ್ಲಿ ಬೆಳೆಸಿ ಮಾರಾಟ ಮಾಡುತ್ತಾರೆ. ಇಲ್ಲಿ ಕಾಟ್ಲಾ, ರೇವು, ಹುಲ್ಲುಗೆಂಡೆ, ಬ್ರಿಗಲ್, ಸಮಂತಗೆಂಡೆ ಹಾಗೂ ಮುಂತಾದ ಮೀನು ಸಾಕಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಇಲ್ಲಿಯವರೆಗೆ 10 ಲಕ್ಷದ ವರೆಗೆ ಆದಾಯ ಗಳಿಸಿದ್ದಾರೆ.

Mysore
ಮೀನು ಸಾಕಾಣಿಕೆ

ಇಲಿ,ಕಪ್ಪೆಗೆ ಹಾವು ಬಿಟ್ಟರು: ಕೃಷಿ ಸಮಸ್ಯೆಗೆ ನೈಸರ್ಗಿಕ ಪರಿಹಾರ ಹುಡುಕುವ ಮಹೇಶ್, ನೈಸರ್ಗಿಕ ಗೊಬ್ಬರ ಬಳಸುತ್ತಾರೆ. ನೈಸರ್ಗಿಕವಾಗಿ ಪರಿಹಾರ ಕಂಡುಕೊಳ್ಳುತ್ತಾರೆ. ಇಲಿಗಳು ಬೆಳೆಗಳನ್ನು ನಾಶ ಮಾಡುವುದನ್ನು ಹಾಗೂ ಮೀನುಗಳನ್ನು ಕಪ್ಪೆಗಳು ತಿನ್ನುವುದನ್ನು ತಡೆಗಟ್ಟಲು ಹೊಲದಲ್ಲಿ ಮತ್ತು ಮೀನು ಸಾಕಣಿಕೆ ತೋಟಿಗೆ ಸ್ವತಃ ತಾವೇ ಹಿಡಿದ ಹಾವುಗಳನ್ನು ಬಿಟ್ಟಿದ್ದಾರೆ. ಈ ಮೂಲಕ ಬೆಳೆ ರಕ್ಷಣೆ ಮಾಡುತ್ತಿದ್ದಾರೆ. ಇದುವರೆಗೂ ಒಟ್ಟು 200 ಹಾವುಗಳನ್ನು ಹಿಡಿದು ತಮ್ಮ ಜಮೀನಿನಲ್ಲಿ ಬಿಟ್ಟುಕೊಂಡು ತಾವು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.‘ಪಕ್ಷಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ಜಮೀನಿನಲ್ಲಿ ಆಲದ ಮರ ಮತ್ತು ಚೇರಿಮರಗಳನ್ನು ಬೆಳೆಸಿದ್ದಾರೆ. ಯಾವುದೇ ಬೆಳೆಗಳನ್ನು ಬೆಳೆಯುವ ಮೊದಲೇ ಬೆಳೆಯ ಸಂಪೂರ್ಣ ಮಾಹಿತಿ ತಿಳಿದುಕೊಳ್ಳುತ್ತೇನೆ. ಇದಕ್ಕಾಗಿ ನಿತ್ಯ 4 ಗಂಟೆಗಳ ಕಾಲ ಅಧ್ಯಯನ ಮಾಡುತ್ತೇನೆ. ರಾಸಾಯನಿಕ ಗೊಬ್ಬರ ಹಾಕದೆ ಮಣ್ಣಿನ ಫಲವತ್ತತೆ ಹೆಚ್ಚಿಸಲು ಪ್ರಯತ್ನಿಸುತ್ತೇನೆ. ಹಸು ಸಗಣಿ, ಕೋಳಿ ಮತ್ತು ಮೀನು ಸಾಕಣಿಕೆಯಿಂದ ದೊರೆಯುವ ತ್ಯಾಜ್ಯದಿಂದ ಗೊಬ್ಬರ ತಯಾರಿಸಿ ಬಳಸುತ್ತೇನೆ. ಕಳೆದ 12 ವರ್ಷಗಳಿಂದಲೂ ಸಹ ಯಾವುದೇ ರಾಸಾಯನಿಕ ಗೊಬ್ಬರಗಳನ್ನು ಸಿಂಪಡಿಸಿಲ್ಲ ಎನ್ನುತ್ತಾರೆ ಮಹೇಶ್.

Mysore
ಹಾವು ಬಿಡುತ್ತಿರುವುದು

ಪ್ರಶಸ್ತಿ ಸನ್ಮಾನ: ಸತತ ಐದು ವರ್ಷಗಳಿಂದಲೂ ಸಾವಯವ ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯುತ್ತಿರುವುದನ್ನು ಗುರುತಿಸಿದ ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ಸಂಸ್ಥೆಯು ‘ಯುವ ಕೃಷಿಕ’ ಎಂದು ಪ್ರಶಸ್ತಿ ನೀಡಿ ಗೌರವಿಸಿದೆ. 2014 ಮತ್ತು 2019ರ ರೈತ ದಸರಾದಲ್ಲಿ ಉತ್ತಮ ಕೃಷಿಕ ಪ್ರಶಸ್ತಿ ಪಡೆದಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಉತ್ಸಾಹಿ ಯುವ ಕೃಷಿಕ’ ಎಂದು ಗೌರವಿಸಲಾಗಿದೆ. ಜನಧ್ವನಿ ಬಾನುಲಿ ಕೇಂದ್ರ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳು ಇವರ ಸಾಧನೆ ಗುರುತಿಸಿ ಸನ್ಮಾನಿಸಿವೆ.

Last Updated : Nov 8, 2020, 7:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.