ETV Bharat / state

ಈ ಬಾರಿ ಅದ್ಧೂರಿ ದಸರಾ ಆಚರಣೆಯನ್ನು ಜನ ಆನಂದಿಸುತ್ತಾರೆ : ಯದುವೀರ್ ಒಡೆಯರ್ - people will enjoy the dasara celebration says yaduveer

ಎರಡು ವರ್ಷಗಳ ಬಳಿಕ ಸಾಂಕ್ರಾಮಿಕ ರೋಗದಿಂದ ಹೊರಬಂದಿದ್ದೇವೆ- ಸರ್ಕಾರ ಅದ್ಧೂರಿ ದಸರಾ ಆಚರಿಸಿದರೆ ನಾಡಿನ ಜನರು ಆನಂದಿಸುತ್ತಾರೆ- ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್

yaduveer-vodeyar-says-people-will-enjoy-governments-grand-celebration-of-dasara
ಅದ್ದೂರಿ ದಸರಾ ಆಚರಣೆಯನ್ನು ಜನ ಆನಂದಿಸುತ್ತಾರೆ : ಯದುವೀರ್ ಒಡೆಯರ್
author img

By

Published : Jul 28, 2022, 4:33 PM IST

ಮೈಸೂರು : ಎರಡು ವರ್ಷಗಳ ಬಳಿಕ ಸರ್ಕಾರ ಅದ್ಧೂರಿಯಾಗಿ ದಸರಾ ಆಚರಣೆ ಮಾಡುತ್ತಿರುವುದು ಒಳ್ಳೆಯದು. ಜನ ದಸರಾವನ್ನು ಆನಂದಿಸುತ್ತಾರೆ ಎಂದು ರಾಜ ವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.

ನಗರದಲ್ಲಿಂದು ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ಬಳಿಕ 'ಈಟಿವಿ ಭಾರತ' ಜೊತೆ ಮಾತನಾಡಿದ ಅವರು, ಎರಡು ವರ್ಷಗಳ ಬಳಿಕ ಸಾಂಕ್ರಾಮಿಕ ಪಿಡುಗಿನಿಂದ ಹೊರ ಬಂದಿದ್ದೇವೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಅದ್ಧೂರಿಯಾಗಿ ದಸರಾ ಮಾಡುತ್ತಿರುವುದು ಒಳ್ಳೆಯದು. ದಸರಾ ಆಚರಣೆಯನ್ನು ಜನರು ಆನಂದಿಸುತ್ತಾರೆ ಎಂದು ಹೇಳಿದರು.

ಅದ್ದೂರಿ ದಸರಾ ಆಚರಣೆಯನ್ನು ಜನ ಆನಂದಿಸುತ್ತಾರೆ : ಯದುವೀರ್ ಒಡೆಯರ್

ವಿಮಾನ ನಿಲ್ದಾಣಕ್ಕೆ ಒಡೆಯರ್ ಹೆಸರು ಸೂಕ್ತ : ಮೈಸೂರು ವಿಮಾನ ನಿಲ್ದಾಣಕ್ಕೆ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರನ್ನು ನಾಮಕರಣವನ್ನು ಮಾಡಿರುವುದು ಬಹಳ ಸೂಕ್ತವಾಗಿದೆ. ಆಗಿನ ಕಾಲದ ಮೈಸೂರನ್ನು ಸುವರ್ಣ ಯುಗ ಮಾಡಿದ ಅಂತಹ ರಾಜರ ಹೆಸರನ್ನು ನಾಮಕರಣ ಮಾಡಿರುವುದು ನಮ್ಮೆಲರಿಗೂ ಸಂತೋಷದ ವಿಷಯ ಎಂದು ಪ್ರತಿಕ್ರಿಯಿಸಿದರು.

ಅರಮನೆಯ ಪದವಿ ಇರುವುದರಿಂದ ನಾವು ಸಾಮಾಜಿಕ ಚಟುವಟಿಕೆಯಲ್ಲಿ ಭಾಗವಹಿಸುತ್ತಿದ್ದೇವೆ. ಅದು ನಮ್ಮ ಕರ್ತವ್ಯ. ಅದಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ಮಂಡ್ಯ ಜಿಲ್ಲೆಯ ಬೇಬಿಬೆಟ್ಟದ ಬಗ್ಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್​ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಜಾಸ್ತಿ ಮಾತನಾಡುವುದಿಲ್ಲ ಎಂದು ಇದೇ ವೇಳೆ ಹೇಳಿದರು.

ಓದಿ : ಇಂದು ರಾಜ್ಯದ ಜಲಾಶಯಗಳಲ್ಲಿ ಹೀಗಿದೆ ನೀರಿನ ಮಟ್ಟ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.