ETV Bharat / state

ನಕಲಿ ಟ್ವಿಟರ್​ ಖಾತೆ; ಸೈಬರ್​​​ ಠಾಣೆಗೆ ದೂರು ನೀಡಿದ ಯದುವೀರ್ - fake twitter

ಕಳೆದ 2 ವರ್ಷಗಳಿಂದಲೂ ನಮ್ಮ ಹೆಸರಿನಲ್ಲಿ ಟ್ವಿಟ್ಟರ್ ಖಾತೆ ಸೃಷ್ಟಿಯಾಗಿರುವುದು ಕಂಡುಬಂದಿದೆ. ಈ ಬಗ್ಗೆ ನಗರದ ಸೈಬರ್ ಕ್ರೈಮ್​ಗೆ ದೂರು ನೀಡಲಾಗಿದೆ ಎಂದಿದ್ದಾರೆ.

yaduveer odeyar
ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರು
author img

By

Published : Feb 6, 2021, 4:29 PM IST

ಮೈಸೂರು: ಕಳೆದ 2 ವರ್ಷಗಳಿಂದ ನನ್ನ ಹೆಸರಿನಲ್ಲಿ ನಕಲಿ ಟ್ವಿಟ್ಟರ್ ಖಾತೆ ತೆರೆಯಲಾಗಿದ್ದು, ಈ ಬಗ್ಗೆ ಸೈಬರ್ ಕ್ರೈಮ್​ಗೆ ದೂರು ನೀಡಲಾಗಿದೆ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್​​ ತಿಳಿಸಿದ್ದಾರೆ.

ಇಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ರಾಜ ವಂಶಸ್ಥ ಯದುವೀರ್ ಮಾಧ್ಯಮಗಳ ಜೊತೆ ಮಾತನಾಡಿ, ಕಳೆದ 2 ವರ್ಷಗಳಿಂದಲೂ ನಮ್ಮ ಹೆಸರಿನಲ್ಲಿ ಟ್ವಿಟ್ಟರ್ ಖಾತೆ ಸೃಷ್ಟಿಯಾಗಿರುವುದು ಕಂಡುಬಂದಿದೆ. ಈ ಬಗ್ಗೆ ನಗರದ ಸೈಬರ್ ಕ್ರೈಮ್​ಗೆ ದೂರು ನೀಡಲಾಗಿದೆ ಎಂದರು.

ನಕಲಿ ಟ್ವಿಟರ್​ ಖಾತೆ ತೆರೆದವರ ವಿರುದ್ಧ ಸೈಬರ್​​​ ಠಾಣೆಗೆ ದೂರು ನೀಡಿದ ಯದುವೀರ್

ರೈತರ ಪ್ರತಿಭಟನೆ ಸಂಬಂದ ಪ್ರತಿಕ್ರಿಯಿಸಿ, ಕೃಷಿ ಕಾಯ್ದೆ ವಾಪಸ್ ಪಡೆಯುವಂತೆ ರೈತರು ನಡೆಸುತ್ತಿರುವ ಹೋರಾಟದ ಬಗ್ಗೆ ಈ ಸಂದರ್ಭದಲ್ಲಿ ಹೆಚ್ಚಾಗಿ ಹೇಳುವುದು ಸರಿಯಲ್ಲ. ನಾವೆಲ್ಲ ರಾಷ್ಟ್ರದ ಏಕತೆಯನ್ನು ಬೆಂಬಲಿಸಬೇಕು, ಜೊತೆಗೆ ಬೇಗ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡರೆ ಒಳ್ಳೆಯದು. ರೈತ ಹೋರಾಟದ ಬಗ್ಗೆ ಸೆಲೆಬ್ರಿಟಿಗಳು ನೀಡುತ್ತಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ, ಅವರನ್ನೇ ಕೇಳಿ ಎಂದರು.

ಇದನ್ನೂ ಓದಿ: ಮೈಸೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ವೇಳೆ ಆತ್ಮಹತ್ಯೆಗೆ ಯತ್ನಿಸಿದ ರೈತ: ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.