ಮೈಸೂರು: ತಾರಕ ಜಲಾಶಯದ ನಾಲೆಗಳ ದುರಸ್ತಿ ಕಾಮಗಾರಿ ಕಳಪೆಯಿಂದ ಕೂಡಿದ್ದು, ಇದಕ್ಕೆ ಗುತ್ತಿಗೆದಾರರ ಜೊತೆ ಅಧಿಕಾರಿಗಳು ಶಾಮಿಲಾಗಿರುವುದೇ ಕಾರಣ ಎಂದು ರೈತರ ಆರೋಪಿಸಿದ್ದಾರೆ.
ಹೆಚ್.ಡಿ.ಕೋಟೆ ತಾಲೂಕಿನಲ್ಲಿರುವ ತಾರಕ ಜಲಾಶಯದ ಅಭಿವೃದ್ಧಿ ಕಾಮಗಾರಿಗೆಂದು ಸಿದ್ದರಾಮಯ್ಯ ಸರ್ಕಾರದ ಸಂದರ್ಭದಲ್ಲಿ 30 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿತ್ತು. ಈ ಹಣದಲ್ಲಿ ಜಲಾಶಯದ ಎಡದಂಡೆ ಮತ್ತು ಬಲದಂಡೆ ನಾಲೆಗಳ ಕಾಮಗಾರಿ ಹಾಗೂ ತಡೆಗೋಡೆ ನಿರ್ಮಾಣ ಮಾಡಲಾಗಿತ್ತು. ಆದರೆ ಕಾಮಗಾರಿಯನ್ನು ತೆಗೆದುಕೊಂಡ ಗುತ್ತಿಗೆದಾರ ಕಮಿಶನ್ ಪಡೆದು ಮತ್ತೊಬ್ಬ ಗುತ್ತಿಗೆದಾರನಿಗೆ ನೀಡಿದ್ದಾನೆ. ಆದರೆ ಕಾಮಗಾರಿ ಎರಡೇ ತಿಂಗಳಿಗೆ ಹಾಳಾಗಿದೆ.
ತಾರಕ ಜಲಾಶಯದಿಂದ ನೀರನ್ನು ಹರಿಸಿದರೆ ಆ ನೀರು ನಾಲೆಗಳಲ್ಲಿ ಸರಿಯಾಗಿ ಹರಿಯುವುದಿಲ್ಲ. ಅಷ್ಟೇ ಅಲ್ಲದೆ, ಜಮೀನುಗಳಿಗೂ ಹೋಗುವುದಿಲ್ಲ ಎಂದು ರೈತ ಶಿವು ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.