ಮೈಸೂರು: ಇಂದು ಸಾಯಂಕಾಲ ಸುರಿದ ಭಾರಿ ಗಾಳಿ, ಮಳೆಯಿಂದ ಮರವೊಂದು ಮೈಮೇಲೆ ಬಿದ್ದು ಮಹಿಳೆ ಮೃತಪಟ್ಟಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಹೆಚ್. ಬೊರೇಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಪುಟ್ಟಮ್ಮ (30) ಎಂಬುವಳೆ ಸಾವಿಗೀಡಾದ ಮಹಿಳೆಯಾಗಿದ್ದಾರೆ.
ಜೋರಾಗಿ ಮಳೆ ಬರುತ್ತಿದ್ದ ಹಿನ್ನೆಲೆಯಲ್ಲಿ ಮನೆ ಮುಂದೆ ಕಟ್ಟಿಹಾಕಿದ್ದ ಮೇಕೆ ಹಾಗೂ ದನಗಳನ್ನು ಕೊಟ್ಟಿಗೆ ಕರೆದೊಯ್ಯಲು ಮುಂದಾಗಿದ್ದರು. ಅದೇ ಸಮಯಕ್ಕೆ, ರಭಸವಾಗಿ ಗಾಳಿ ಬೀಸಿದ ಪರಿಣಾಮ ಅಲ್ಲೇ ಪಕ್ಕದಲ್ಲಿದ್ದ ಮರವೊಂದು ಮಹಿಳೆಯ ಮೇಲೆ ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸಮೀಪದ ಹರಳ್ಳಹಳ್ಳಿ ಗ್ರಾಮದಲ್ಲಿ ಕೂಡ ಮಳೆಯಿಂದ ಕೆಲವೆಡೆ ಅನಾಹುತ ಸಂಭವಿಸಿದ್ದು, ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ಇದನ್ನೂ ಓದಿ: ಪತ್ನಿ ಕಾಪಾಡಲು ನೀರಿಗೆ ಧುಮುಕಿದ ಪತಿ: ಇಬ್ಬರೂ ನೀರಿನಲ್ಲಿ ಮುಳುಗಿ ಸಾವು