ಮೈಸೂರು : ಯುವಕ ಚುಡಾಯಿಸಿದ ಎಂಬ ಕಾರಣಕ್ಕೆ ಗೃಹಿಣಿ ಬೆಂಕಿ ಹಚ್ಚಿಕೊಂಡು ಆತ್ಯಹತ್ಯೆ ಮಾಡಿಕೊಂಡ ಘಟನೆ ನಂಜನಗೂಡು ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
![woman committed suicide in mysore](https://etvbharatimages.akamaized.net/etvbharat/prod-images/8617985_185_8617985_1598796407779.png)
ಜಯಶ್ರೀ (21) ಎಂಬುವರು ಮೃತ ದುರ್ದೈವಿ. ಪಕ್ಕದ ಮನೆ ನಿವಾಸಿ ಮಂಜು ಎಂಬಾತ ಚುಡಾಯಿಸುತ್ತಿದ್ದನಂತೆ. ಇದರಿಂದ ಮನನೊಂದು ಜಯಶ್ರೀ ಆಗಸ್ಟ್ 14ರಂದು ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣ ಬೆಂಕಿ ನಂದಿಸಿ, ಆಕೆಯನ್ನು ಮೈಸೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಇಂದು (ಆ.30) ಸಾವನ್ನಪ್ಪಿದಾರೆ ಎನ್ನಲಾಗಿದೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಮಂಜು ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.