ಮೈಸೂರು: ಸಮ್ಮಿಶ್ರ ಸರ್ಕಾರ ವಿಶ್ವಾಸ ಮತಯಾಚನೆಯಲ್ಲಿ ಗೆಲ್ಲುತ್ತೆ. ಹೆಚ್‌ಡಿಕೆ ಸಿಎಂ ಆಗಿ ಇನ್ನೂ 4 ವರ್ಷ ಮುಂದುವರೆಯಲಿದ್ದಾರೆ ಎಂದು ಪ್ರವಾಸೋದ್ಯಮ ಮತ್ತು ರೇಷ್ಮೆ ಖಾತೆ ಸಚಿವ ಸಾ ರಾ ಮಹೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಿಎಂ ಕುಮಾರಸ್ವಾಮಿ ಅವರ ತುರ್ತು ಕರೆಗೆ ಬೆಂಗಳೂರಿಗೆ ಹೊರಟ ಸಂದರ್ಭದಲ್ಲಿ ಈಟಿವಿ ಭಾರತದೊಂದಿಗೆ ದೋಸ್ತಿ ಸರ್ಕಾರದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಜತೆ ಅಮೆರಿಕಾ ಪ್ರವಾಸ ಮುಗಿಸಿ ವಾಪಸ್ ಮೈಸೂರಿಗೆ ಬಂದಿದ್ದ ಸಚಿವ ಸಾ ರಾ ಮಹೇಶ್, ಸರ್ಕಾರ ಉಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸರ್ಕಾರ ರಚನೆಯ ಬಗ್ಗೆ ಬಿಜೆಪಿ ಜತೆ ಯಾವುದೇ ಚರ್ಚೆ ಮಾಡಿಲ್ಲ. ಬಿಜೆಪಿ ಸಂಪರ್ಕ ಹೊಸದಲ್ಲ, ನಾನು ಬಿಜೆಪಿಯಲ್ಲೇ ಇದ್ದವನು. ನನಗೆ ಮೊದಲಿನಿಂದಲೂ ಅನೇಕ ಬಿಜೆಪಿ ನಾಯಕರ ಸಂಪರ್ಕವಿದೆ. ಅವರನ್ನು ಭೇಟಿಯಾಗಿದ್ದುಆಕಸ್ಮಿಕ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅತೃಪ್ತರು ರಾಜೀನಾಮೆ ನೀಡಿದ್ದು ಶಾಸಕ ಸ್ಥಾನಕ್ಕೆ ಹೊರತು ಪಕ್ಷದಿಂದ ಯಾರೂ ಹೊರ ನಡೆದಿಲ್ಲ ಎಂದು ಪರೋಕ್ಷವಾಗೊ ಸಚಿವ ಜಿ ಟಿ ದೇವೇಗೌಡರಿಗೆ ಕುಟುಕಿದರು. ಅಧಿಕಾರದ ಆಸೆ, ದಾಹ ಇಂತ ಪರಿಸ್ಥಿತಿಗೆ ಕಾರಣ. ಮೊದಲು ಎಂಎಲ್ಎ ಆಗಬೇಕು. ನಂತರ ಮಂತ್ರಿ, ಆಮೇಲೆ ಒಳ್ಳೆಯ ಖಾತೆ ಬೇಕು. ಇಂತಹ ಸಂಕಷ್ಟಕ್ಕೆ ಕಾರಣವಾಗಿದೆ ಎಂದರು. ಶಾಸಕ ವಿಶ್ವನಾಥ್ ಬಗ್ಗೆ ಇಂದು ಮಾತನಾಡುವುದಿಲ್ಲ. ಅದಕ್ಕೆ ಒಂದು ವೇದಿಕೆ ಬೇಕು, ಇದೆಲ್ಲಾ ಮುಗಿಯಲಿ, ಆಗ ನಿಮ್ಮನ್ನೆಲ್ಲ ಕರೆದು ಸುದೀರ್ಘವಾಗಿ ಆ ವಿಚಾರವನ್ನು ಮಾತನಾಡುತ್ತೇನೆ. ನಮಗೆಲ್ಲ ಅವರ ಬಗ್ಗೆ ಮಾತನಾಡಿ ಈಗ ಸಮಯ ವ್ಯರ್ಥಮಾಡಲು ಇಷ್ಟವಿಲ್ಲ ಎಂದು ವಿಶ್ವನಾಥ್ ವಿರುದ್ಧ ಚಾಟಿ ಬೀಸಿದರು.