ಮೈಸೂರು: ಪತಿಯ ಕಿರುಕುಳ ತಾಳಲಾರದೇ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ ಪತ್ನಿ ಕೋರ್ಟ್ ಆವರಣದಲ್ಲೇ ಪತಿಯಿಂದ ಜೀವನಾಂಶಕ್ಕಾಗಿ ಗೋಳಾಡಿದ ಘಟನೆ ಎಚ್.ಡಿ.ಕೋಟೆ ತಾಲೂಕಿನ ಕೋರ್ಟ್ನಲ್ಲಿ ನಡೆದಿದೆ.
ಘಟನೆಯ ವಿವರ ಎಚ್.ಡಿ.ಕೋಟೆಯ ಮಹಿಳೆ ಕಳೆದ 2005ರಲ್ಲಿ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪಯ ಸತೀಶ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದರು. ಇವರಿಬ್ಬರ ಮದುವೆ ಜೀವನ ಚೆನ್ನಾಗಿತ್ತು. ಆದರೆ, 2006 ರಲ್ಲಿ ಹೆಣ್ಣು ಮಗುವಾಗಿದ್ದು, ಪತಿ ಸತೀಶ್ ಹೆಣ್ಣು ಮಗುವಾಯಿತು ಎಂಬ ಕಾರಣಕ್ಕೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಗಂಡು ಮಗು ಬೇಕು ಎಂದು ಪತ್ನಿಗೆ ಕಿರುಕುಳ ನೀಡುತ್ತಿದ್ದನು. ಅಲ್ಲದೇ ಪತಿ ಸತೀಶ್ ಮತ್ತೊಂದು ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಪತ್ನಿ ಕೋರ್ಟ್ಗೆ ವಿಚ್ಛೇದನ ಅರ್ಜಿ ಸಲ್ಲಿಸಿದ್ದು, ಕೇಸ್ ಸಲುವಾಗಿ ಕೋರ್ಟ್ಗೆ ಹೋದಾಗ ಪತಿ ಸತೀಶ್ ಅವಾಚ್ಯ ಶಬ್ದಗಳಿಂದ ಆಕೆಯನ್ನು ನಿಂದಿಸಿದ್ದನೆಂದು ಆರೋಪಿಸಲಾಗಿದೆ.
ಜೀವನಾಂಶ ಕೊಡಿಸುವಂತೆ ಕೋರ್ಟ್ನಲ್ಲಿ ಗೋಳಾಡಿದ್ದಾರೆ. ಆ ಸಂದರ್ಭದಲ್ಲಿ ಕೋರ್ಟ್ಗೆ ಬಂದಿದ್ದ ಮಗಳು ತಂದೆಯನ್ನು ಮಾತನಾಡಿಸಲು ಹೋದಾಗ ಮಗಳನ್ನು ಸಹ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನಂತೆ.
ಪತ್ನಿ ಮಾತನಾಡಿ, ನನ್ನ ಗಂಡ ಹೆಣ್ಣು ಮಗು ಆಗಿದೆ ಎಂಬ ಕಾರಣಕ್ಕೆ ನನಗೆ ಇಷ್ಟು ವರ್ಷಗಳ ಕಾಲ ಕಿರುಕುಳ ನೀಡಿದ್ದ. ಎಚ್.ಡಿ.ಕೋಟೆ ತಾಲೂಕಿನಲ್ಲಿ ಒಂದು ಮನೆ ಮಾಡಿ ನಮ್ಮನ್ನು ಇಲ್ಲೆ ಇರಿಸಿದ್ದನ್ನು. ಆದರೆ, ಅವನು ಪಿರಿಯಾಪಟ್ಟಣದಲ್ಲೇ ಅಕ್ರಮ ಸಂಬಂಧ ಹೊಂದಿದ್ದಾನೆ. ನನಗೆ ಹಾಗೂ ನನ್ನ ಮಗಳಿಗೆ ನ್ಯಾಯ ಬೇಕು. ನನ್ನ ಮಗಳ ಭವಿಷ್ಯಕ್ಕಾಗಿ ಜೀವನಾಂಶ ಬೇಕು ಎಂದು ಅಳಲು ತೋಡಿಕೊಂಡಿದ್ದಾರೆ.