ETV Bharat / state

ಮೈಸೂರು ಜಿಲ್ಲೆಯಲ್ಲಿ ಯಾರಿಗೆ ಒಲಿಯಲಿದೆ ಮಂತ್ರಿ ಸ್ಥಾನ : ಆಕಾಂಕ್ಷಿಗಳು‌ ಯಾರ್ಯಾರು ?

ಮಂತ್ರಿ ಸ್ಥಾನ ನೀಡುವಾಗ ಜಾತಿವಾರು, ಜಿಲ್ಲಾವಾರು, ಹಿರಿತನ ಸೇರಿದಂತೆ ಹಲವಾರು ಅಂಶಗಳನ್ನು ಪರಿಗಣಿಸಲಾಗುತ್ತಿದೆ. ಮೈಸೂರು ಜಿಲ್ಲೆಯಿಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಸದ್ಯ ಆಯ್ಕೆಯಾಗಿದ್ದಾರೆ. ಮೈಸೂರು ಜಿಲ್ಲೆಗೆ ಮಂತ್ರಿ ಸ್ಥಾನ ಸಿಗುವುದು ಕಷ್ಟ ಎಂದು ಹೇಳಲಾಗುತ್ತಿದೆ.

Siddaramaiah, Tanveer Seth, Mahadevappa, K. Venkatesh
ಸಿದ್ದರಾಮಯ್ಯ,ತನ್ವೀರ್ ಸೇಠ್,ಮಹಾದೇವಪ್ಪ,ಕೆ.ವೆಂಕಟೇಶ್
author img

By

Published : May 19, 2023, 3:26 PM IST

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್ ಅಮೋಘ ಸಾಧನೆ ಮಾಡಿದ್ದು. 11 ವಿಧಾನ ಸಭಾ ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ‌ಇದರಲ್ಲಿ ಹಿರಿಯ ಅನುಭವಿ ಹಾಗೂ ಯುವ ಶಾಸಕರು ಸೇರಿದ್ದು. ಮೈಸೂರು ಜಿಲ್ಲೆಯಲ್ಲಿ ಯಾರಿಗೆ ಮಂತ್ರಿ ಸ್ಥಾನ ಸಿಗಲಿದೆ. ಯಾರ್ಯಾರು ಆಕಾಂಕ್ಷಿಗಳಿದ್ದಾರೆ ಎಂಬುದರ ಕುರಿತು ವಿವರಣೆ ಇಲ್ಲಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿದೆ. ನಾಳೆ ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಆಗಿ ಡಿ ಕೆ. ಶಿವಕುಮಾರ್ ಅಧಿಕಾರ ವಹಿಸಿಕೊಳ್ಳಲಿದ್ದು. ಅವರೊಂದಿಗೆ ಮೈಸೂರು ಜಿಲ್ಲೆಯಿಂದ ಯಾರು ಮಂತ್ರಿಯಾಗುತ್ತಾರೆ. ಯಾರ್ಯಾರು ಈ ರೇಸ್ ನಲ್ಲಿ ಇದ್ದಾರೆ ಎಂಬ ಚರ್ಚೆ ಈಗ ಶುರುವಾಗಿದೆ.

ಮೈಸೂರು ಜಿಲ್ಲೆಯ 11 ವಿಧಾನ ಸಭಾ ಕ್ಷೇತ್ರದ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಗೆಲುವು ಸಾಧಿಸಿದ್ದು, ಇದರಲ್ಲಿ ಯಾರಿಗೆ ಮಂತ್ರಿ ಸ್ಥಾನ ಸಿಗಲಿದೆ ಎಂಬ ಚರ್ಚೆ ಶುರುವಾಗಿದೆ. ಈಗ ಆರನೇ ಬಾರಿಗೆ ಗೆದ್ದಿರುವ ಟಿ.ನರಸೀಪುರ ಕ್ಷೇತ್ರದ ಡಾ ಎಚ್ ಸಿ ಮಹಾದೇವಪ್ಪ, ಪಿರಿಯಾಪಟ್ಟಣದ ಕೆ.ವೆಂಕಟೇಶ್ ಹಾಗೂ ನರಸಿಂಹರಾಜ ಕ್ಷೇತ್ರದ ತನ್ವೀರ್ ಸೇಠ್ ಹಿರಿಯ ಶಾಸಕರಾಗಿದ್ದು, ಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

ಇವರೊಂದಿಗೆ ಎರಡನೇ ಬಾರಿ ಗೆದ್ದಿರುವ ಎಚ್ ಡಿ.ಕೋಟೆಯ ಅನಿಲ್ ಚಿಕ್ಕಮಾದು, ಮೊದಲ ಬಾರಿಗೆ ಆಯ್ಕೆಯಾಗಿರುವ ನಂಜನಗೂಡಿನ ದರ್ಶನ್ ದೃವನಾರಾಯಣ್, ಕೆ ಆರ್.ನಗರದ ರವಿ ಶಂಕರ್ ಹಾಗೂ ಚಾಮರಾಜ ಕ್ಷೇತ್ರದ ಹರೀಶ್ ಗೌಡ ಯುವ ಶಾಸಕರಿಗೆ ಅದೃಷ್ಟ ಖುಲಾಯಿಸಿದರೆ ಮಂತ್ರಿಯಾಗುವ ಯೋಗವೂ ಇದೆ ಎಂಬ ಚರ್ಚೆಯೂ ಇದೆ.

ಈ ಮಧ್ಯೆ ಮೈಸೂರು ಜಿಲ್ಲೆಯ ವರುಣಾದಿಂದ ಆಯ್ಕೆಯಾಗಿರುವ ಸಿದ್ದರಾಮಯ್ಯನವರ ಕೃಪೆ ಯಾರ ಮೇಲಿದೆ ಎಂಬುದೇ ಈಗ ತೀವ್ರ ಕುತೂಹಲ ಕೆರಳಿಸಿದೆ.‌ ಇದರ ಜತೆ ಕಾಂಗ್ರೆಸ್ ನಲ್ಲಿ ಈ ಬಾರಿ 135 ಶಾಸಕರು ಆಯ್ಕೆ ಆಗಿದ್ದು. ಅದರಲ್ಲಿ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಆಗಿದ್ದಾರೆ.

ಮಂತ್ರಿ ಸ್ಥಾನ ನೀಡುವಾಗ ಜಾತಿವಾರು, ಜಿಲ್ಲಾವಾರು, ಹಿರಿತನ ಸೇರಿದಂತೆ ಹಲವಾರು ಅಂಶಗಳನ್ನು ಪರಿಗಣಿಸಬೇಕಾಗಿರುವುದರಿಂದ, ಮೈಸೂರು ಜಿಲ್ಲೆಯಿಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಆಯ್ಕೆಯಾಗಿರುವುದರಿಂದ, ಸದ್ಯ ಮೈಸೂರು ಜಿಲ್ಲೆಗೆ ಮಂತ್ರಿ ಸ್ಥಾನ ಸಿಗುವುದು ಕಷ್ಟ ಎಂದು ಹೇಳಲಾಗುತ್ತಿದೆ.

ನಿಗಮ ಮಂಡಳಿಗಳ ಮೇಲೆ ಮುಖಂಡರ ಕಣ್ಣು :ಮೈಸೂರು ಜಿಲ್ಲೆಯಲ್ಲಿ ಇರುವ ನಿಗಮ ಮಂಡಳಿಗಳಾದ ಮೂಡಾ, ಮೃಗಾಲಯ ಪ್ರಾಧಿಕಾರ, ಕಾಡಾ, ಮೈಲ್ಯಾಕ್, ವಸ್ತು ಪ್ರದರ್ಶನ ಸೇರಿದಂತೆ ಹಲವು ನಿಗಮ ಮಂಡಳಿಗಳಿವೆ. ಅವುಗಳಲ್ಲಿ ಸ್ಥಾನ ಪಡೆಯಲು ಸ್ಥಳೀಯ ಮುಖಂಡರುಗಳು ಸಿದ್ದರಾಮಯ್ಯನವರ ಗಮನ ಸೆಳೆಯಲು ಈಗಾಗಲೇ ಬೆಂಗಳೂರಿನ ಅವರ ಮನೆಗೆ ಹೋಗುತ್ತಿದ್ದಾರೆ.

ಸಚಿವ ಸಂಪುಟ ಆದ ನಂತರ, ಈ ನಿಗಮ ಮಂಡಳಿಗಳ ಅಧ್ಯಕ್ಷರಗಳನ್ನು ಭರ್ತಿ ಮಾಡುವಾಗ, ತಮಗೆ ಅಧ್ಯಕ್ಷ ಸ್ಥಾನ ಪಡೆಯಲು, ಈಗಾಗಲೇ ಸಿದ್ದರಾಮಯ್ಯನವರ ಬಳಿ ತಮ್ಮ ಪ್ರಭಾವ ಬೀರಲು ಪ್ರಯತ್ನ ನಡೆಸುತ್ತಿದ್ದಾರೆ.ಈ ಮಧ್ಯೆ ಯಾರಿಗೆ ಮೈಸೂರು ಜಿಲ್ಲೆಯ ಉಸ್ತುವಾರಿ ಭಾಗ್ಯ ಸಿಗಲಿದೆ ಎಂಬುದು ಸಿದ್ದರಾಮಯ್ಯ ಮೇಲೆ ಅವಲಂಬಿತವಾಗಿದೆ.

ಇದನ್ನೂಓದಿ:ಸಿಎಂ ಪದಗ್ರಹಣ: ಯಾರೆಲ್ಲಾ ಭಾಗಿ? ಇಲ್ಲಿದೆ ಗಣ್ಯರ ಪಟ್ಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.