ಮೈಸೂರು: ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಒಳಗಾದವರು, ಸಾರ್ವಜನಿಕರು ತಮ್ಮ ಮತ್ತು ಕುಟುಂಬದವರ ಆರೋಗ್ಯದ ಹಿತದೃಷ್ಟಿಯಿಂದ ತಮ್ಮ ಹೆಸರನ್ನು ನೀಡಬೇಕೆಂದು ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ತಿಳಿಸಿದ್ದಾರೆ.
ನಗರದ ಹೆಬ್ಬಾಳದ ಲಕ್ಷ್ಮಿಕಾಂತನಗರದಲ್ಲಿ ವಾಸವಿರುವ P-MYS191 ವ್ಯಕ್ತಿಗೆ ಕಳೆದ ಎರಡು ದಿನಗಳ ಹಿಂದೆ ಕೊರೊನಾ ಸೋಂಕು ಧೃಡಪಟ್ಟ ಹಿನ್ನಲೆಯಲ್ಲಿ ಆ ವ್ಯಕ್ತಿ ತನ್ನ ಬಡಾವಣೆಯ ಅಂಗಡಿಗಳಲ್ಲಿ ತರಕಾರಿ ಮತ್ತು ಹಾಲು ದಿನಸಿಯನ್ನು ಖರೀದಿಸಿದ್ದಾರೆ.
ಹಾಗಾಗಿ ಈ ವ್ಯಕ್ತಿಯ ಸಂಪರ್ಕ ಹೊಂದಿರುವವರು ಸಾರ್ವಜನಿಕರು ತಮ್ಮ ಕುಟುಂಬದವರ ಆರೋಗ್ಯ ಹಿತದೃಷ್ಟಿಯಿಂದ ತಮ್ಮ ಮಾಹಿತಿ ಹೆಸರನ್ನು ತುರ್ತಾಗಿ ಡಿಸಿ ಕಂಟ್ರೋಲ್ ರೂಮ್ ಗೆ ಕರೆ ಮಾಡಿ ಹೆಸರು ನೊಂದಾಯಿಸಿಕೊಳ್ಳಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.