ETV Bharat / state

ಕೊರೊನಾ ವಿಷಯದಲ್ಲಿ ನಮಗೆ ಜಯಸಿಗಲಿದೆ : ಸಚಿವ ಎಸ್.ಟಿ.ಸೋಮಶೇಖರ್ ವಿಶ್ವಾಸ - Minister ST Somashekhar's statement on the coronavirus vaccine

ರಾಜ್ಯದಲ್ಲಿ ಕೋವಿಡ್ ಪ್ರಕರಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿವೆ. ಕೋವಿಡ್ ಲಸಿಕೆ ಬರುವವರೆಗೂ ಮುನ್ನೆಚ್ಚರಿಕೆ ವಹಿಸಬೇಕು..

st-somashekhar
ಸಚಿವ ಎಸ್.ಟಿ.ಸೋಮಶೇಖರ್..
author img

By

Published : Nov 1, 2020, 4:13 PM IST

ಮೈಸೂರು : ಇತಿಹಾಸದಲ್ಲಿ ಯಾವುದೇ ವೈರಾಣು ಮನುಷ್ಯನ ವಿರುದ್ಧದ ಹೋರಾಟದಲ್ಲಿ ಜಯ ಸಾಧಿಸಿಲ್ಲ. ಇಂತಹ ಸೋಂಕು ಬಂದಾಗೆಲ್ಲಾ ವೈರಾಣು ವಿರುದ್ಧ ಮನುಷ್ಯನೇ ಗೆದ್ದಿದ್ದಾನೆ. ಕೊರೊನಾ ವಿಷಯದಲ್ಲಿಯೂ ನಮಗೆ ಜಯಸಿಗಲಿದೆ. ಆದಷ್ಟು ಬೇಗ ಲಸಿಕೆ ‌ಸಿಗಲಿ ಎಂದು ಆಶಿಸುತ್ತೇನೆ ಎಂದು ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದ್ದಾರೆ.

ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವ ಎಸ್ ಟಿ ಸೋಮಶೇಖರ್..
ನಗರದ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ 65ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಮಾತನಾಡಿದ ಅವರು, ಹರಿದು ಹಂಚಿ ಹೋಗಿದ್ದ ಕನ್ನಡ ಪ್ರದೇಶಗಳನ್ನು ಮೈಸೂರು ರಾಜ್ಯದಲ್ಲಿ 1956 ನವೆಂಬರ್ 1ರಂದು ಒಂದುಗೂಡಿಸಿ ಕರ್ನಾಟಕ ಎಂದು ಮರುನಾಮಕರಣ ಮಾಡಲಾಗಿದೆ. ಹೀಗಾಗಿ, ನಮ್ಮ‌ ಶ್ರೀಮಂತ ಸಂಸ್ಕೃತಿ, ಪರಂಪರೆ, ಕಲೆ, ಸಾಹಿತ್ಯ ಎಲ್ಲವನ್ನೂ ನಾವು ಇಂದು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.

ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ಪ್ರಕರಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿವೆ. ಕೋವಿಡ್ ಲಸಿಕೆ ಬರುವವರೆಗೂ ಮುನ್ನೆಚ್ಚರಿಕೆ ವಹಿಸಬೇಕೆಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.