ETV Bharat / state

ಎಲ್ಲಾ ಕ್ಷೇತ್ರಗಳಲ್ಲೂ ಗೆಲುವು ನಮ್ಮದೇ: ಸದಾನಂದಗೌಡ ವಿಶ್ವಾಸ - ಹುಣಸೂರು ಉಪ ಚುನಾಚಣೆ ಸುದ್ದಿ

ಉಪ ಚುನಾವಣೆಯ ಎಲ್ಲಾ ಕ್ಷೇತ್ರಗಳಲ್ಲೂ ಭಾರತೀಯ ಜನತಾ ಪಕ್ಷ ಗೆಲ್ಲಲಿದೆ ಎಂದು ಕೇಂದ್ರ ಸಚಿವ ಸದಾನಂದಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Central minister Sadananda Gowda press meet in hunasuru, ಸದಾನಂದಗೌಡ ಸುದ್ದಿಗೋಷ್ಠಿ
ಸದಾನಂದಗೌಡ ಸುದ್ದಿಗೋಷ್ಠಿ
author img

By

Published : Nov 27, 2019, 9:41 PM IST

ಮೈಸೂರು: ಭಾರತೀಯ ಜನತಾ ಪಕ್ಷದ ಕಡೆಗೆ ಜನರ ಒಲವಿದೆ. ಉಪ ಚುನಾವಣೆಯ ಎಲ್ಲಾ ಕ್ಷೇತ್ರಗಳಲ್ಲೂ ನಾವು ಗೆಲ್ಲಲಿದ್ದೇವೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಹುಣಸೂರು ತಾಲೂಕಿನ ಪ್ರೆಸ್ ಕ್ಲಬ್​ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಚ್​.ವಿಶ್ವನಾಥ್​ಗೆ ನಾನು ಈ ಮೊದಲೇ ಬಿಜೆಪಿಗೆ ಬರುವಂತೆ ಹೇಳಿದ್ದೆ. ಕೊನೆಗೂ ಆ ಕಾಲ ಕೂಡಿ ಬಂದಿದೆ. ಹುಣಸೂರಿನ ಅಭಿವೃದ್ಧಿ ಕಾರ್ಯಕ್ಕೆ ಯಡಿಯೂರಪ್ಪ ಸರ್ಕಾರ ಶ್ರಮಿಸಲಿದೆ ಎಂದು ಹೇಳಿದರು.

ಹುಣಸೂರಿನಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸುದ್ದಿಗೋಷ್ಠಿ

ಈ ಭಾಗದಲ್ಲಿ ಕೆಲವರು ಜಾತಿ ಲೆಕ್ಕಾಚಾರದ ಮೇಲೆ ಗೆಲುವು ಸಾಧಿಸಬಹುದು ಎಂಬ ನಂಬಿಕೆ ಹೊಂದಿದ್ದಾರೆ. ಆದರೆ ಜಾತಿ ಆಧಾರದ ಮೇಲೆ ಕ್ಷೇತ್ರ ಅಭಿವೃದ್ಧಿಯಾಗಲ್ಲ ಎಂದು ಜನರಿಗೆ ತಿಳಿದಿದೆ. ಅದಕ್ಕೆ ಲೋಕಸಭಾ ಚುನಾವಣೆಯ ಫಲಿತಾಂಶವೇ ಸಾಕ್ಷಿಯಾಗಿದೆ. ಹೀಗಾಗಿ ಬಿಜೆಪಿಯತ್ತ ಜನರ ಅಭಿಮತವಿದೆ ಎಂಬುದು ತಿಳಿಯುತ್ತದೆ ಎಂದು ಹೇಳಿದರು.

ಇನ್ನು ತಾನು ದೇವರಾಜು ಅರಸು ಅವರ ಪ್ರತಿರೂಪ ಅಂತ ಸಿದ್ದರಾಮಯ್ಯ ಹೇಳ್ತಾರೆ. ಆದರೆ ಮುಖ್ಯಮಂತ್ರಿಯಾಗಿದ್ದ ಅವರನ್ನು ಮೈಸೂರಿನ ಜನರು ಸ್ವಕ್ಷೇತ್ರದಿಂದಲೇ ಹೊರ ಹಾಕಿದ್ದಾರೆ ಎಂದು ಕೇಂದ್ರ ಸಚಿವ ಸದಾನಂದಗೌಡ ಕಿಡಿಕಾರಿದರು.

Intro:ಸದಾನಂದಗೌಡBody:ಮೈಸೂರು:
ಹುಣಸೂರು ತಾಲ್ಲೂಕಿನ ಪ್ರೆಸ್ ಕ್ಲಬ್ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿಕೆ

*ಹುಣಸೂರಿನಲ್ಲಿ ನೂರಕ್ಕೆ ನೂರು ನಾವು ಗೆಲ್ತೀವಿ, ಯಾವುದೇ ಸಂಶಯ ಇಲ್ಲ*

ಹುಣಸೂರಿನ ಪ್ರಚಾರದಲ್ಲಿ ಕೇಂದ್ರ ಸಚಿವ ಸದಾನಂದ ಗೌಡ ವಿಶ್ವಾಸ

ಸಿದ್ದರಾಮಯ್ಯ ಹೇಳ್ತಾರೆ ನಾನು ದೇವರಾಜು ಅರಸು ಅವರ ಪ್ರತಿರೂಪ ಅಂತ

*ದೇವರಾಜು ಅರಸು ಅವರ ಹೆಸರು ಹೇಳೋದಕ್ಕೂ ಸಿದ್ದರಾಮಯ್ಯಗೆ ಅದು ಇಲ್ಲ*

*ಸಮಯ ಸಾಧಕ ರಾಜಕಾರಣಿಗೆ ಇನ್ನೊಂದು ಹೆಸರು ಕುಮಾರಸ್ವಾಮಿ*

ಕುಮಾರಸ್ವಾಮಿ ಕುರ್ಚಿಗೆ ಆಸೆಪಟ್ಟವರು, ಅವರಿಗೆ ಕುರ್ಚಿ ಇದ್ದರೆ ಆಯ್ತು

15 ಜನರನ್ನು ಸೋಲಿಸುವುದೇ ನನ್ನ ಗುರಿ ಅಂತ ಕುಮಾರಸ್ವಾಮಿ ಹೇಳ್ತಿದಾರೆ

ಸಿದ್ದರಾಮಯ್ಯ ಕೂಡ ಅದನ್ನೇ ಹೇಳ್ತಾರೆ, ಇಬ್ಬರೂ ಕೂಡ ಸಮಯ ಸಾಧಕರು

*ಯಾವ ಯಾವ ಸಂದರ್ಭಕ್ಕೆ ಇವರಿಬ್ಬರು ಏನು ಮಾಡ್ತಾರೆ ಅನ್ನೋದು ದೇವರಿಗೂ ಗೊತ್ತಾಗಲ್ಲ*

ಜೆಡಿಎಸ್ ಕಾಂಗ್ರೆಸ್ ವಿರುದ್ದ ಹುಣಸೂರಿನಲ್ಲಿ ಸಂಸದ ಡಿ‌ ವಿ ಸದಾನಂದ ಗೌಡ ವಾಗ್ದಾಳಿ

ದೇವೇಗೌಡರು ಇಷ್ಟು ದಿನ ರಾಜಕಾರಣಿ ಆಗಲು ಒಕ್ಕಲಿಗ ಎಂಬುದೇ ಕಾರಣ

*ಒಕ್ಕಲಿಗ ಶಬ್ದವನ್ನು ದೇವೇಗೌಡರು ಬಹಳ‌ ದುರುಪಯೋಗ ಮಾಡಿಕೊಂಡಿದ್ದಾರೆ*

ಕುಟುಂಬಕ್ಕೆ ಮಾತ್ರ ಅವರ ರಾಜಕಾರಣ ಸೀಮಿತ ಆಯ್ತು, ಬೇರೆ ಯಾರಿಗೂ ಏನೂ ಮಾಡಿಲ್ಲ

*ಜೆಡಿಎಸ್‌ಗೆ 12 ಜನ‌ ಸ್ಟಾರ್ ಕ್ಯಾಂಪೇನರ್, ಅದರಲ್ಲಿ 9 ಜನ ಒಂದೇ ಮನೆಯವರು*

ಮತ್ತೆ ಮೂವರು ಅವರಿಗೆ ಜೈ ಅಂತ ಹೇಳುವವರು, ಇಂತ ಪಾರ್ಟಿ ಕಟ್ಕೊಂಡು ಒಕ್ಕಲಿಗ ಅಂತಾರೆ ದೇವೇಗೌಡರು

ಒಕ್ಕಲಿಗ ಒಕ್ಕಲಿತನಕ್ಕೆ ಬೆಂಬಲ‌ ಕೊಡ್ಬೇಕು ಅದನ್ನು ಇವರು ಮಾಡುತ್ತಿಲ್ಲ, ಬರೀ ಬಾಯಿ ಮಾತು ಅಷ್ಟೇ

ಹುಣಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಪರ‌ಪ್ರಚಾರದ ವೇಳೆ ಸದಾನಂದ ಗೌಡ ಹೇಳಿಕೆConclusion:ಸದಾನಂದಗೌಡ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.