ಮೈಸೂರು : ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿಯ ಸಹವಾಸವೇ ಬೇಡ. ತಟಸ್ಥವಾಗಿರಲು ಪಾಲಿಕೆ ಸದಸ್ಯರು ಒಪ್ಪಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮೈಸೂರಿನ ಹೂಟಗಳ್ಳಿಯಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಳೆ ಬೆಳಗ್ಗೆ ಹೆಚ್ ಡಿ ದೇವೇಗೌಡರ ಜೊತೆ ದೂರವಾಣಿ ಮೂಲಕ ಮೇಯರ್ ಚುನಾವಣೆ ಬಗ್ಗೆ ವಿವರಣೆ ನೀಡುತ್ತೀನಿ.
ನಂತರ ಸಲಹೆ ಪಡೆದು ನಿರ್ಧಾರ ಕೈಗೊಳ್ಳುತ್ತೀವಿ ಎಂದರು. ಶಾಸಕ ಜಿ.ಟಿ.ದೇವೇಗೌಡರ ಬಗ್ಗೆ ಹರಿಹಾಯುತ್ತಿದ್ದ ಕುಮಾರಸ್ವಾಮಿ ಇಂದು ಸಾಫ್ಟ್ ಆಗಿ ಮಾತನಾಡಿದರು.
ಸಾ ರಾ ಮಹೇಶ್-ತನ್ವೀರ್ ಸೇಠ್ ಭೇಟಿ : ಮೈಸೂರು ಮಹಾನಗರ ಪಾಲಿಕೆ ಚುಕ್ಕಾಣಿ ಹಿಡಿಯಲು ಜೆಡಿಎಸ್ ಪಾತ್ರ ನಿರ್ಣಾಯಕವಾಗಿರುವುದರಿಂದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ತಮ್ಮ ಪಕ್ಷದ ಸದಸ್ಯರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ.
ಹೂಟಗಳ್ಳಿಯಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ನಗರ ಪಾಲಿಕೆ ಸದಸ್ಯರು ಹಾಗೂ ಹೆಚ್ ಡಿ ಕುಮಾರಸ್ವಾಮಿ ಅವರು ನಾಳೆ ಯಾರೊಂದಿಗೆ ಕೈ ಜೋಡಿಸಬೇಕು ಎಂಬುವುದರ ಬಗ್ಗೆ, ಮೇಯರ್ ಪಟ್ಟ ಒಲಿದರೆ, ಪಕ್ಷದಿಂದ ಯಾರಿಗೆ ನೀಡಬೇಕು ಎಂಬುವುದರ ಬಗ್ಗೆ ಸುದೀರ್ಘ ಚರ್ಚೆ ನಡೆಸುತ್ತಿದ್ದಾರೆ.
ಓದಿ:ಸಂಸತ್‌ನಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ಧ್ವನಿ ಎತ್ತಿ ಜಯನಗರ ಹೋಟೆಲ್‌ನಲ್ಲಿ ವ್ಯವಹಾರ ಮಾಡ್ತಾರೆ: ಹೆಚ್‌ಡಿಕೆ
ಸಭೆಯಲ್ಲಿ ಶಾಸಕರಾದ ಸಾ.ರಾ.ಮಹೇಶ್, ಅಶ್ವಿನ್ ಕುಮಾರ್ ಹಾಗೂ ಪಕ್ಷದ ಮೈಸೂರಿನ ಮುಖಂಡರು ಭಾಗಿಯಾಗಿದ್ದಾರೆ. ಕುಮಾರಸ್ವಾಮಿ ಅವರು ಆಗಮಿಸಿದ ವಿಷಯ ತಿಳಿದ ತನ್ವೀರ್ ಸೇಠ್, ಹೋಟೆಲ್ಗೆ ಆಗಮಿಸಿ ಸಾ.ರಾ.ಮಹೇಶ್ ಜೊತೆ ಮಾತುಕತೆ ನಡೆಸಿದರು.