ಮೈಸೂರು: ಕೊರೊನಾ ಹೋಗೆಬಿಟ್ಟಿತ್ತು ಎಂಬ ಭಾವನೆಯಿಂದ ಮಾಧ್ಯಮಗಳು ಹಾಗೂ ಜನಪ್ರತಿನಿಧಿಗಳು ವಿಳಂಬ ಮಾಡಿದೆವು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತಮಾಡಿದ ಅವರು, ಕೇಂದ್ರ ಸರ್ಕಾರದ ಯೋಜನೆಯಿಂದ ತುಳಸಿದಾಸಪ್ಪ ಸರ್ಕಾರಿ ಆಸ್ಪತ್ರೆಯನ್ನು ಆಧುನಿಕ ರೀತಿಯಲ್ಲಿ ಪುನರ್ ನಿರ್ಮಿಸಲಾಗಿದ್ದು, ಈ ಆಸ್ಪತ್ರೆಯನ್ನು ಈಗ ತಾತ್ಕಾಲಿಕವಾಗಿ ಕೋವಿಡ್ ಕೇರ್ ಸೆಂಟರ್ಆಗಿ ಮಾಡಲಾಗಿದೆ ಎಂದಿದ್ದಾರೆ.
ಕಳೆದ ವರ್ಷ ಏಪ್ರಿಲ್, ಮೇನಲ್ಲಿ ಕೋವಿಡ್ ಹೆಚ್ಚಾದಾಗ ಮಾಧ್ಯಮದವರು ಸಾಕಷ್ಟು ಜಾಗೃತಿ ಮೂಡಿಸಿದರು. ಅಕ್ಟೋಬರ್, ನವೆಂಬರ್ನಲ್ಲಿ ಕೋವಿಡ್ ಹೋಗೇಬಿಟ್ಟಿತು ಎಂಬ ಭಾವನೆಯಲ್ಲಿ ನಾವೂ ಮೈಮರೆತದ್ದು ನಿಜ ಎಂಬುದನ್ನು ಪ್ರತಾಪ್ ಸಿಂಹ್ ಒಪ್ಪಿಕೊಂಡಿದ್ದಾರೆ.
ಈಗ ಕೊರೊನಾ ಹೊಸ ರೂಪದಲ್ಲಿ 2ನೇ ಅಲೆಯಾಗಿ ಬಂದೆರಗಿದೆ. 100 ವರ್ಷಗಳ ಹಿಂದೆ ಬಂದ ಅಲೆ ಈಗ ಮತ್ತೆ ಬಂದಿದೆ. ಈಗ ಜನ ಪ್ರತಿನಿಧಿಗಳು ಮತ್ತೆ ಜಾಗೃತರಾಗಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ನಿಲ್ಲದ ಕೋವಿಡ್ ಆರ್ಭಟ: 39,047 ಸೋಂಕಿತ ಪ್ರಕರಣ ದಾಖಲು,229 ಜನರು ಬಲಿ