ಮೈಸೂರು: ಮೈಸೂರು-ಬೆಂಗಳೂರು ದಶಪಥ ರಸ್ತೆ ನಿರ್ಮಾಣಕ್ಕೆ ಶೇ.90 ರಷ್ಟು ಭೂಮಿ ವಶಪಡಿಸಿಕೊಳ್ಳಲಾಗಿದ್ದು, ಈಗಾಗಾಲೇ ಬೆಂಗಳೂರಿನಿಂದ ನಿಡುಗಟ್ಟದವರೆಗೆ ಕಾಮಗಾರಿ ನಡೆಯುತ್ತಿದೆ ಎಂದು ಸಚಿವ ಹೆಚ್.ಡಿ. ರೇವಣ್ಣ ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರು-ಬೆಂಗಳೂರು ದಶಪಥ ರಸ್ತೆ ನಿರ್ಮಾಣಕ್ಕೆ ಶೇ.90 ಭೂಮಿ ವಶಪಡಿಸಿಕೊಳ್ಳಲಾಗಿದೆ. ಈಗಾಗಾಲೇ ಬೆಂಗಳೂರಿನಿಂದ ನಿಡುಗಟ್ಟದವರೆಗೆ ಕಾಮಗಾರಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಮೈಸೂರಿನಿಂದ ಕಾಮಗಾರಿ ಆರಂಭಿಸಲಾಗುವುದು, ಕೇಂದ್ರ ಸರ್ಕಾರ ಸಹ ಈ ಯೋಜನೆಗೆ ಹಣ ಮಂಜೂರು ಮಾಡಿದೆ. ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು ಎಂದರು.
ಇನ್ನು ಕೇಂದ್ರ ಬಜೆಟ್ ಅನ್ನು ನಾನು ನೋಡಿಲ್ಲ, ನೋಡದೇ ಯಾವುದರ ಬಗ್ಗೆಯೂ ಹೇಳುವುದಿಲ್ಲ. ಸದ್ಯ ದೇವೇಗೌಡರು ನನಗೆ ಎರಡು ಕೆಲಸ ಹೇಳಿದ್ದಾರೆ. ಮೈಸೂರು ದಸರಾ ಹಾಗೂ ಪಂಚಲಿಂಗ ದರ್ಶನ ಇದರ ಕುರಿತಾಗಿ ಕಾಮಗಾರಿ ವೀಕ್ಷಣೆಗೆ ತೆರಳುತ್ತಿದ್ದೇನೆ ಎಂದು ಸಚಿವ ರೇವಣ್ಣ ತಿಳಿಸಿದರು.