ETV Bharat / state

ಒಟಿಪಿ ಕೊಡುವ ಮುನ್ನ ಎಚ್ಚರ: ಕೊರೊನಾ ವಾರಿಯರ್ಸ್ ಹೆಸರಿನಲ್ಲಿ ವಂಚನೆ ಸಾಧ್ಯತೆ- ಎಸ್​​ಪಿ ಆರ್. ಚೇತನ್

ಇಷ್ಟು ದಿನ ಸೈಬರ್ ಕಳ್ಳರು ಬ್ಯಾಂಕ್ ಅಧಿಕಾರಿಗಳು ಎಂದು ಹೇಳಿಕೊಂಡು ವಂಚನೆ ಮಾಡುತ್ತಿದ್ದರು. ಆದ್ರೀಗ ಕೊರೊನಾ ವಾರಿಯರ್ಸ್ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದಾರೆ. ಹಾಗಾಗಿ ಸಾರ್ವಜನಿಕರು ಒಟಿಪಿ ಕೊಡುವ ಮುನ್ನ ಎಚ್ಚರಿಕೆಯಿಂದ ಇರಿ ಎಂದು ಮೈಸೂರು ಎಸ್​​​ಪಿ ಆರ್. ಚೇತನ್ ಸಲಹೆ ನೀಡಿದ್ದಾರೆ.

SP R. Chetan
ಎಸ್​​ಪಿ ಆರ್. ಚೇತನ್
author img

By

Published : Jan 20, 2022, 5:40 PM IST

Updated : Jan 20, 2022, 8:23 PM IST

ಮೈಸೂರು: ಸೈಬರ್​​ ಕಳ್ಳರು ಕೊರೊನಾ ವಾರಿಯರ್ಸ್‌, ಆರೋಗ್ಯಾಧಿಕಾರಿಗಳು ಎಂದು ಹೇಳಿಕೊಂಡು ಸಾರ್ವಜನಿಕರಿಗೆ ಕರೆ ಮಾಡುತ್ತಿದ್ದಾರೆ. ಲಸಿಕೆ ನೋಂದಣಿ ಮಾಡಿಕೊಡುತ್ತೇವೆ ಅಂತಾ ಹೇಳಿ, ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ವಿವರಗಳನ್ನ ಪಡೆದು ವಂಚನೆ ಮಾಡುತ್ತಿದ್ದಾರೆ. ಹಾಗಾಗಿ‌ ಸಾರ್ವಜನಿಕರು ಒಟಿಪಿ ಕೊಡುವ ಮುನ್ನ ಎಚ್ಚರಿಕೆಯಿಂದ ಇರಿ ಎಂದು ಎಸ್​​​ಪಿ ಆರ್. ಚೇತನ್ ಸಲಹೆ ನೀಡಿದ್ದಾರೆ.

ಇಷ್ಟು ದಿನ ಸೈಬರ್ ಕಳ್ಳರು ಬ್ಯಾಂಕ್ ಅಧಿಕಾರಿಗಳು ಎಂದು ಹೇಳಿಕೊಂಡು, ನಿಮ್ಮ ಖಾತೆಗೆ ಬಹುಮಾನ ಬಂದಿದೆ. ನಿಮ್ಮ ಬ್ಯಾಂಕ್ ಸಂಖ್ಯೆ ಹೇಳಿ ಎಂದು ನಂಬರ್​​ ತೆಗೆದುಕೊಂಡು ಜನರನ್ನು ವಂಚಿಸಿ, ಅವರ ಖಾತೆಯಿಂದ ಹಣ ಕಳವು ಮಾಡುತ್ತಿದ್ದರು. ಆದರೆ ಈಗ ಕೋವಿಡ್ ಹೆಸರಿನಲ್ಲಿ ಲಸಿಕೆ ನೋಂದಣಿ ಮಾಡಿಕೊಡುತ್ತೇವೆ ಎಂದು ಹೇಳಿ ಒಟಿಪಿ ಮತ್ತು ಬ್ಯಾಂಕ್ ಮಾಹಿತಿ ಪಡೆದು ವಂಚಿಸುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ. ಹಾಗಾಗಿ ಸಾರ್ವಜನಿಕರು ಮೊಬೈಲ್ ಒಟಿಪಿ ಕೊಡುವಾಗ ಎಚ್ಚರ ವಹಿಸಿ‌ ಎಂದು ಎಸ್​​ಪಿ ಸಲಹೆ ನೀಡಿದ್ದಾರೆ.

ಮೈಸೂರು ಎಸ್​​​ಪಿ ಆರ್. ಚೇತನ್

ಇದನ್ನೂ ಓದಿ: ವೀಕೆಂಡ್ ಕರ್ಫ್ಯೂ ವಿರುದ್ಧ ಬಿಜೆಪಿ ನಾಯಕರ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ: ಕಟೀಲ್

ಆರೋಗ್ಯ ಇಲಾಖೆಯಿಂದ ಯಾವುದೇ ಅಧಿಕಾರಿಗಳು ಸಾರ್ವಜನಿಕರಿಗೆ ಕರೆ ಮಾಡಿ ಮಾಹಿತಿ ಪಡೆಯುವುದಿಲ್ಲ. ಜೊತೆಗೆ ಯಾವುದೇ ರೀತಿಯ ಲಿಂಕ್​​ನನ್ನು ಕಳಿಸುವುದಿಲ್ಲ. ಹಾಗಾಗಿ ಇಂತಹ ಕೆರೆಗಳಿಂದ ಮೋಸ ಹೋಗಬೇಡಿ. ಲಸಿಕೆ ಪಡೆಯಲು ಕರ್ನಾಟಕ ಸರ್ಕಾರದ ಅಧಿಕೃತ ವೆಬ್​​ನಿಂದ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಇಲ್ಲವೇ ಮನೆಯ ಬಳಿಯೇ ಆರೋಗ್ಯ ಕಾರ್ಯಕರ್ತರು ಬಂದು ಲಸಿಕೆಯನ್ನು ನೀಡುತ್ತಾರೆ ಅಥವಾ ಆರೋಗ್ಯ ಕೇಂದ್ರಗಳಿಗೆ ಹೋಗಿ ಅಲ್ಲಿ ಲಸಿಕೆ ಹಾಕಿಸಿಕೊಳ್ಳಬಹುದು. ಅಲ್ಲಿಯೂ ಕೇವಲ ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಒಟಿಪಿ ನೀಡಿ. ಲಸಿಕೆ ತೆಗೆದುಕೊಳ್ಳಲು ಬ್ಯಾಂಕ್ ವಿವರ ಅಗತ್ಯವಿಲ್ಲ. ಕೇವಲ ಮೊಬೈಲ್ ನಂಬರ್ ಮತ್ತು ಆಧಾರ್ ಸಂಖ್ಯೆ ಸಾಕು ಎಂದಿದ್ದಾರೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 20, 2022, 8:23 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.