ಮೈಸೂರು: ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆ ಕೆಲ ಅಪರೂಪದ ಘಟನೆಗಳಿಗೆ ಸಾಕ್ಷಿಯಾಗಿದ್ದು, ಕೇವಲ ಐದು ಮತಗಳ ಅಂತರದಿಂದ ಮಂಗಳಮುಖಿಯೊಬ್ಬರು ಗೆಲುವು ಸಾಧಿದ್ದಾರೆ.
ಕೆ.ಆರ್. ನಗರ ತಾಲೂಕು ಸಾಲಿಗ್ರಾಮ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಂಗಳಮುಖಿ ದೇವಿಕಾ ಗೆಲುವಿನ ನಗೆ ಬೀರಿದವರು.
ಪ್ರತಿಸ್ಪರ್ಧಿಯನ್ನು 5 ಮತಗಳ ಅಂತರದಿಂದ ಸೋಲಿಸಿರುವ ಮಂಗಳಮುಖಿ ದೇವಿಕಾ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.