ETV Bharat / state

ಸುತ್ತೂರು ಶ್ರೀಗಳಿಂದ ಮೈಸೂರಿನಲ್ಲಿನ ಕೊರೊನಾ ಪರಿಸ್ಥಿತಿ ಮಾಹಿತಿ​ ಪಡೆದ ಉಪರಾಷ್ಟ್ರಪತಿ

ಕೊರೊನಾ ವೈರಸ್ ಹಿನ್ನೆಲೆ ಮೈಸೂರು ಸುತ್ತಮುತ್ತಲ ಪ್ರದೇಶಗಳ ವಸ್ತುಸ್ಥಿತಿಯ ಬಗ್ಗೆ ಸುತ್ತೂರು ಶ್ರೀಗಳಿಗೆ ಕರೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮಾಹಿತಿ ಪಡೆದಿದ್ದಾರೆ.

Vice-President took Mysore Corona update from suttur Shri
ಸುತ್ತೂರು ಶ್ರೀಗಳಿಂದ ಮೈಸೂರು ಕೊರೊನಾ ಪರಿಸ್ಥಿತಿಯ ಅಪ್ಡೇಟ್​ ಪಡೆದ ಉಪರಾಷ್ಟ್ರಪತಿ
author img

By

Published : May 16, 2020, 10:35 AM IST

ಮೈಸೂರು: ಸುತ್ತೂರು ಮಠದ ಪೀಠಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಅವರಿಗೆ ಮೇ. 14ರಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ದೂರವಾಣಿಯಲ್ಲಿ ಸಂಪರ್ಕಿಸಿ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಮೈಸೂರು ಸುತ್ತಮುತ್ತಲ ಪ್ರದೇಶಗಳ ವಸ್ತುಸ್ಥಿತಿಯ ಬಗ್ಗೆ ಮಾಹಿತಿ ಪಡೆದರು.

ಉಪರಾಷ್ಟ್ರಪತಿಯವರ ಕರೆಗೆ ಪ್ರತಿಕ್ರಿಯಿಸಿದ ಸುತ್ತೂರು ಶ್ರೀಗಳು, ಇಲ್ಲಿ ಎಲ್ಲವೂ ಸಾಮಾನ್ಯ ಸ್ಥಿತಿಗೆ ಮರುಳುತ್ತಿದ್ದು, ಸದ್ಯದಲ್ಲಿಯೇ ಮೈಸೂರು ಹಸಿರು ವಲಯಕ್ಕೆ ಸೇರಲಿದೆ ಎಂದು ತಿಳಿಸಿದರು.

ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಸೂಕ್ತ ತೀರ್ಮಾನಗಳನ್ನು ತೆಗೆದುಕೊಂಡಿದ್ದರ ಪರಿಣಾಮವಾಗಿ ದೇಶದಲ್ಲಿ ಕೊರೊನಾ ವ್ಯಾಪಕವಾಗಿ ಹರಡದೆ ನಿಯಂತ್ರಣಕ್ಕೆ ಬರುತ್ತಿದೆ ಎಂದು ಶ್ರೀಗಳು ಅಭಿನಂದಿಸಿದರು. ಇದೇ ವೇಳೆ ಉಪರಾಷ್ಟ್ರಪತಿಗಳು ರಾಜ್ಯಸಭೆ ಕುರಿತಾಗಿ ಬರೆದಿರುವ ಲೇಖನ ಪತ್ರಿಕೆಗಳಲ್ಲಿ ಪ್ರಕಟವಾಗಿರುವುದರ ಬಗ್ಗೆಯೂ ಶ್ರೀಗಳು ಸಂತೋಷ ವ್ಯಕ್ತಪಡಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.