ETV Bharat / state

ಕರ್ನಾಟಕ ಮುಕ್ತ ವಿವಿ ಕುಲಪತಿ ವಿದ್ಯಾಶಂಕರ್ ರಾಜೀನಾಮೆ ನೀಡಲಿ: ವರುಣಾ ಮಹೇಶ್ - ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದ ಕುಲಪತಿ ವಿದ್ಯಾಶಂಕರ್ ರಾಜೀನಾಮೆಗೆ ಆಗ್ರಹ

ಕುಲಪತಿಯವರಿಗೆ ಶ್ರೀರಕ್ಷೆಯಾಗಿ‌ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್‌ ನಾರಾಯಣ್ ಇದ್ದಾರೆ. ಅವರಿಗೆ ಅಕ್ರಮ‌ ನೇಮಕಾತಿ ನಡೆದಿರುವ ಬಗ್ಗೆ ಮಾಹಿತಿ ತಿಳಿದಿದೆ, ಆದರೂ ಕ್ರಮ ಕೈಗೊಂಡಿಲ್ಲ ಎಂದು ವರುಣಾ ಮಹೇಶ್ ಆರೋಪಿಸಿದರು.

ವರುಣಾ ಮಹೇಶ್ ಆಗ್ರಹ
ವರುಣಾ ಮಹೇಶ್ ಆಗ್ರಹ
author img

By

Published : Jan 5, 2022, 5:41 PM IST

ಮೈಸೂರು: ಭ್ರಷ್ಟಾಚಾರದಲ್ಲಿ ತೊಡಗಿರುವ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ವಿದ್ಯಾಶಂಕರ್ ರಾಜೀನಾಮೆ ನೀಡಬೇಕು‌ ಎಂದು ವರುಣಾ ಮಹೇಶ್ ಆಗ್ರಹಿಸಿದ್ದಾರೆ.

ಈಟಿವಿ ಭಾರತ್‌ ಜೊತೆ ಮಾತನಾಡಿದ ಅವರು, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಹಂಗಾಮಿ ನೌಕರರನ್ನು ಮುಕ್ತ ವಿಶ್ವ ವಿದ್ಯಾನಿಲಯದ 1994 ಆ್ಯಕ್ಟ್ ಪ್ರಕಾರ 6 ತಿಂಗಳ ಕಾಲ ತೆಗೆದುಕೊಳ್ಳಬೇಕು. ಆದರೆ ಅದನ್ನು ಕುಲಪತಿ ವಿದ್ಯಾಶಂಕರ್ ಉಲ್ಲಂಘಿಸಿ 2 ರಿಂದ 4 ವರ್ಷ ಅವಧಿಗೆ ಸುಮಾರು 200 ಜನ ಹಂಗಾಮಿ ನೌಕರರನ್ನು ತೆಗೆದುಕೊಂಡಿದ್ದಾರೆ.‌ ಇದರ ಬಗ್ಗೆ ಎಲ್ಲಿಯೂ ಪ್ರಕಟಣೆ ಮಾಡಿಲ್ಲ. ಸರ್ಕಾರದಿಂದ ಅನುಮತಿ ಪಡೆಯದೆ ಹಣ ಮಾಡುವ ಉದ್ದೇಶದಿಂದ ಅವಶ್ಯಕತೆ ಇಲ್ಲದಿದ್ದರೂ 200 ಜನ ಹಂಗಾಮಿ ನೌಕರರನ್ನು ನೇಮಕ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಆರ್​​ಟಿಒದವರು ಹಳೆ ಕಾರುಗಳು 2030 ರವರೆಗೂ ಇದೆ ಎಂದು ಹೇಳಿದ್ದಾರೆ. ಕಾರುಗಳನ್ನು ಹರಾಜು ಮಾಡಲು ಪತ್ರಿಕೆಯಲ್ಲಿ ಪ್ರಕಟಣೆ ಹೊರಡಿಸಿ. ಕುಲಪತಿಯವರು 2 ಹಾಗೂ ರಿಜಿಸ್ಟ್ರಾರ್ 1 ಇನ್ನೊವಾ ಕಾರು ಖರೀದಿಸಿದ್ದಾರೆ. ಇದರ ಜೊತೆಯಲ್ಲಿ 33 ಜನರಿಗೆ ಮುಂಬಡ್ತಿ ನೀಡಿದ್ದಾರೆ. ಸರ್ಕಾರದವರು ಇದಕ್ಕೆ ನೋಟಿಸ್ ನೀಡಿದ್ದರೂ ಪ್ರತಿಕ್ರಿಯೆ ನೀಡಿಲ್ಲ ಇದು ಅಕ್ರಮ, ಕಾನೂನು ಉಲ್ಲಂಘನೆ. ಈ ರೀತಿಯಾಗಿ ಭ್ರಷ್ಟಾಚಾರದಲ್ಲಿ ಮುಳುಗಿರುವ ಕುಲಪತಿ ವಿದ್ಯಾಶಂಕರ್ ರಾಜೀನಾಮೆ ನೀಡಬೇಕು ಎಂದರು.

ಕುಲಪತಿ ವಿರುದ್ಧ ಎಫ್ಐಆರ್ ದಾಖಲಾಗಿದ್ದರೂ ಜನವರಿ 3 ರಂದು ರಾಮನಗರದ ತಿಪ್ಪಸಂದ್ರದಲ್ಲಿ ನಡೆದ ಸಂಸ್ಕೃತ ಅಧ್ಯಯನ ಪೀಠ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರ ಜೊತೆ ಭಾಗವಹಿಸಿದ್ದಾರೆ ಇದೆಷ್ಟು ಸರಿ?. ಒಬ್ಬ ಕ್ರಿಮಿನಲ್ ಅಪರಾಧ ಇರುವವರು ಮುಖ್ಯಮಂತ್ರಿಯವರ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರ ಘನತೆಗೆ ಅವಮಾನ ಮಾಡಿದ್ದಾರೆ ಎಂದು ದೂರಿದರು.

ವೈಫೈಗೆ ಎಂದು 5.88 ಕೋಟಿಯನ್ನು ಟೆಂಡರ್ ಕೂಗಿ ಹಣ ನೀಡುವ ಹಂತದಲ್ಲಿ ಇದೆ. ಸುಮಾರು 1 ಕಿಮೀ ಸುತ್ತಳತೆ ಇರುವ ವಿಶ್ವವಿದ್ಯಾನಿಲಯಕ್ಕೆ ಇಷ್ಚೊಂದು ಹಣ ವೈಫೈಗೆ ಅವಶ್ಯಕತೆ ಇದೆಯಾ?. 15 ರಿಂದ 29 ಲಕ್ಷ ಹಣ ಖರ್ಚಾಗುವ ಜಾಗದಲ್ಲಿ 5.88 ಕೋಟಿ ಟೆಂಡರ್ ಕೂಗಿದ್ದಾರೆ. ವಿಶ್ವವಿದ್ಯಾನಿಲಯಗಳಲ್ಲಿ ಇರುವ ನೂರು ಜನ ಸಿಬ್ಬಂದಿಗಳಲ್ಲಿ ಅಣ್ಣ ತಮ್ಮಂದಿರು ಅಕ್ಕ ತಂಗಿಯರ ಮಕ್ಕಳನ್ನು ತುಂಬಿಕೊಂಡಿದ್ದಾರೆ ಎಂದು ಆರೋಪಿಸಿದರು.

ಕುಲಪತಿಗೆ ಶ್ರೀರಕ್ಷೆಯಾಗಿ ಉನ್ನತ ಶಿಕ್ಷಣ ಸಚಿವರು:

ಕುಲಪತಿಯವರಿಗೆ ಶ್ರೀರಕ್ಷೆಯಾಗಿ‌ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್‌ ನಾರಾಯಣ್ ಇದ್ದಾರೆ. ಅವರಿಗೆ ಅಕ್ರಮ‌ ನೇಮಕಾತಿ ನಡೆದಿರುವ ಬಗ್ಗೆ ಮಾಹಿತಿ ತಿಳಿದಿದೆ, ಆದರೂ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.