ಮೈಸೂರು: ದಸರಾಗಷ್ಟೇ ಸೀಮಿತವಾಗಿ ಪ್ರವಾಸಿಗರನ್ನು ಸೆಳೆಯುತ್ತಿದ್ದ ವರುಣಾ ಕೆರೆ, ಇನ್ಮುಂದೆ ವರ್ಷಪೂರ್ತಿ ಪ್ರವಾಸಿಗರಿಗೆ ಮುಕ್ತವಾಗಲಿದೆ.
ದಸರಾ ಮಹೋತ್ಸವದ ವೇಳೆ 9 ದಿನಗಳ ಕಾಲ ಮೈಸೂರಿನಲ್ಲಿ ಕಾರ್ಯಕ್ರಮಗಳು ಜರುಗುತ್ತವೆ. ಈ ವೇಳೆ ವರುಣಾ ಕೆರೆಯಲ್ಲಿ ಕೂಡ ಬೋಟಿಂಗ್, ಜಲಕ್ರೀಡೆಗಳು ನಡೆಯುತ್ತವೆ. ಆದರೆ ದಸರಾ ಮುಗಿದ ಕೂಡಲೇ ವರುಣಾ ಕೆರೆಗೆ ಬರುವ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ, ಮೀನುಗಾರಿಕೆಗೆ ಅನುವು ಮಾಡಿಕೊಡಲಾಗುತ್ತಿತ್ತು.
ಆದರೆ ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಮೈಸೂರಿನಲ್ಲಿ ಹೆಚ್ಚಳವಾಗುತ್ತಿರುವುದರಿಂದ, ಪ್ರವಾಸಿಗರನ್ನು ವರುಣಾ ಕೆರೆಯತ್ತ ಸೆಳೆಯಲು ವರ್ಷಪೂರ್ತಿ ಬೋಟಿಂಗ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಮೈಸೂರು-ತಿ.ನರಸೀಪುರ ಮಾರ್ಗವಾಗಿ ಚಾಮರಾಜನಗರ, ಮಂಡ್ಯ, ಬೆಂಗಳೂರು ಸೇರಿದಂತೆ ಇತರ ಜಿಲ್ಲೆಗಳಿಗೆ ಸಂಚರಿಸುವ ಪ್ರವಾಸಿಗರು, ವರುಣಾ ಕೆರೆಯಲ್ಲಿ ನಡೆಯುವ ಬೋಟಿಂಗ್ ನೋಡಿ ಆಕರ್ಷಿತರಾಗುತ್ತಿದ್ದಾರೆ.
ಓದಿ: ಸ್ತನ ಕ್ಯಾನ್ಸರ್ಗೆ ಔಷಧಿ ಅಭಿವೃದ್ಧಿ ಪಡಿಸಿದ ಮೈಸೂರು ವಿವಿಯ ಡಾ.ಬಸಪ್ಪ
ವರ್ಷ ಪೂರ್ತಿ ಬೋಟಿಂಗ್ ವ್ಯವಸ್ಥೆ ಮಾಡಿರುವುದರಿಂದ ಪ್ರವಾಸಿಗರು ವರುಣಾ ಕೆರೆಗೆ ಆಗಮಿಸುತ್ತಿದ್ದಾರೆ. ಇದರಿಂದ ಅಲ್ಲಿನ ಸುತ್ತಮುತ್ತಲ ಸಣ್ಣ ವ್ಯಾಪಾರಿಗಳಿಗೆ ಅನುಕೂಲವಾಗುತ್ತಿದೆ.