ETV Bharat / state

ಮೈಸೂರಿಗೆ ತಲುಪಿದ ವಂದೇ ಭಾರತ್​ ಎಕ್ಸ್​ಪ್ರೆಸ್​: ಜರ್ನಿ ಚೆನ್ನಾಗಿತ್ತು ಎಂದ ಪ್ರಯಾಣಿಕರು - ಮೈಸೂರು ರೈಲ್ವೆ ನಿಲ್ದಾಣ

ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಮೊದಲ ಪ್ರಯಾಣವನ್ನು ಪ್ರಯಾಣಿಕರೊಂದಿಗೆ ಚೆನ್ನೈನಿಂದ ಬೆಳಗ್ಗೆ 5.50ಕ್ಕೆ ಹೊರಟು ಬೆಂಗಳೂರನ್ನು 10 ಗಂಟೆಗೆ ತಲುಪಿ, ಬೆಂಗಳೂರಿನಿಂದ ಮೈಸೂರನ್ನು 12.5 ನಿಮಿಷಕ್ಕೆ ತಲುಪಿದೆ.

Vande Bharat Express reached Mysore
ಮೈಸೂರಿಗೆ ತಲುಪಿದ ವಂದೇ ಭಾರತ್​ ಎಕ್ಸ್​ಪ್ರೆಸ್​
author img

By

Published : Nov 12, 2022, 6:11 PM IST

Updated : Nov 12, 2022, 7:44 PM IST

ಮೈಸೂರು: ಇಂದು ಮೈಸೂರಿಗೆ ಮೊದಲ ಬಾರಿಗೆ ಪ್ರಯಾಣಿಕರೊಂದಿಗೆ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಆಗಮಿಸಿದ್ದು, ಈ ರೈಲಿನಲ್ಲಿ ಪ್ರಯಾಣ ಬೆಳೆಸಿದ ಪ್ರಯಾಣಿಕರನ್ನು ಬಿಜೆಪಿ ಕಾರ್ಯಕರ್ತರು, ಮೈಸೂರು ರೈಲ್ವೆ ನಿಲ್ದಾಣದಲ್ಲಿ ಮೋದಿ ಹಾಗೂ ಪ್ರತಾಪ್ ಸಿಂಹ ಭಾವಚಿತ್ರ ಹಿಡಿದು ಸ್ವಾಗತಿಸಿದರು. ಈ ವೇಳೆ, ರೈಲು ಪ್ರಯಾಣ ತುಂಬಾ ಚೆನ್ನಾಗಿದೆ ಎಂದು ಪ್ರಯಾಣಿಕರು ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ.

ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಬೆಂಗಳೂರಿನಲ್ಲಿ ವಿದ್ಯುಕ್ತವಾಗಿ ಚಾಲನೆಯಾದ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಮೊದಲ ಪ್ರಯಾಣವನ್ನು ಪ್ರಯಾಣಿಕರೊಂದಿಗೆ ಚೆನ್ನೈನಿಂದ ಬೆಳಗ್ಗೆ 5.50ಕ್ಕೆ ಹೊರಟು ಬೆಂಗಳೂರನ್ನು 10 ಗಂಟೆಗೆ ತಲುಪಲಿದೆ. ಅಲ್ಲಿಂದ 10; 05ಕ್ಕೆ ಬೆಂಗಳೂರಿನಿಂದ ಹೊರಡುವ ರೈಲು ಮೈಸೂರನ್ನು 12 ಗಂಟೆ 5 ನಿಮಿಷಕ್ಕೆ ತಲುಪಿದೆ. ನಿಗದಿಯಾದ ಸಮಯಕ್ಕಿಂತ 15 ನಿಮಿಷ ಮುಂಚಿತವಾಗಿ ಮೈಸೂರು ರೈಲ್ವೆ ನಿಲ್ದಾಣಕ್ಕೆ ವಂದೇ ಭಾರತ್ ಎಕ್ಸ್​ಪ್ರೆಸ್ ಮೈಸೂರು ತಲುಪಿತು.

ಮೈಸೂರಿಗೆ ತಲುಪಿದ ವಂದೇ ಭಾರತ್​ ಎಕ್ಸ್​ಪ್ರೆಸ್​

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾ ಯೋಜನೆಯ ರೈಲಾದ ವಂದೇ ಭಾರತ್ ಎಕ್ಸ್​ಪ್ರೆಸ್​, ದೇಶದ ಐದನೇ ಹಾಗೂ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್​ಪ್ರೆಸ್ ಆಗಿದೆ. ಈ ಎಕ್ಸ್​ಪ್ರೆಸ್ ರೈಲು ಒಟ್ಟು 16 ಬೋಗಿಗಳನ್ನು ಹೊಂದಿದ್ದು, ಆಟೋಮ್ಯಾಟಿಕ್ ತಂತ್ರಜ್ಞಾನದ ಬಾಗಿಲುಗಳು, ವಿಶಿಷ್ಟ ರೀತಿಯ ಆಸನ ವ್ಯವಸ್ಥೆಯನ್ನು ಹೊಂದಿದೆ.

ಇದನ್ನೂ ಓದಿ: ವಂದೇ ಭಾರತ್ ಎಕ್ಸ್‌ಪ್ರೆಸ್‌, ಕಾಶಿ ದರ್ಶನ ವಿಶೇಷ ರೈಲಿಗೆ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಚಾಲನೆ

Last Updated : Nov 12, 2022, 7:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.