ETV Bharat / state

ಸಿದ್ದರಾಮಯ್ಯ ವರುಣಾ ಕ್ಷೇತ್ರ ಅಭಿವೃದ್ಧಿ ಮಾಡಿದ್ದರೆ ಕೈ ಮುಗಿದು ನಾ ಹೊರಟು ಹೋಗುವೆ: ವಿ ಸೋಮಣ್ಣ ವ್ಯಂಗ್ಯ - ಈಟಿವಿ ಭಾರತ್ ಕನ್ನಡ ಸುದ್ದಿ

ವರುಣಾ ಕ್ಷೇತ್ರದಲ್ಲಿ ಎಲ್ಲವೂ ಸರಿಯಾಗಿದೆ, ನೂರಕ್ಕೆ ನೂರರಷ್ಟು ಕೆಲಸಗಳನ್ನು ಮಾಡಿದ್ದಾರೆ ಎಂದು ಮತದಾರರು ಹೇಳಿದರೆ ನಾನು ಈಗಲೇ ಕೈಮಗಿದು ಹೊರಟು ಹೋಗುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಅವರು ಹೇಳಿದ್ದಾರೆ.

ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ
ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ
author img

By

Published : Apr 26, 2023, 6:06 PM IST

ಮೈಸೂರು : ವರುಣಾ ಕ್ಷೇತ್ರವನ್ನು ಒಬ್ಬ ಮುಖ್ಯಮಂತ್ರಿ ಕ್ಷೇತ್ರ ಎಂದು ಹೇಳಿದರೆ ನಾನೇ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಅವರು ಸಿದ್ದರಾಮಯ್ಯಗೆ ಸವಾಲು ಹಾಕಿದರು.

ವರುಣಾ ವಿಧಾನಸಭಾ ಕ್ಷೇತ್ರದ ಕಾರ್ಯ ಗ್ರಾಮದಲ್ಲಿ ಮಾತನಾಡಿದ ಅವರು, ತುಂಬಾ ವರ್ಷಗಳಿಂದ ಈ ಕ್ಷೇತ್ರದ ಜನರು ನೋವನ್ನು ಅನುಭವಿಸುತ್ತಿದ್ದಾರೆ. ನನ್ನನ್ನು ವರುಣಾ ಕ್ಷೇತ್ರಕ್ಕೆ ಯಾಕೆ ಹೋದ್ರಿ ಎಂದು ಕೇಳುತ್ತಾರೆ? ಸಿದ್ದರಾಮಯ್ಯ ಅವರು ಕೊಪ್ಪಳ ಬಾದಾಮಿಗೆ ಯಾಕೆ ಹೋಗಿದ್ರು? 13 ಸಾರಿ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಿದರು. ಐದು ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಹಣಕಾಸಿನ ಸಚಿವರು ಕೂಡ ಅವರೇ ಆಗಿದ್ದರು.‌ ಈ ವರುಣಾ ಕ್ಷೇತ್ರವನ್ನು ಒಬ್ಬ ಮುಖ್ಯಮಂತ್ರಿ ಆಗಿದ್ದವರ ಕ್ಷೇತ್ರ ಅಂತಾ ಯಾರಿಗೂ ಅನ್ನಿಸಲ್ಲ ಎಂದರು.

ಇದನ್ನೂ ಓದಿ: ಕೇಂದ್ರದ ಯೋಜನೆಗಳಲ್ಲಿ ಮುಸಲ್ಮಾನರನ್ನು ಹೊರಗಿಟ್ಟಿದ್ದು ತೋರಿಸಿದರೆ ರಾಜಕೀಯ ನಿವೃತ್ತಿ: ರಾಜೀವ್ ಚಂದ್ರಶೇಖರ್ ಸವಾಲು

ನನಗೆ ಐದು ವರ್ಷ ಅವಕಾಶ ಕೊಡಿ: ರಾಜ್ಯ ರಾಜಕೀಯದಲ್ಲಿ ಪ್ರತಿಷ್ಠೆಯ ಕಣವಾಗಿರುವ ಈ ಕ್ಷೇತ್ರದಲ್ಲಿ ಎಲ್ಲವೂ ಸರಿಯಾಗಿದೆ. ನೂರಕ್ಕೆ ನೂರರಷ್ಟು ಕೆಲಸಗಳನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾಡಿದ್ದಾರೆ ಎಂದು ಮತದಾರರು ಹೇಳಿದರೆ ನಾನು ಇಲ್ಲಿಂದ ಕೈಮುಗಿದು ಹೊರಟು ಹೋಗುತ್ತೇನೆ.‌ ಸಿದ್ದರಾಮಯ್ಯ ಮನಸು ಮಾಡಿದರೆ ಒಂದು ಲಕ್ಷ ಉದ್ಯೋಗ ಸೃಷ್ಟಿ ಮಾಡಬಹುದಿತ್ತು. ಆದರೆ, ಮಾಡಲಿಲ್ಲ. ನನಗೆ ಬೇಕಾಗಿರುವುದು ಮುಖ್ಯಮಂತ್ರಿ ಸ್ಥಾನ ಅಲ್ಲ, ಆ ಕ್ಷೇತ್ರದ ಅಭಿವೃದ್ಧಿ ಎಂದು ಸಿದ್ದರಾಮಯ್ಯಗೆ ಸೋಮಣ್ಣ ಟಾಂಗ್ ನೀಡಿದ್ರು. ವರುಣಾ ಕ್ಷೇತ್ರ ಮತ್ತೊಂದು ಗೋವಿಂದ ನಗರ ಆಗಬೇಕು. ಅದಕ್ಕೋಸ್ಕರ ನಾನು ಈ ಕ್ಷೇತ್ರಕ್ಕೆ ಬಂದಿದ್ದೇನೆ. 15 ವರ್ಷ ಅವರಿಗೆ ಕೊಟ್ಟಿದ್ದೀರಿ. ನನಗೆ ಐದು ವರ್ಷ ಕೊಡಿ ಎಂದು ಬಿಜೆಪಿ ಅಭ್ಯರ್ಥಿ ಸೋಮಣ್ಣ ಬೇಡಿಕೊಂಡಿದ್ದಾರೆ.

ಇದನ್ನೂ ಓದಿ : ಹೊಸಕೋಟೆಯಲ್ಲಿ ಕಿಡಿಗೇಡಿಗಳಿಂದ ಶಾಸಕರ ಪತ್ನಿ ಕಾರು ದ್ವಂಸ.. ಘಟನೆ ಖಂಡಿಸಿ ಶರತ್​ ಬಚ್ಚೇಗೌಡ ಕಾಲ್ನಡಿಗೆ ಜಾಥ

ಕಾರ್ಯ ಗ್ರಾಮದ ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ: ನಂಜನಗೂಡು ತಾಲೂಕಿನ ವರುಣಾ ವಿಧಾನಸಭಾ ಕ್ಷೇತ್ರದ ಕಾರ್ಯ ಗ್ರಾಮದ ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯಕ್ಕೆ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಅವರು ಭೇಟಿ ನೀಡಿದ್ದರು.

ಗ್ರಾಮದ ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯಕ್ಕೆ ಆಗಮಿಸಿ ಶ್ರೀ ಸಿದ್ದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಕಾರ್ಯ, ತಗಡೂರು, ನಗರ್ಲೆ ವಿವಿಧ ಗ್ರಾಮಗಳಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು. ಮಾಜಿ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಕಾಪು ಸಿದ್ದಲಿಂಗಸ್ವಾಮಿ, ಮಾಜಿ ಜಿಪಂ ಸದಸ್ಯ ಸದಾನಂದ, ಮಾಜಿ ಜಿ.ಪಂ ಅಧ್ಯಕ್ಷ ಕಾಪು ಸಿದ್ದವೀರಪ್ಪ, ಸೇರಿದಂತೆ ಹಲವು ಬಿಜೆಪಿ ಮುಖಂಡರು ಸಾಥ್ ನೀಡಿದರು.

ಇದನ್ನೂ ಓದಿ : ಡಿ. ಕೆ. ಶಿವಕುಮಾರ್ ರಕ್ತದಲ್ಲಿ ಬರೆದುಕೊಡುವುದು ಬೇಡ, ಪಾಪ ರಕ್ತದ ಕೊರತೆ ಆದ್ರೆ ಕಷ್ಟ : ಕುಮಾರಸ್ವಾಮಿ ವ್ಯಂಗ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.